ಹಂಪಿ (ಹೊಸಪೇಟೆ): ಬಿಸಿಲಿನ ತಾಪ ಹೆಚ್ಚುತ್ತಿದಂತೆ ಇತ್ತ ಕಮಲಾಪುರದ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳು ನೋಡುಗರ ಮೈನವಿರೇಳಿಸಿದವು.

ಬಳ್ಳಾರಿಯ ನೊಪಾಸನಾ ಅಡ್ವೆಂಚರ್ಸ್ ತಂಡದ ಜಲ ಸಾಹಸ ಕ್ರೀಡೆಗಳ ಪ್ರದರ್ಶನ ಕೆರೆಯತ್ತ ಕ್ರೀಡಾ ಪ್ರಿಯರನ್ನು ಕೈ ಬೀಸಿ ಕರೆಯುತ್ತಿತ್ತು.

ಸ್ಕೂಬಾ, ಸ್ಪೀಡ್ ಬೋಟ್, ವಾಟರ್ ಸ್ಕೂಟರ್ ರೈಡ್ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಿಸಿದರೆ, ಪೆಡಲಿಂಗ್, ವಾಟರ್ ಸರ್ಪ್ ಪ್ರದರ್ಶನಗಳು ನೆರೆದವರನ್ನು ರೋಮಾಂಚನಗೊಳಿಸಿತು. ಇತರ ಪ್ರದರ್ಶನಗಳು ಮುದ ನೀಡಿದವು.

ಬಿರು ಬಿಸಿಲಿನ ನಡುವೆ ಬೋಟಿಂಗ್ ಮಾಡಿ ಜನತೆ ಖುಷಿ ಪಟ್ಟು, ಫೋಟೊ ಕ್ಲಿಕ್ಕಿಸಿಕೊಂಡರು. ನಿಗದಿತ ಸಮಯಕ್ಕೂ ತಡವಾಗಿ ಆರಂಭವಾಗಿದ್ದರಿಂದ ಕೆಲ ಕ್ರೀಡಾ ಪ್ರಿಯರು ಬೆಳಿಗ್ಗೆಯೇ ಭೇಟಿ ನೀಡಿ ನಿರಾಸೆಯಿಂದ ಹಿಂತಿರುಗಿದರು.

ಬೋಟ್ ನಲ್ಲಿ ಸಂಚರಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ, ಪ್ರವಾಸ್ಯೋದ್ಯಮ ಸಚಿವ ಆನಂದ್ ಸಿಂಗ್ ಕ್ರೀಡೆಗಳಿಗೆ ಚಾಲನೆ ನೀಡಿದರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದರು.

ವಾಟರ್ ಸರ್ಪ್, ವಾಟರ್ ಸ್ಕೂಟರ್, ಸ್ಪೀಡ್ ಬೋಟ್ ಗಳಲ್ಲಿ ಸಂಚರಿಸಲು ₹50 ದರ ನಿಗದಿಪಡಿಸಲಾಗಿದೆ. ಉಳಿದಂತೆ ಬೋಟಿಂಗ್, ಮೋಟಾರ್ ಬೋಟ್, ರೋಹಿಂಗ್ ಬೋಟ್, ಕೊರೆಕಲ್, ಪೆಡಲಿಂಗ್, ಬನಾನ ಸಂಚಾರಕ್ಕೆ ₹20 ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.