ಹಗರಿಬೊಮ್ಮನಹಳ್ಳಿ (ವಿಜಯನಗರ): ತಾಲ್ಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ ಚುಚ್ಚುಮದ್ದಿನ ಅಡ್ಡಪರಿಣಾಮದಿಂದಾಗಿ ₹ 1 ಲಕ್ಷ ಬೆಲೆ ಬಾಳುವ ಎರಡು ಎತ್ತುಗಳು ಶುಕ್ರವಾರ ಮೃತಪಟ್ಟಿವೆ.

ಎತ್ತುಗಳಿಗೆ ಬಾಧಿಸಿದ ಉಣ್ಣೆ ನಿಯಂತ್ರಿಸಲು ಚುಚ್ಚುಮದ್ದು ನೀಡಲಾಗಿತ್ತು. ಗ್ರಾಮದ ರೈತ ಶಿವಕುಮಾರ್ ಎನ್ನುವವರು ತಮ್ಮ ಎತ್ತುಗಳಿಗಾಗಿ ಪಟ್ಟಣದ ಖಾಸಗಿ ಔಷಧ ಅಂಗಡಿಯಲ್ಲಿ ಚುಚ್ಚುಮದ್ದು ಖರೀದಿಸಿದ್ದರು. ಬಾಚಿಗೊಂಡನಹಳ್ಳಿ ಸರ್ಕಾರಿ ಪಶು ಆಸ್ಪತ್ರೆ ವೈದ್ಯರು ಎರಡು ಎತ್ತುಗಳಿಗೆ ಚುಚ್ಚುಮದ್ದು ನೀಡಿದ್ದರು. ಇದಾಗಿ ಕೇವಲ 10 ನಿಮಿಷದಲ್ಲಿ ಎತ್ತುಗಳು ಸಾವನ್ನಪ್ಪಿವೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

‘ಚುಚ್ಚುಮದ್ದು ನೀಡಿದ್ದರಿಂದಲೇ ಎತ್ತುಗಳು ಸಾವನ್ನಪ್ಪಿವೆ. ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕೆಲವು ಅಂಗಗಳು ಮತ್ತು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಚುಚ್ಚುಮದ್ದು ಸರಬರಾಜು ಮಾಡಿರುವ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದು ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.