ರಾಜ್ಯದ ನಾನಾ ಭಾಗಗಳಲ್ಲಿ ಕನಕದಾಸರ ಅಧ್ಯಯನಕ್ಕೆ ಪೀಠಗಳು ಕೇಂದ್ರಗಳನ್ನು ತೆರೆಯಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲೂ ಹಾಲುಮತ ಅಧ್ಯಯನ ಪೀಠ ಇದೆ. ಆದರೆ ವಿಶ್ವವಿದ್ಯಾಲಯ ಕ್ಯಾಂಪಸ್ ಬಳಿಯಲ್ಲೇ ಪಿ.ಕೆ.ಹಳ್ಳಿ ರಸ್ತೆಯ ಬದಿಯಲ್ಲೇ 80 ಎಕರೆ ನಿವೇಶನವನ್ನು ಕನಕದಾಸರ ಅಧ್ಯಯನಕ್ಕೆಂದೇ ಸರ್ಕಾರ ಮೀಸಲಿಟ್ಟಿದೆ. ಅಧ್ಯಾತ್ಮಕ ಬೆಳಕನ್ನು ನೀಡಿದ ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಮಹತ್ವ ಸಾರುವಂತಹ ಅದ್ಭುತ ಥೀಂ ಪಾರ್ಕ್ ಈಗಾಗಲೇ ನಿರ್ಮಾಣವಾಗಬೇಕಿತ್ತು. ಸಮುದಾಯದ ದೊಡ್ಡ ನಾಯಕರಾದ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಕನಕದಾಸರನ್ನು ಸದಾ ನೆನಪಲ್ಲಿ ಇಡುವಂತಹ ಪ್ರಯತ್ನ ಇಲ್ಲಿ ಇನ್ನೂ ಆಗದಿದುರವುದಕ್ಕೆ ಹಲವು ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆ.