ಕಾನಹೊಸಹಳ್ಳಿ: ಸಮೀಪದ ಹುಲಿಕೆರೆ ಕೆರೆ ಐದು ದಶಕದ(55 ವರ್ಷ) ನಂತರ ಶುಕ್ರವಾರ ರಾತ್ರಿ ಕೋಡಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ಕಲ್ಯಾಣಿ ಚಾಲುಕ್ಯರ ಕಾಲಘಟ್ಟದಲ್ಲಿ ಕಟ್ಟಿಸಿದ ಕೆರೆ ಹುಲಿಕೆರೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜೀವನಾಡಿಯಾಗಿದೆ. ಐದು ದಶಕಗಳ ಹಿಂದೆ ಕೋಡಿಬಿದ್ದು ನೀರು ಹರಿದಿತ್ತು. ಅದಾದ ನಂತರದಲ್ಲಿ 1990ರಲ್ಲಿ ಕೆರೆ ತುಂಬುವ ಹಂತಕ್ಕೆ ಬಂದಿತ್ತು. ನಂತರ 2006/ 2014 ರಲ್ಲೂ ಸಾಕಷ್ಟು ನೀರು ಬಂದಿತ್ತಾದರೂ ಕೋಡಿ ಬಿದ್ದಿರಲಿಲ್ಲ. ಕಳೆದ ಒಂದು ಎರಡು ವಾರಗಳಿಂದ ಹುಲಿಕೆರೆ ಸೇರಿದಂತೆ ಕೆರೆಯ ಜಲಾನಯ ಪ್ರದೇಶವಾದ ಹಿರೇಕುಂಬಳಗುಂಟೆ, ಹನುಮವ್ವನಾಗತಿಹಳ್ಳಿ, ದಾಸರೋಬನಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಕೆರೆ ಕೋಡಿ ಬಿದ್ದಿದೆ.

ಕೋಡಿ ಬಿದ್ದಿರುವ ಕೆರೆ ನೋಡಲು ಹುಲಿಕೆರೆ ಸೇರಿದಂತೆ ಕಾನಾಹೊಸಹಳ್ಳಿ, ಆಲೂರು, ಕಾನಾಮಡುಗು, ಸಕಲಾಪುರದಹಟ್ಟಿ, ಯಂಬಳಿ, ಸೇರಿದಂತೆ ಸುತ್ತಲಿನ ಹಳ್ಳಿಯ ಜನರು ಕೆರೆಯನ್ನು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.