ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್ ನೇತೃತ್ವದ ತಜ್ಞರ ತಂಡ ಸೆಪ್ಟೆಂಬರ್ 20ರಂದು ತನ್ನ ವರದಿ ನೀಡಿತ್ತು. ಎಲ್ಲ 33 ಗೇಟ್‌ಗಳನ್ನೂ ಬದಲಿಸಿ ಹೊಸ ಗೇಟ್ ಅಳವಡಿಸಲು ಸಲಹೆ ನೀಡಿತ್ತು. ಅದರಂತೆ ನವೆಂಬರ್ 5ರಂದು ಮಂಡಳಿಯ ಅಧ್ಯಕ್ಷ ಎಸ್.ಎನ್.ಪಾಂಡೆ ಅವರು ಅಣೆಕಟ್ಟೆಗೆ ಭೇಟಿ ನೀಡಿದ್ದರು. ಇದೀಗ ಮಹತ್ವದ ಸಭೆ ನಡೆಸುವ ಮೂಲಕ ಮುಂದಿನ ಮಳೆಗಾಲಕ್ಕೆ ಮೊದಲಾಗಿಯೇ ಕೆಲವು ಹೊಸ ಕ್ರಸ್ಟ್‌ಗೇಟ್ ಅಳವಡಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ.