ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಉತ್ತರ ಕರ್ನಾಟಕದ 14 ಕ್ಷೇತ್ರಗಳು ಸಜ್ಜಾಗುತ್ತಿದ್ದು, ಮಧ್ಯಾಹ್ನದ ಏರುಬಿಸಿಲಲ್ಲೇ ಚುನಾವಣಾ ಪ್ರಚಾರ ಮುಂದುವರೆದಿದೆ.

ಬಳ್ಳಾರಿ–ವಿಜಯನಗರ ಭಾಗದಲ್ಲಿ ಬುಧವಾರ 42 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಬೆಳಿಗ್ಗೆ 11 ರಿಂದ ಸಂಜೆ 4ರವರೆಗೆ ಪ್ರಚಾರ ಸಭೆಗಳಿಗೆ ಜನ ಹೋಗಲಾಗದ ಸ್ಥಿತಿ ಇದೆ. ಹೀಗಾಗಿ ಪ್ರಚಾರ ಸಭೆಗಳಿಗೆ ಬರುವ ಜನರ ಸಂಖ್ಯೆ ಕಡಿಮೆ ಆಗಿದೆ.

‘ಸಂಜೆಯ ಪ್ರಚಾರ ಸಭೆಗಳಿಗೆ ಜನ ಬರುತ್ತಾರೆ. ಮಧ್ಯಾಹ್ನದ ಪ್ರಚಾರ ಸಭೆಗಳಿಗೆ ಜನರನ್ನು ಸೇರಿಸಲು ಕಷ್ಟವಾಗುತ್ತದೆ’ ಎಂದು ಪಕ್ಷಗಳ ಮುಖಂಡರು ತಿಳಿಸಿದರು.

‘ಬಿಸಿಲಿನಿಂದ ಜನರಿಗೆ ತೊಂದರೆ ಆಗದಿರಲಿಯೆಂದು ನಾವು ಹಗಲಿನಲ್ಲಿ ಸಭೆ, ಸಮಾರಂಭ ಮಾಡುತ್ತಿಲ್ಲ. ಬೆಳಿಗ್ಗೆ 8.30 ರಿಂದ 10ರವರೆಗೆ ಮತ್ತು ಸಂಜೆ 4.30 ರಿಂದ 7ರ ನಡುವೆ ಜನರನ್ನು ಸೇರಿಸಿ ಪ್ರಚಾರ ಮಾಡುತ್ತಿದ್ದೇವೆ’ ಎಂದು ವಿಜಯನಗರ ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ನಿಂಗಬಲ್ ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಸಿಲು ಎಂಬ ಕಾರಣಕ್ಕೆ ನಾವು ಪ್ರಚಾರ ಕಡಿಮೆಗೊಳಿಸಿಲ್ಲ. ಆದರೂ ಮಧ್ಯಾಹ್ನದ ಬಿರು ಬಿಸಿಲಲ್ಲಿ ಜನರನ್ನು ಸೇರಿಸಿ ಅವರಿಗೆ ತೊಂದರೆ ಕೊಡುತ್ತಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.