ಹೊಸಪೇಟೆ (ವಿಜಯನಗರ): ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಅವರಿಗೆ ಗೌರವ ಸಲ್ಲಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದ ಸಾರಿಗೆ ಸಂಸ್ಥೆ ಇದೀಗ ತನ್ನ ತಪ್ಪು ಸರಿಪಡಿಸಿಕೊಂಡಿದೆ.

ಕಲ್ಯಾಣ ಕರ್ನಾಟಕ ಸಾರಿಗೆಯ ಸಂಸ್ಥೆ ಹೊಸಪೇಟೆ ವಿಭಾಗದ ಸಂಡೂರು ಘಟಕದಲ್ಲಿ ಸಂಚರಿಸುವ ಬಸ್‌ಗಳಲ್ಲಿ ವಿತರಿಸುವ ಟಿಕೆಟ್‌ಗಳ ಮೇಲೆ ಪದ್ಮಶ್ರೀ ಪುರಸ್ಕೃತ 'ಜಯನಗರ ಜಿಲ್ಲೆಯ ತೃತೀಯ ಲಿಂಗಿ ಮಾತ ಮಂಜಮ್ಮ ಜೋಗತಿರವರಿಗೆ ಸಾರಿಗೆ ಇಲಾಖೆಯಿಂದ' ಎಂದು ಅಪೂರ್ಣ ಸಾಲುಗಳನ್ನು ಮುದ್ರಿಸಿ ಪ್ರಯಾಣಿಕರಿಗೆ ನೀಡಲಾಗುತ್ತಿತ್ತು. ಅದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಕುರಿತು ನ. 17ರಂದು ‘ಪ್ರಜಾವಾಣಿ’ಯು ‘ಮಂಜಮ್ಮ ಜೋಗತಿಗೆ ಗೌರವ ಸಲ್ಲಿಸಲು ಹೋಗಿ ಯಡವಟ್ಟು’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯು ಹಳೆಯ ಟಿಕೆಟ್‌ಗಳನ್ನು ವಾಪಸ್ ಪಡೆದಿದೆ. ಇಷ್ಟೇ ಅಲ್ಲ, ‘ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶ್ರೀ ಮಾತಾ ಮಂಜಮ್ಮ ಜೋಗತಿಯವರಿಗೆ ಹಾರ್ದಿಕ ಅಭಿನಂದನೆಗಳು’ ಎಂದು ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.