ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು): ಸಾಹಿತಿ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ‘ಕುಬುಸ’ ಚಲನಚಿತ್ರದ ಟೀಸರ್ ಸೋಮವಾರ ಸಂಜೆ ಪಟ್ಟಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬಿಡುಗಡೆ ಮಾಡಿದರು.

ಮಂಜಮ್ಮ ಜೋಗತಿ ಮಾತನಾಡಿ, ಬಹುತೇಕ ಅವಳಿ ಜಿಲ್ಲೆಯಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಇದರಲ್ಲಿ ಅಭಿನಯಿಸಿರುವ ಹೆಚ್ಚಿನವರು ಸ್ಥಳೀಯ ಕಲಾವಿದರು. ಮುಖ್ಯಭೂಮಿಕೆಯಲ್ಲಿ ಸ್ಥಳೀಯ ಕಲಾವಿದೆ ಹನುಮಕ್ಕ ಅವರು ಸಂಗವ್ವನ ಪಾತ್ರದಲ್ಲಿ ನಟಿಸಿದ್ದು, ಅವರ ಗೆಳೆತಿಯ ಪಾತ್ರದಲ್ಲಿ ತಾವು ನಟಿಸಿರುವುದಾಗಿ ಹೇಳಿದರು.

ನಿರ್ದೇಶಕ ರಘುರಾಮ್ ಚರಣ್ ಮಾತನಾಡಿ, ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ಕತೆಯನ್ನು ಸಿನಿಮಾ ಮಾಡಿದ್ದು, ಇದು ಗ್ರಾಮೀಣ ಸೊಗಡಿನ ಕುಬುಸ ತೊಡದ ಮಹಿಳೆಯ ನೈಜ ಕತೆಯನ್ನು ಹೊಂದಿದೆ ಉತ್ತಮವಾಗಿ ಮೂಡಿ ಬಂದಿದೆ. ಅಲ್ಲದೆ ವಿ.ಶೋಭಾ ಅವರ ನಿರ್ಮಾಣದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಶೀಘ್ರದಲ್ಲಿ ತೆರೆಗೆ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟರಾಜ್ ಭಟ್, ಗುಂಡಿ ರಮೇಶ್, ಭಾರತಿ, ರಾಜು ಕುಲಕರ್ಣಿ, ಶಿವಾನಂದ ಕೆಂಬಾವಿಮಠ, ಬದರೀನಾಥ, ರಾಜಗೋಪಾಲ್. ಅಮೃತ, ಯಶೋದಮ್ಮ, ಗೀತಾ ಸುರೇಶ್. ರಾಮವ್ವ ಜೋಗತಿ, ಅಂಜಿನಮ್ಮ ಜೋಗತಿ, ಭಾಗ್ಯಮ್ಮ ಜೋಗತಿ, ಗೌರಿ ಜೋಗತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.