ತೆಕ್ಕಲಕೋಟೆ: ‘ತಾಲ್ಲೂಕಿನಾದ್ಯಂತ ಮಳೆಯಿಂದಾಗಿ ಹಾನಿಗೊಂಡ ಬೆಳೆ ಸಮೀಕ್ಷೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದು ಶೀಘ್ರವೆ ವರದಿ ಸಲ್ಲಿಸಲಾಗುವುದು‘ ಎಂದು ತಹಶೀಲ್ದಾರ್ ಎಚ್. ವಿಶ್ವನಾಥ ತಿಳಿಸಿದ್ದಾರೆ.

ಗುರುವಾರ ಮತ್ತು ಶುಕ್ರವಾರ ಸುರಿದ ಮಳೆಯಿಂದ ತೆಕ್ಕಲಕೋಟೆ ಸೇರಿದಂತೆ ಹೋಬಳಿ ವ್ಯಾಪ್ತಿಯ ನಡವಿ, ನಿಟ್ಟೂರು, ಹಳೇಕೋಟೆ, ದೇವಿನಗರ, ಉಪ್ಪಾರ ಹೊಸಹಳ್ಳಿ, ಬಲಕುಂದಿ, ಸಿರಿಗೇರಿ, ಕರೂರು ಹೋಬಳಿ ವ್ಯಾಪ್ತಿಯ ಎಚ್. ಹೊಸ ಹಳ್ಳಿ, ದರೂರು, ಶಾನವಾಸಪುರ, ಬೈರಾಪುರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಮಳೆಯಿಂದಾಗಿ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ.

ಬೆಳೆ ಹಾನಿ ಕುರಿತಂತೆ ಸಮೀಕ್ಷೆ ಕಾರ್ಯ ಕೈಗೊಂಡಿದ್ದು ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಹಾಗೂ ಕೃಷಿ ಅಧಿಕಾರಿ ಪುರುಷೋತ್ತಮ ತಿಳಿಸಿದ್ದಾರೆ.

ರೈತರಾದ ಬಂದೇ ನವಾಜ್, ಕೆ. ಮಂಜುನಾಥ, ಬಾವಿಮನೆ ಸಣ್ಣ ವಲಿಸಾಬ್, ಗೌಸ್ ಸಾಬ್, ತುರುಮಂದೆಪ್ಪ ಇವರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.