ಕಂಪ್ಲಿ: ತಾಲ್ಲೂಕಿನ ದೇವಸಮುದ್ರ ಕ್ರಾಸ್‍ನಿಂದ ಮೆಟ್ರಿ ಗ್ರಾಮದ ಹೊರವಲಯದ ವರೆಗೆ ರಾಜ್ಯ ಹೆದ್ದಾರಿ-29ರ ಎರಡು ಬದಿ ಸಾಮಾಜಿಕ ಅರಣ್ಯ ಇಲಾಖೆಯಿಂದ ವಿವಿಧ ಜಾತಿಯ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಬಳ್ಳಾರಿಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ಪರಶುರಾಮ್ ಶಿರಬಡಗಿ ಮಾತನಾಡಿ, ಪ್ರಸ್ತುತ ಹೆದ್ದಾರಿ ಎರಡು ಬದಿ ಸುಮಾರು 6 ಕಿ.ಮೀ ವರೆಗೆ ಬೇವು, ಅರಳೆ, ಹೊಂಗೆ, ತಪ್ಸಿ, ನೇರಳೆ, ಗುಲ್‍ಮೊಹರ್, ಅರಳೆ, ಹುಣಸೆ, ಸಿಹಿ ಹುಣಸೆ, ಹಿಪ್ಪೆ, ಜಾಂಬು ನೇರಳೆ ಸೇರಿದಂತೆ ವಿವಿಧ ಜಾತಿಯ 1800ಸಸಿಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಹೆದ್ದಾರಿ ಬದಿ ನೆಟ್ಟಿರುವ ಸಸಿ ಗಿಡವಾದ ನಂತರ ಸಾರ್ವಜನಿಕರ ಕೊಡಲಿ ಪೆಟ್ಟಿಗೆ ಬಲಿಯಾಗಿವೆ ಎನ್ನುವ ದೂರು ಕೇಳಿಬಂದಿದೆ. ಈ ಕಾರಣಕ್ಕೆ ಅಲ್ಲಲ್ಲಿ ಗಿಡ ಕಡಿಯದಂತೆ ಎಚ್ಚರಿಕೆ ನಾಮಫಲಕ ಅಳವಡಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಉಪ ವಲಯ ಅರಣ್ಯಾಧಿಕಾರಿ ಪ್ರತಾಪ್ ಕಾಳೆ, ಅರಣ್ಯ ರಕ್ಷಕರಾದ ಪಂಪಾಪತಿ, ನಾಗರಾಜ, ಜಡೇಶ, ಮಹಮ್ಮದ್ ರಫಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.