ವಿಜಯಪುರ: ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಗ್ರಹಿಸಿ ಸಾರ್ವಜನಿಕರನ್ನು ಯಾಮಾರಿಸುವ ಕೆಲಸ ಕೆಲವರಿಂದ ನಗರದಲ್ಲಿ ನಡೆಯುತ್ತಿದೆ. ಕಾರಣ ಯಾರು ಕೂಡ ಸುಳ್ಳು ಭರವಸೆಗಳನ್ನು ನಂಬಿ, ಮೋಸ ಹೋಗಬಾರದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ನಿರಂತರವಾಗಿ ಸುಳ್ಳು ಹೇಳುತ್ತಾ, ದೇಶದ ಜನತೆಗೆ ದ್ರೋಹ ಮಾಡುತ್ತ ಬಂದಿರುವ ರಾಜಕೀಯ ಪಕ್ಷವೊಂದರ ಕೆಲವರು, ಸೋಲುವ ಭೀತಿಯಿಂದ ತಮ್ಮ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳುತ್ತಾ, ಇದೀಗ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸಂಗ್ರಹಿಸುವ ಮೂಲಕ ಅಮಾಯಕ ಜನರನ್ನು ಯಾಮಾರಿಸುವ ತಂತ್ರಕ್ಕೆ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಿಜವಾಗಿಯೂ ಬಡವರಿಗೆ ಹಣ ಹಾಕುವ ಉದ್ದೇಶವಿದ್ದರೆ ಬ್ಯಾಂಕ್ ಪಾಸ್ ಬುಕ್ ಪ್ರತಿ ಪಡೆದು ಹಣ ಹಾಕುತ್ತಿದ್ದರು. ಆದರೆ, ಮತದಾರರ ಚೀಟಿ, ಆಧಾರ್ ಕಾರ್ಡ್ ಪಡೆಯುವುದರ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಕೊಳೆಗೇರಿ ನಿವಾಸಿಗಳು, ಮುಗ್ದ ಜನರು ವಾಸಿಸುವ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು, ಆಟೋಗಳ ಮೂಲಕ ಮನೆ ಮನೆಗೆ ತೆರಳಿ ಅಮಾಯಕರನ್ನು ಮೋಸ ಮಾಡುವ ಸಂಚು ನಡೆದಿದೆ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.