ಹೊರ್ತಿ: ಸಮೀಪದ ಕನ್ನೂರು ಗ್ರಾಮದ ರೈತ ಚಂದ್ರಾಮ ಬಬಲೇಶ್ವರ ತಮ್ಮ ಹೊಲದಲ್ಲಿ ಬಾಳೆ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಕೇವಲ ಅರ್ಧ ಎಕರೆ ಜಮೀನು ಹೊಂದಿರುವ ಇವರು 234 ಜವಾರಿ ಬಾಳೆ ಹಣ್ಣಿನ (ಬಾಳೆ ಬಡ್ಡಿ) ಗಿಡ ಹಚ್ಚಿ ಈಗಾಗಲೇ ₹ 1ಲಕ್ಷ ಆದಾಯ ಪಡೆದಿದ್ದಾರೆ.

‘ಬಾಳೆ ಗಿಡ ಹಚ್ಚಿ ಐದು ವರ್ಷವಾಗಿದೆ. ಕಡಮೆ ಖರ್ಚು, ಉತ್ತಮ ಆದಾಯ ನೀಡುವ ಬಾಳೆ ಇದಾಗಿದೆ. ನಿರಂತರ ಫಲ ನೀಡುವ ಬೆಳೆಯಾಗಿದೆ. 20 ದಿನಕ್ಕೆ ಒಮ್ಮೆ ಕಟಾವಿಗೆ ಬರುತ್ತದೆ. ಇದರಿಂದ ನನಗೆ ಉತ್ತಮ ಆದಾಯ ತಂದು ಕೊಡುತ್ತಿದೆ’ ಎನ್ನುತ್ತಾರೆ ಚಂದ್ರಾಮ ಬಬಲೇಶ್ವರ.

‘ಈ ವರ್ಷ ಹಿಂಗಾರು-ಮುಂಗಾರು ಮಳೆ ಕಡಿಮೆ ಆಗಿದೆ. ಹೀಗಾಗಿ ಇಳುವರಿ ಸ್ವಲ್ಪ ಕಡಿಮೆಯಾಗಿದೆ. ಎರಡು ಬಾವಿ ಇವೆ. ಈಗ ನೀರು ಇದೆ, ಆದರೆ, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇದೆ’ ಎಂದರು.

‘ಜವಾರಿ ಬಾಳೆ ಹಣ್ಣಿಗೆ ತುಂಬಾ ಬೇಡಿಕೆಯೂ ಬಂದಿದೆ. ವ್ಯಾಪಾರಿಗಳು ನಮ್ಮ ಹೊಲಕ್ಕೆ ಬಂದು ಈ ಬಾಳೆ ಖರೀದಿ ಮಾಡಿಕೊಂಡು ಹೋಗಿದ್ದಾರೆ. ಬಾಳೆ ಕಾಯಿಗೆ ವಿಜಯಪುರ, ರಾಯಭಾಗ, ಸಾಂಗ್ಲಿಯಿಂದ ಬೇಡಿಕೆ ಬಂದಿದೆ. ಪ್ರತಿ 20 ದಿನಕ್ಕೆ 1ರಿಂದ 2ಟನ್ ಇಳುವರಿ ಬಂದಿದೆ. ಟನ್ಗೆ ₹ 32 ಸಾವಿರ ದರದಲ್ಲಿ ಮಾರಾಟವಾಗಿದೆ. ಒಂದು ವರ್ಷಕ್ಕೆ ₹1 ಲಕ್ಷ ಹಣ ಬಂದಿದೆ’ ಎಂದು ಚಂದ್ರಾಮ ಹೇಳಿದರು.

ಯಾವುದೇ ಔಷಧ ಬಳಸುತ್ತಿಲ್ಲ. ತಿಪ್ಪೆ ಗೊಬ್ಬರ ಹಾಗೂ ಕೂಲಿ ಕೆಲಸಕ್ಕೆ ₹15 ಸಾವಿರ ವೆಚ್ಚ ಸೇರಿದಂತೆ ಎಲ್ಲ ಖರ್ಚು ಕಳೆದು ₹ 1 ಲಕ್ಷ ಉತ್ತಮ ಆದಾಯವಾಗಿದೆ
ಚಂದ್ರಾಮ ಬಬಲೇಶ್ವರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.