ವಿಜಯಪುರ: ‘ವಿಜಯೇಂದ್ರ ಸಿ.ಡಿ ಹೀರೊ ಇದ್ದಾನೆ. ಸಿ.ಡಿ.ಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ರಾಜಕಾರಣ, ಚಮಚಾಗಿರಿ ಮಾಡುತ್ತಾನೆ’ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈಕಮಾಂಡ್ ಯಾವ ಆಧಾರದ ಮೇಲೆ ವಿಜಯೇಂದ್ರನನ್ನು ರಾಜ್ಯ ಅಧ್ಯಕ್ಷನನ್ನಾಗಿ ಮಾಡಿದ್ದಾರೋ ತಿಳಿಯದು, ರಾಜ್ಯ ಅಧ್ಯಕ್ಷ ಆಗಲು ಆತನಿಗೆ ಯಾವ ಅರ್ಹತೆಯೂ ಇಲ್ಲ. ವಿಜಯೇಂದ್ರ ಸ್ವತಃ ಭ್ರಷ್ಟನಿದ್ದಾನೆ. ಆತನಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.

ವಕ್ಫ್ ಕಾಯ್ದೆಗೆ ತಿದ್ದುಪಡಿ ಸ್ವಾಗತಾರ್ಹ:

‘ದೇಶದಲ್ಲಿ ವಕ್ಫ್ ಕಾನೂನಿಗೆ ತಿದ್ದುಪಡಿ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿರುವುದು ಸ್ವಾಗತಾರ್ಹ. ಈ ಕರಾಳ ಕಾನೂನು ರದ್ದುಪಡಿಸುವಂತೆ ನಾನು ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೆ. ಅಲ್ಲದೇ. ನಾಲ್ಕೈದು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದೆ. ನಮ್ಮ ಬೇಡಿಕೆಗೆ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

‘ವಕ್ಪ್ ಕಾನೂನು ನೆಹರು ಮಾಡಿದ ದೊಡ್ಡ ಅಪರಾಧವಾಗಿದೆ. ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಭೂಮಿ ವಕ್ಫ್ ಒಡತನದಲ್ಲಿದೆ. ಇದನ್ನು ವಶಕ್ಕೆ ಪಡೆಯಲು ಸ್ವತಃ ನ್ಯಾಯಾಲಯಕ್ಕೂ ಅಧಿಕಾರ ಇರಲಿಲ್ಲ. ಅದಕ್ಕೆ ಪ್ರತ್ಯೇಕ ಟ್ರಿಬುನಲ್ ಇದ್ದು, ಸಂಪೂರ್ಣ ಅಧಿಕಾರ ನೀಡಲಾಗಿತ್ತು. ಇದೊಂದು ಕರಾಳ ಶಾಸನವಾಗಿತ್ತು. ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ಕಲಂ ತೆಗೆದಂತೆ, ವಕ್ಪ್ ಕಾಯ್ದೆ ತೆಗೆದುಹಾಕಲು ಮೋದಿ ಮುಂದಾಗಿರುವುದು ಐತಿಹಾಸಿಕ ನಿರ್ಧಾರ’ ಎಂದರು.

‘ದೇಶದಲ್ಲಿ ಪ್ರಥಮವಾಗಿ 18 ಲಕ್ಷ ಆಸ್ತಿ ಭಾರತೀಯ ಸೇನೆ ವಶದಲ್ಲಿದೆ. ಎರಡನೆಯದಾಗಿ 15 ಲಕ್ಷ ಎಕರೆ ಭಾರತೀಯ ರೈಲ್ವೆ ಇಲಾಖೆ ವಶದಲ್ಲಿ ಇದೆ. ಮೂರನೆಯದಾಗಿ 12 ಲಕ್ಷ ಎಕರೆ ವಕ್ಫ್ ವಶದಲ್ಲಿದೆ. ಈ ಕಾನೂನು ರದ್ದುಪಡಿಸಲು ಎಲ್ಲ ಪಕ್ಷಗಳು ಬೆಂಬಲ ನೀಡಬೇಕು’ ಎಂದರು.

‘ವಕ್ಫ್ ಕಾನೂನು ತಿದ್ದುಪಡಿ ಕಾಂಗ್ರೆಸ್ನ ರಾಹುಲ್ ಗಾಂಧಿ, ಸಮಾಜವಾದಿ ಪಾರ್ಟಿಯ ಅಖಿಲೇಶ ಯಾದವ್, ಓವೈಸಿ ವಿರೋಧ ಮಾಡುವುದು ಸರಿಯಲ್ಲ. ಈ ವಿರೋಧಿಸುವವರೆಲ್ಲೂ ಬಹುತೇಕ ಸಾಬರಿದ್ದಾರೆ. ಅವರು ಹಿಂದುಗಳೇ ಅಲ್ಲ, ಎಲ್ಲ ಜಾತಿ ಮಿಶ್ರಣವಾಗಿದ್ದಾರೆ’ ಎಂದು ಕುಟುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.