ಇಂಡಿ: ಪಟ್ಟಣದ ಮಿನಿ ವಿಧಾನ ಸೌಧದದಿಂದ ಸಾಲೋಟಗಿ ಗ್ರಾಮಕ್ಕೆ ಹೋಗುವ ಹಳೆ ರಸ್ತೆಯನ್ನು ಪಟ್ಟಣದ ಮಧ್ಯಭಾಗದಲ್ಲಿ ಸುಮಾರು 200 ಮೀಟರ್ ರಸ್ತೆಯನ್ನು ಕಳೆದ 25 ವರ್ಷಗಳಿಂದ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಈ ಭಾಗದಲ್ಲಿ ಚರಂಡಿ ನೀರು ನಿಂತು ಮಲೀನಗೊಂಡಿತ್ತು.

ಅದನ್ನು ಸ್ವಚ್ಛಗೊಳಿಸಲು ಪುರಸಭೆಯ ಕಾರ್ಮಿಕರಿಗೆ ಸ್ಥಳ ಇಲ್ಲದಂತಾಗಿತ್ತು. ಇದರಿಂದ ಮಲಿನ ನೀರಿನಿಂದ ಗಬ್ಬು ವಾಸನೆ ಹರಡಿ, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುವಂತಿತ್ತು. ಈ ಬಗ್ಗೆ ಸಾರ್ವಜನಿಕರು ಹಲವಾರು ಸಲ ಉಪ ಕಂದಾಯ ವಿಭಾಗಾಧಿಕಾರಿಗಳಿಗೆ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬರಲಾಗಿತ್ತು. ಈ ಬಗ್ಗೆ ಒಂದೆರಡು ಬಾರಿ ಲೋಕಾಯುಕ್ತರಿಗೂ ಮನವಿ ಸಲ್ಲಿಸಲಾಗಿತ್ತು.

ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ಬಗ್ಗೆ ಕಳೆದ 15 ದಿನಗಳ ಹಿಂದೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ’ಇಂಡಿ ಕೊಳಚೇ ಗುಂಡಿ‘ ಎನ್ನುವ ತಲೆಬರಹದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಇತ್ತೀಚೆಗೆ ಈ ಬಗ್ಗೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡಿರುವ ಉಪ ಕಂದಾಯ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಮತ್ತು ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಹಾಗೂ ಪುರಸಭೆಯ ಸದಸ್ಯ ಅನಿಲಗೌಡ ಬಿರಾದಾರ ಅವರು ಸಿಟಿ ಸರ್ವೇಯರ್ ಇಲಾಖೆಯಿಂದ ರಸ್ತೆ ಒತ್ತುವರಿಯಾದ ಬಗ್ಗೆ ಸಮೀಕ್ಷೆ ಕಾರ್ಯ ಮಾಡಿಸಿ, ಶುಕ್ರವಾರ ಪಟ್ಟಣದ ಗಣಪತಿ ಗುಡಿಯಿಂದ ಮಿನಿ ವಿಧಾನ ಸೌಧದವರೆಗಿನ ಸುಮಾರು 200 ಮೀಟರ್ ರಸ್ತೆಯನ್ನು ಮೂರು ಜೆಸಿಬಿ ಯಂತ್ರಗಳ ಮೂಲಕ ಮುಂದೆ ನಿಂತು ತೆರವುಗೊಳಿಸುವ ಕಾರ್ಯ ಪ್ರಾರಂಭಿಸಿದರು.

ಈ ತೆರವು ಕಾರ್ಯಕ್ಕೆ ಈ ಭಾಗದ ಸಾರ್ವಜನಿಕರು, ಪಟ್ಟಣ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಪಟ್ಟಣದಲ್ಲಿ ಇನ್ನೂ ಹಲವಾರು ರಸ್ತೆಗಳು ಅತಿಕ್ರಮಣಗೊಂಡಿದ್ದು, ಅವುಗಳನ್ನೂ ಕೂಡಾ ಗುರುತಿಸಿ, ಪಟ್ಟಣ ಸ್ವಚ್ಛಗೊಳಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಜರುಗಿಸಬೇಕು ಎಂದು ಮನವಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.