ದೇವರಹಿಪ್ಪರಗಿ: ಪಟ್ಟಣದ ಮುಖ್ಯ ರಸ್ತೆಯ ನಡುವೆ ಇರುವ ವಿದ್ಯುತ್ ಕಂಬಗಳು ಹಾಗೂ ಧ್ವಜಸ್ತಂಭವನ್ನು ಸ್ಥಳಾಂತರ ಮಾಡದ ಹಿನ್ನೆಲೆಯಲ್ಲಿ ಜನ, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಪಟ್ಟಣದ ಇಂಡಿ ರಸ್ತೆಯಲ್ಲಿ ವಿದ್ಯುತ್ ದೀಪಗಳೊಂದಿಗೆ ನಿರ್ಮಾಣಗೊಳ್ಳುತ್ತಿರುವ ರಾಜ್ಯ ಹೆದ್ದಾರಿ 41 ದ್ವಿಪಥ ರಸ್ತೆಗೆ ಕಾಲ ಕೂಡಿ ಬಂದಿದ್ದು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರರು ಕಾರ್ಯ ಆರಂಭಿಸಿದ್ದಾರೆ.

ಚರಂಡಿ ಸಹಿತ ದ್ವಿಪಥ ರಸ್ತೆಗಾಗಿ ಈಗಾಗಲೇ ಎಡ–ಬಲಗಳಲ್ಲಿ ಇರುವ ಮರಗಳು, ಅಂಗಡಿ, ಮನೆಗಳ ಕಂಪೌಂಡ್ಗಳನ್ನು ತೆರವುಗೊಳಿಸಲಾಗಿದೆ. ಆದರೆ, ರಸ್ತೆಯ ಮಧ್ಯೆದಲ್ಲಿರುವ ಹೆಸ್ಕಾಂ ಕಚೇರಿ ಮುಂದಿರುವ ಎರಡು ಕಂಬಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಧ್ವಜಸ್ತಂಭ ಸ್ಥಳಾಂತರಗೊಳಿಸದ ಕಾರಣ ರಸ್ತೆ ಕಾಮಗಾರಿ ಅರೆಬರೆಯಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ರಸ್ತೆ ನಿರ್ಮಾಣ ಆರಂಭಗೊಳ್ಳುವ ಮುನ್ನ ಪಟ್ಟಣ ಪಂಚಾಯಿತಿ ಅಂದಿನ ಮುಖ್ಯಾಧಿಕಾರಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗುವ 33 ಕೆ.ವಿ 2 ವಿದ್ಯುತ್ ಕಂಬಗಳ ಶುಲ್ಕ ಭರಿಸಿ ಕಂಬಗಳನ್ನು ತೆರವುಗೊಳಿಸುವುದು ಹಾಗೂ ರಸ್ತೆ ಪಕ್ಕ ಅನಧಿಕೃತ ಮನೆಯನ್ನು ತೆಗೆದು ಚರಂಡಿ ನಿರ್ಮಾಣಕ್ಕೆ ಅನುಕೂಲ ಕಲ್ಪಿಸುವ ಭರವಸೆಯೊಂದಿಗೆ ಪತ್ರ ನೀಡಿದ್ದರು. ಆದರೆ, ಮುಂದೆ ಮುಖ್ಯಾಧಿಕಾರಿ ಬದಲಾವಣೆಯಾದ ಪರಿಣಾಮ ಹಾಗೂ ಹೆಸ್ಕಾಂ ಶುಲ್ಕ ಅಧಿಕವಾದ ಕಾರಣದಿಂದಾಗಿ ವಿದ್ಯುತ್ ಕಂಬಗಳ ಸ್ಥಳಾಂತರ ನೆನೆಗುದಿಗೆ ಬಿದ್ದಿತು. ಅದಾಗ್ಯೂ ರಸ್ತೆ ನಿರ್ಮಾಣ ಕಾರ್ಯ ಚಾಲನೆಯಲ್ಲಿದ್ದು, ಉಳಿದ ರಸ್ತೆ ನಿರ್ಮಾಣಗೊಂಡಿತು. ಈಗ ಎರಡೂ ಬದಿ ದ್ವಿಪಥ ರಸ್ತೆ ಪೂರ್ಣಗೊಂಡು ಸಾರ್ವಜನಿಕರು ಪಯಣಿಸುವಂತಾಗಿದೆ.

ವಿದ್ಯುತ್ ಕಂಬಗಳ ಸ್ಥಳಾಂತರ ಕುರಿತು ಶಾಸಕ ರಾಜುಗೌಡ ಪಾಟೀಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಹೆಸ್ಕಾಂ ಎಇಇ ಅವರೊಂದಿಗೆ ಮಾತನಾಡಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದು, ಈಗ ಕರವೇ ಧ್ವಜಸ್ತಂಭ ಮಾತ್ರ ಸ್ಥಳಾಂತರಗೊಳ್ಳಬೇಕಿದೆ.

ಕರವೇ ಜಿಲ್ಲಾ ಮುಖಂಡರು ಹಾಗೂ ಕೆಲವರು ಧ್ವಜಸ್ತಂಭವನ್ನು ತಾವು ಬೇರೆಡೆ ಸ್ಥಳಾಂತರ ಮಾಡದೇ, ಬೇರೆಯವರಿಗೂ ಅವಕಾಶ ನೀಡುತ್ತಿಲ್ಲ. ಇದರಿಂದ ರಸ್ತೆ ನಿರ್ಮಾಣದಲ್ಲಿ ತೊಡಗಿರುವ ಗುತ್ತಿಗೆದಾರರು ಧ್ವಜಸ್ತಂಭದ ಗೊಡವೆಗೆ ಹೋಗದೇ ತಮ್ಮಷ್ಟಕ್ಕೆ ತಾವು ರಸ್ತೆ ನಿರ್ಮಿಸಿ ಪೂರ್ಣಗೊಳಿಸಿದ್ದಾರೆ.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಮುಳಜಿ ಮಾತನಾಡಿ, ಕರವೇ ವೃತ್ತ ನಿರ್ಮಿಸಿ ಕೊಡುವ ಕುರಿತು ಗುತ್ತಿಗೆದಾರ ಸಿ.ಬಿ.ಅಸ್ಕಿ ಭರವಸೆ ನೀಡಿದ್ದರು. ಆದರೆ, ಈಗ ನಿರ್ಮಿಸಿಲ್ಲ ಎಂದು ಆರೋಪಿಸಿದರು.

ಗುತ್ತಿಗೆದಾರ ಸಿ.ಬಿ.ಅಸ್ಕಿ ಹಾಗೂ ಎಂಜಿನಿಯರ್ ತುಂಬಗಿ ಮಾತನಾಡಿ, ‘ನಾವು ವೃತ್ತ, ಸ್ತಂಭ ನಿರ್ಮಿಸುವ ಭರವಸೆ ನೀಡಿಲ್ಲ. ಆದರೆ, ಅದಕ್ಕೆ ಬೇಕಾಗುವ ಸಾಮಗ್ರಿ ಒದಗಿಸುವ ಭರವಸೆ ನೀಡಿದ್ದು ಸರಿ. ವೃತ್ತವಾಗಲಿ, ಧ್ವಜಸ್ತಂಭದ ನಿರ್ಮಾಣ ನಮ್ಮ ಕಾರ್ಯವಲ್ಲ. ನಮ್ಮದು ನಿಗದಿತ ಯೋಜನೆಯಂತೆ ರಸ್ತೆ ನಿರ್ಮಿಸಿ ಕೊಡುವುದಾಗಿದೆ. ಆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಧ್ವಜಸ್ತಂಭ ತೆರವುಗೊಳಿಸಿದರೆ ರಸ್ತೆ ನಿರ್ಮಿಸಿ ಕೊಡುತ್ತೇವೆ. ಇಲ್ಲವಾದರೆ ಅದರ ಪಾಡಿಗೆ ಅದನ್ನು ಬಿಡುತ್ತೇವೆ’ ಎಂದು ಹೇಳಿದರು.

ಕರವೇ ಧ್ವಜ ಸ್ತಂಭವನ್ನು ತೆರವುಗೊಳಿಸಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಸಹಕರಿಸಬೇಕು. ಈ ವಿಷಯದಲ್ಲಿ ಪಟ್ಟಣ ಪಂಚಾಯಿತಿ ಕೂಡಾ ಅಗತ್ಯ ಕ್ರಮ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಾಸುದೇವ ತೋಳಬಂದಿ, ಬಾಬು ಮೆಟಗಾರ ಹಾಗೂ ರಾವುತ ಅಗಸರ ಒತ್ತಾಯಿಸಿದರು.

ರಸ್ತೆ ನಡುವೆ ಇರುವ ಕರವೇ ಧ್ವಜಸ್ತಂಭದ ಕುರಿತು ಪಟ್ಟಣ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
–ಎಸ್.ಎಸ್.ಬಾಗಲಕೋಟ, ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.