ವಿಜಯಪುರ:‘ಸೇನಾ ನೌಕೆಯೊಂದು ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿ ಹೊಡೆದು ನಾಶವಾಗಿದೆ ಎಂಬ ಶಂಕೆಯಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ನೌಕಾಪಡೆಗೆ ಪತ್ರ ಬರೆಯಲಾಗುವುದು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಸಚಿವ ಸಂಪುಟದ ಸಭೆ ಗುರುವಾರ ನಡೆಯಲಿದ್ದು, ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಆಂತರಿಕ ಭದ್ರತೆ ಡಿಜಿ ಮೂಲಕ ಪತ್ರ ಕಳುಹಿಸಲಾಗುವುದು’ ಎಂದು ಬುಧವಾರ ವಿಜಯಪುರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಸುವರ್ಣ ತ್ರಿಭುಜ ದೋಣಿಯ ಅವಶೇಷ ಪತ್ತೆಯಾಗಿದೆ. ಮೀನುಗಾರರಿಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಇದೂವರೆಗೂ ಸಿಗದಾಗಿದೆ’ ಎಂದು ಹೇಳಿದರು.

ಬಾಗಿಲು ತಟ್ಟಿಲ್ಲ

‘ಮನಸ್ಸಿಗೆ ನೋವಾಗಿದ್ದಾಗಲೂ ಸಹ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಬಿಜೆಪಿಯ ಯಾವೊಬ್ಬ ಮುಖಂಡರ ಜತೆ ಮಾತನಾಡಿಲ್ಲ. ಯಾರ ಮನೆಯ ಬಾಗಿಲು ತಟ್ಟಿಲ್ಲ’ ಎಂದು ಎಂ.ಬಿ.ಪಾಟೀಲ ತಿರುಗೇಟು ನೀಡಿದರು.

‘ಯತ್ನಾಳ ಆಹ್ವಾನಕ್ಕೆ ನೋ ಥ್ಯಾಂಕ್ಸ್. ಅವರ ಹೇಳಿಕೆಗಳಿಗೆ ನೋ ಕಾಮೆಂಟ್ಸ್’ ಎಂದ ಪಾಟೀಲ, ‘ಸ್ನೇಹ ಬೇರೆ, ರಾಜಕಾರಣವೇ ಬೇರೆ. ನಾ ಎಂದಾದರೂ ಬಿಜೆಪಿಗೆ ಸೇರುತ್ತೇನೆ ಎಂದು ಹೇಳಿದ್ದೇನಾ ? ಇಲ್ಲ ಅರ್ಜಿ ಹಾಕಿನಾ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.