ವಿಜಯಪುರ: ‘ಮನುಷ್ಯರನ್ನು ಗೌರವಿಸುವಂತಹ ಬಹುದೊಡ್ಡ ಪ್ರೇರಕ ಶಕ್ತಿ ಕನಕದಾಸರು. ಮನುಕುಲಕ್ಕೆ ಆದರ್ಶಮಯ ವಿಚಾರಗಳನ್ನು, ಸಮಾಜಮುಖಿ ಚಿಂತನೆಗಳನ್ನು ನೀಡಿದ ಸಂತ ಶ್ರೇಷ್ಠ ಕನಕದಾಸರ ಆದರ್ಶ-ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸಮಾಜಮುಖಿ ಚಿಂತನೆಗಳನ್ನು ನೀಡಿದ ಕನಕದಾಸ, ಬುದ್ಧ, ಬಸವ ಅಂಬೇಡ್ಕರ್ ಅವರ ಆದರ್ಶಮಯ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ ಮಾತನಾಡಿ, ಕನಕದಾಸರು ಸಮಾಜದಲ್ಲಿ ಸಮಾನತೆಗಾಗಿ ಕೀರ್ತನೆಗಳ ಮೂಲಕ ಜನಸಾಮಾನ್ಯರಾಡುವ ಭಾಷೆಯಲ್ಲಿಯೇ ತಿಳಿಹೇಳಿ ಸಮಾಜ ಸುಧಾರಕರಾಗಿದ್ದಾರೆ ಎಂದು ಹೇಳಿದರು.

ಉಪನ್ಯಾಸ ನೀಡಿದ ಪ್ರೊ.ಎ.ಎಚ್ ಕೊಳಮಲಿ ಮಾತನಾಡಿ, ನೊಂದವರ ಧ್ವನಿಯಾಗಿದ್ದ ಕನಕದಾಸರು ದಾಸ ಸಾಹಿತ್ಯದ ಆಶ್ವಿನಿ ದೇವತೆಯಾಗಿದ್ದರು. ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಕೀರ್ತನೆಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ. ಈ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದ ಮಹಾನ್ ಮೇಧಾವಿಯಾಗಿದ್ದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಜೃತಿ ಇಲಾಖೆ ಸಹಾಯ ನಿರ್ದೇಶಕ ಸಂತೋಷ ಭೋವಿ, ಪಾಲಿಕೆ ಸದಸ್ಯ ಅಶೋಕ ನ್ಯಾಮಗೊಂಡ, ರಾಹುಲ್ ಜಾಧವ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಹೆಸ್ಕಾಂ ಅಧಿಕ್ಷಕ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಘೋಣಸಗಿ, ರವಿ ಕಿತ್ತೂರ, ಸುಜಾತ ಕಳ್ಳಿಮನಿ, ವಿದ್ಯಾವತಿ ಅಂಕಲಗಿ, ಅಡಿವೆಪ್ಪ ಸಾಲಗಲ್, ಭಿಮರಾಯ ಜಿಗಜಿಣಗಿ, ಮಲ್ಲಣ್ಣ ಶಿರಸ್ಯಾಡ, ದೇವೇಂದ್ರ ಮಿರೇಕರ ಭಾಗವಹಿಸಿದ್ದರು.

ಸಿದ್ದರಾಮ ಬಿರಾದಾರ, ರಾಮಸ್ವಾಮಿ ಕೊಳಮಲಿ, ಎಸ್.ಸಿ.ಕುರ್ಲೆ ಅವರು ಕಾವ್ಯ ವಾಚನ ಮಾಡಿದರು. ಮಹೇಶ ಪೂಜಾರಿ ಹಾಗೂ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾಜದಲ್ಲಿ ಯಾವುದೇ ತಾರತಮ್ಯ ಇರಬಾರದು ಭೇದಭಾವ ಇರಬಾರದು. ಎಲ್ಲರೂ ಸಮಾನರು ಎಂಬ ಸಂದೇಶ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿದ್ದಾರೆ
ರಿಷಿ ಆನಂದ ಸಿಇಒ ಜಿಲ್ಲಾ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.