ಇಂಡಿ: ಬೆಂಗಳೂರ ಸ್ಮೈಲಿ ಕ್ರಿಯೇಷನ್ಸ ಬ್ಯಾನರ್‌ನಲ್ಲಿ ಇಂಡಿ ನಗರದ ನಾಯಕ ನಟ ಪಂಚಾಕ್ಷರಿ ನಟಿಸಿರುವ ಕ್ರಷ್ ಕನ್ನಡ ಚಲನಚಿತ್ರ ಫೆಬ್ರುವರಿ 2 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಈ ಹಿಂದೆ ರಂಗ ಬಿರಂಗಿ ಮತ್ತು ಇದೇ ಅಂತರಂಗ ಶುದ್ದಿ ಚಿತ್ರಗಳ ಮೂಲಕ ಮನೆ ಮಾತಾಗಿದ್ದ ಪಂಚಾಕ್ಷರಿ ನಾಯಕನಾಗಿ ನಟಿಸಿದ ಮೂರನೆಯ ಚಿತ್ರವಿದು.

ಚಿತ್ರದ ನಾಯಕಿ ಉತ್ತರ ಕರ್ನಾಟಕದ ಬೆಡಗಿ ಪ್ರತಿಭಾ ಸೊಪ್ಪಿಮಠ ನಾಯಕಿಯಾಗಿ ನಟಿಸಿದ್ದಾರೆ. ನಿರ್ಮಾಪಕ ಎಸ್.ಚಂದ್ರಮೋಹನ ನಿರ್ಮಾಣದ ಕ್ರಷ್ ಇದೊಂದು ತಂದೆ ಮಗ ಮತ್ತು ತಾಯಿ ಮಗಳ ಬಾಂಧವ್ಯದ ಕಥಾಹಂದರವನ್ನು ಹೊಂದಿದ್ದು, ಯುವ ಜನಾಂಗವನ್ನು ಆಕರ್ಷಿಸುವ ಚಿತ್ರ ಸಾಕಷ್ಟು ಅಂಶಗಳನ್ನು ಈ ಸಿನಿಮಾ ಹೊಂದಿದೆ ಎಂದು ನಾಯಕ ನಟ ಪಂಚಾಕ್ಷರಿ ತಿಳಿಸಿದರು.

ಇಂಡಿಯ ಶಾಂತೇಶ್ವರ ಮತ್ತು ಅಂಬಾಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪಂಚಾಕ್ಷರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.