ಪ್ರಜಾವಾಣಿ ವಾರ್ತೆ

ಮುದ್ದೇಬಿಹಾಳ : ಶಾಸಕ ಅಪ್ಪಾಜಿ ನಾಡಗೌಡರಿಗೆ ಸರ್ಕಾರದಿಂದ ಹಣ ತರುವ ಯೋಗ್ಯತೆ ಇಲ್ಲ. ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಸುಳ್ಳು ಹೇಳುವ ನಾಟಕ ಮಾಡುವುದನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.

ಪಟ್ಟಣದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಶಾಸಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.

ನಾಲತವಾಡದಲ್ಲಿ ಹಕ್ಕುಪತ್ರ ವಿತರಿಸಿರುವಲ್ಲಿ, ಭೂಮಿ ಪೂಜೆ ಮಾಡಿರುವ ಸ್ಥಳಗಳಲ್ಲಿ ಜನರನ್ನು ಸುಳ್ಳು ಹೇಳಿ ಯಾಮಾರಿಸಿದ್ದಾರೆ. ಇವರು ರಾಜಕೀಯ ಜೀವನದಲ್ಲಿ ಏನೇನು ಮಾಡಿದ್ದಾರೋ ದಾಖಲೆಗಳ ಸಮೇತ ತೆರೆದಿಡುತ್ತೇನೆ ಎಂದು ಗುಡುಗಿದರು.

ಪದೇ ಪದೇ ಸುಳ್ಳಿಗೆ ಜನರು ಮಾರು ಹೋಗುವುದಿಲ್ಲ. ಸಿಂಗಲ್ ಟೆಂಡರ್ ನಿಮ್ಮ ಶಿಷ್ಯನಿಗೆ ಅದು ಹೇಗೆ ಕೊಡುತ್ತೀರಿ ಎಂದು ನೋಡುತ್ತೇನೆ ಎಂದರು.

ಬಡವರಿಗೆ ತೊಂದರೆ ಬೇಡ:

ಬಡವರು ಸಾಲ ಮಾಡಿ ಅಂಗಡಿ ಹಾಕಿಕೊಂಡಿದ್ದಾರೆ. ಅಂತವರ ಅಂಗಡಿಗಳನ್ನು ಶಾಸಕರು ಮುರಿದು ಹಾಕಿಸಿದ್ದಾರೆ. ಬಡವರಾದ ಅವರಿಗೆ ಬೇರೆ ಉದ್ಯೋಗ ಇಲ್ಲ. ಅವರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ವರಿಷ್ಠಾಧಿಕಾರಿಗೆ, ತಾಲ್ಲೂಕಿನ ಅಧಿಕಾರಿಗಳಿಗೆ ಮಾತನಾಡಿ ನ್ಯಾಯಯುತವಾಗಿ ಬದುಕಲು ಬಿಡಿ ಎಂದು ಹೇಳಿದ್ದೇನೆ ಎಂದರು.

ಮುಂದಿನ ಚುನಾವಣೆಯಲ್ಲಿ ನಾನು ಆಯ್ಕೆಯಾದರೆ ಮುದ್ದೇಬಿಹಾಳ ಮತಕ್ಷೇತ್ರದ ಪ್ರಮುಖ ಪಟ್ಟಣಗಳಲ್ಲಿ ಎಸ್.ಸಿ.,ಎಸ್ಟಿ, ಹಿಂದುಳಿದವರು, ಬಡವರು ಫುಟಪಾತ್ನಲ್ಲಿ ಅಂಗಡಿಗಳನ್ನು ಮಾಡಿಕೊಡುತ್ತೇನೆ. ಅಗತ್ಯವಿದ್ದರೆ ಸರ್ಕಾರದ ಅನುದಾನ ಪಡೆದುಕೊಂಡು ಅವರ ನೆರವಿಗೆ ನಿಲ್ಲುವು ಕೆಲಸ ಮಾಡುತ್ತೇನೆ ಎಂದು ನಡಹಳ್ಳಿ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಅಶೋಕ ರಾಠೋಡ, ಪುರಸಭೆ ಸದಸ್ಯ ಬಸಪ್ಪ ತಟ್ಟಿ,ಸಹನಾ ಬಡಿಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.