ವಿಜಯಪುರ:ಸಂಕೀರ್ಣ ಕ್ಷೇತ್ರದಲ್ಲಿ ಎ.ಎಂ. ಮದರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶಿಕ್ಷಕರಾಗಿ, ಜಿಲ್ಲಾ ಖಜಾನೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿರಂತರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು ಮದರಿ.

1952ರಲ್ಲಿ ಸಿಂದಗಿ ತಾಲ್ಲೂಕಿನ ಮದರಿಯಲ್ಲಿ ಜನಿಸಿದ ಎ.ಎಂ. ಮದರಿ ಅವರು ಬಲು ಕಷ್ಟದಿಂದ ಜೀವನ ಸವೆಸಿದವರು. ಅನೇಕರ ಸಹಾಯದಿಂದ ಹೇಗೋ ಕಷ್ಟಪಟ್ಟು ಬಿ.ಎಸ್‌ಸಿ, ಬಿ.ಇಡಿ ಪದವಿ ಪೂರೈಸಿದರು. ನಂತರ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಕರ್ನಾಟಕ ಟ್ರೇಜರಿ ಸರ್ವಿಸ್ ಪರೀಕ್ಷೆ ಉತ್ತೀರ್ಣರಾದರು. ಜಿಲ್ಲಾ ಖಜಾನಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು.

ದಿನಪತ್ರಿಕೆಗಳಿಗೆ ಲೇಖನ, ಸಾಹಿತ್ಯಿಕ ಲೇಖನ ಬರೆಯುವುದರಲ್ಲಿ ಸಕ್ರೀಯರಾಗಿದ್ದ ಫಲವಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ಸ.ಸ. ಮಾಳವಾಡ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಮುಡಿಗೇರಿವೆ.

ಕೊಪ್ಪಳ ಜಿಲ್ಲಾ ರಚನೆ ಹೋರಾಟದಲ್ಲಿಯೂ ಮದರಿ ಸಂಘಟಿತ ಹೋರಾಟ ಮಾಡಿದ್ದಾರೆ, 1993 ರಲ್ಲಿ ಕೊಪ್ಪಳದಲ್ಲಿ ನಡೆದ 62ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಶ್ರೇಯಸ್ಸು ಮದರಿ ಅವರಿಗೆ ಸಲ್ಲುತ್ತದೆ.

‘ಪ್ರಶಸ್ತಿ ದೊರಕಿರುವುದು ನಿಜಕ್ಕೂ ಸಂತೋಷ ತಂದಿದೆ, ಕರುನಾಡಿನ ಹೆಮ್ಮೆಯ ಪ್ರಶಸ್ತಿ ದೊರಕಿದ್ದು ನನ್ನ ಪೂರ್ವಜನ್ಮದ ಪುಣ್ಯ, ನನ್ನ ತಂದೆ, ತಾಯಿ, ಗುರು-ಹಿರಿಯರ, ಹಿತೈಷಿಗಳ ಆಶೀರ್ವಾದ’ ಎಂದು ಎ.ಎಂ. ಮದರಿ ಸಂತೋಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.