ಮುದ್ದೇಬಿಹಾಳ: ‘ಸಾಮೂಹಿಕ ವಿವಾಹಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಅದರಿಂದ ಮದುವೆ ಖರ್ಚು ಉಳಿದು ಬಡವರಿಗೆ ಅನುಕೂಲವಾಗುತ್ತದೆ. ಸಾಮೂಹಿಕ ವಿವಾಹ ಬಡವರ ಮದುವೆಯಲ್ಲ ಅದು ಭಾಗ್ಯವಂತರ ಮದುವೆ’ ಎಂದು ಸರೂರು ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಸೋಮವಾರ ಕಾಡಸಿದ್ಧೇಶ್ವರ ಹಾಗೂ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಮಾಜ ಸೇವಕ ಎಂ.ಎನ್.ಮದರಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಡವರ ಸೇವೆಯನ್ನು ದೇವರ ಪೂಜೆ ಎಂದು ಮಾಡಿಕೊಂಡು ಬರುತ್ತಿರುವ ಮದರಿ ಕುಟುಂಬದ ಮೇಲೆ ಜನತೆಯ ಆಶೀರ್ವಾದ ಸದಾ ಇರಲಿ ಎಂದರು.

ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ, ಪ್ರತಿ ವರ್ಷವೂ ಖಿಲಾರಹಟ್ಟಿಯಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುತ್ತಿದ್ದೇವೆ. ಈ ಸಲ ಲೋಕಸಭಾ ಚುನಾವಣೆ ಬಂದಿರುವ ಕಾರಣ ಸರಳವಾಗಿ ಕಾರ್ಯಕ್ರಮ ಸಂಘಟಿಸಿದ್ದೇವೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿದೇರ್ಶಕಿ ಶ್ರೀದೇವಿ ಮದರಿ, ಮುಖಂಡರಾದ ಬಿ.ಎಲ್.ಮದರಿ, ಮಲ್ಲಣ್ಣ ಕೆಸರಟ್ಟಿ, ಸರೂರು ಶಿವಯ್ಯ ಗುರುವಿನ, ಖಿಲಾರಹಟ್ಟಿ ಕಾಡಸಿದ್ಧೇಶ್ವರ ಮಠದ ರಮಾನಂದ ಸ್ವಾಮೀಜಿ, ಸಿದ್ದಾಪೂರದ ಅರವಿಂದ ಸ್ವಾಮೀಜಿ, ಇತರರು ಇದ್ದರು.

ಬೀರಲಿಂಗೇಶ್ವರ ಹಾಗೂ ದಯಗೊಂಡ ಗೌಡ ಹಬ್ಬದ ಪ್ರದರ್ಶನ ಗಮನ ಸೆಳೆಯಿತು. 11 ಜೋಡಿಗಳು ನವಜೀವನಕ್ಕೆ ಕಾಲಿರಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.