ವಿಜಯಪುರ: ನಗರದ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯಿಂದ ಬುಧವಾರ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಟಿಪ್ಪು ಸುಲ್ತಾನ್ ವೃತ್ತದಲ್ಲಿ ಆಚರಿಸಲಾಯಿತು.

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ದೇಶದ ಮೊದಲ ಸ್ವಾತಂತ್ರ್ಯ ಸೇನಾನಿ ಹಜರತ್ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದು, ಬಿಜೆಪಿಯ ಕೋಮುವಾದಿತನ ತೋರಿಸುತ್ತಿದೆ ಎಂದರು.

ದೇಶಕ್ಕಾಗಿ ಪ್ರಾಣವನ್ನೇ ಬಲಿ ನೀಡಿದ ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ಖಾಸಗಿಯಾಗಿ ಪ್ರತಿವರ್ಷ ಆಚರಣೆ ಮಾಡಿ, ಟಿಪ್ಪು ಸುಲ್ತಾನ್ ಅವರ ಹಿರಿಮೆ, ತ್ಯಾಗವನ್ನು ಸ್ಮರಿಸಲಾಗುವುದು ಎಂದರು.

ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರೀಟಿಷರಲ್ಲಿ ಒತ್ತೆ ಇಟ್ಟು ಹೋರಾಡಿದ ವೀರ. ಅಂತಹ ವೀರ ಸೇನಾನಿಯ ಜಯಂತಿಯನ್ನು ಮಾಡಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ, ಕೋಮುವಾದಿ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ನ ದೇಶಭಕ್ತಿಯನ್ನು ಮರೆಮಾಚಲು ಪ್ರಯತ್ನಿಸುತ್ತಿರುವುದು ಖಂಡನೀಯ. ಟಿಪ್ಪು ಸುಲ್ತಾನ್ ಸೌಹಾರ್ದ ಆಡಳಿತ, ಶೂರತನ ಎಂದಿಗೂ ಅಮರ ಎಂದು ಹೇಳಿದರು.

ವಕೀಲ ಶ್ರೀನಾಥ ಪೂಜಾರಿ ಮಾತನಾಡಿ, ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಸ್ವಾತಂತ್ರ್ಯ ಸೇನಾನಿ ಹಜರತ್ ಟಿಪ್ಪು ಸುಲ್ತಾನ್ ಎಂದರು.

ಕಮ್ಯುನಿಷ್ಟ್ ನಾಯಕ ಸದಾನಂದ ಮೋದಿ, ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ಅಧ್ಯಕ್ಷ ಇರ್ಫಾನ್ ಶೇಖ್, ಮಹಿಳಾ ಹೋರಾಟಗಾರ್ತಿ ಸುರೇಖಾ ರಜಪೂತ, ಸ್ಲಂ ಅಭಿವೃದ್ಧಿ ಸಮಿತಿಯ ಅಕ್ರಮ್ ಮ್ಯಾಶಾಳಕರ, ರವೀಂದ್ರ ಜಾಧವ, ಯುವ ಮುಖಂಡ ಧನರಾಜ.ಎ, ರೈತ ಸಂಘದ ಅಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ಕಾರ್ಮಿಕ ಮುಖಂಡ ಸತಾರ ಇನಾಂದಾರ, ಕರವೇ ಅಧ್ಯಕ್ಷ ಸಾದಿಕ್ ಶೇಖ್, ಅನ್ವರ್ ಮಕಾನದಾರ, ದಲಿತ ವಿದ್ಯಾರ್ಥಿ ಪರಿಷತ್ನ ರಾಕೇಶ ಕುಮಟಗಿ, ತಿಪ್ಪಣ್ಣ ಕಮಲದಿನ್ನಿ, ಏಜಾಜ್ ಕಲಾದಗಿ, ನಾಸೀರ್ ನಾಗರಬೈಡಿ, ಅಬ್ದುಲ್ ರೌಫ್ ಮೌಲಾನಾ, ಇಸಾಕ್ ಲಕ್ಕುಂಡಿ, ನಜೀರ್ ತಾಳಿಕೋಟೆ, ಹಮೀರ್ ಹಮ್ಜಾ ಜಮಖಂಡಿ, ಕನ್ನಾನ್ ಮುಶ್ರೀಫ್, ಇಲಿಯಾಸ್ ಸುತಾರ, ಮಹೆಬೂಬ ಮದಭಾವಿ, ಅಕ್ಷಯ ಅಜಮನಿ, ರಫೀಕ್ ಹೆಬ್ಬಾಳ, ಹನ್ನಾನ್ ಶೇಕ್, ಸಾಹಿಲ್ ಜಮಖಂಡಿ,ಇರ್ಫಾನ್ ಶೇಖ್ ಇದ್ದರು.

ಟಿಪ್ಪು ಅಪ್ಪಟ ದೇಶ ಪ್ರೇಮಿ: ಘಾಟಗೆ

ವಿಜಯಪುರ: ಟಿಪ್ಪು ಸುಲ್ತಾನ್ ಅಪ್ಪಟ ದೇಶ ಪ್ರೇಮಿ. ದೇಶದ ಸ್ವಾತಂತ್ರ್ಯಕ್ಕಾಗಿ ಒಡಹುಟ್ಟಿದ ಎರಡು ಮಕ್ಕಳನ್ನು ಒತ್ತೆಯಿಟ್ಟ ಸ್ವಾತಂತ್ರ್ಯ ವೀರ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯಕುಮಾರ ಘಾಟಗೆ ಹೇಳಿದರು.

ನಗರದ ಹಜರತ್ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಹಾಗು ಸುವಿಧಾ ಸೋಸಿಯಲ್ ಗ್ರೂಪ್ ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ಅನೇಕ ಮಠ ಮಾನ್ಯಗಳನ್ನು ಗೌರವದಿಂದ ಕಂಡು ಜಿರ್ಣೋದ್ದಾರ ಮಾಡಿದ್ದು ಇತಿಹಾಸವಿದೆ ಎಂದರು.

ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬೀರಪ್ಪ ಜುಮನಾಳ ಮಾತನಾಡಿ, ಟಿಪ್ಪು ಬ್ರಿಟೀಷರೊಂದಿಗೆ ಹೋರಾಡಿದ್ದನೇ ಹೊರತು, ಭಾರತೀಯರೊಂದಿಗೆ ಅಲ್ಲ. ಟಪ್ಪುವಿನ ಆಡಳಿತ ಅತ್ಯಂತ ಮಾನವೀಯತೆಯಿಂದ ಕೂಡಿತ್ತು.ಶೃಂಗೇರಿ ಶಾರದಾ ಮಠವನ್ನು ಅನ್ಯರು ದೋಚಿ ಕಳ್ಳತನ ಮಾಡಿದಾಗ ಶ್ರೀಗಳಿಗೆ ಆತ್ಮಸ್ಥೈರ್ಯ ತುಂಬಿ ಮಠವನ್ನು ಜೀರ್ಣೋದ್ದಾರ ಮಾಡಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ ಎಂದರು.

ಸುವಿದಾ ಸೋಸಿಯಲ್ ಗ್ರೂಪ್ ಅಧ್ಯಕ್ಷ ಫಯಾಜ್ ಕಲಾದಗಿ ಮಾತನಾಡಿ, ಟಿಪ್ಪು ಆಡಳಿತ ಸೆರೆ ಮುಕ್ತವಾಗಿತ್ತು. ನಿರಾವರಿ, ತೋಟಗಾರಿಕೆಗೆ ಮಹತ್ವ ನೀಡಿದರು ಎಂದರು.

ಮುಖಂಡರಾದ ಹಾಸಿಂಪೀರ ವಾಲೀಕಾರ, ಸಲೀಮ ಜಹಗೀರದಾರ, ಶಿವನಗೌಡ ಕೋಟಿ, ರಾಜಶೇಖರ ಕುದರಿ, ಶ್ಯಾಮ ಸಿಂದೆ, ಪೈಸಲ್ ಪಟೇಲ, ಎಚ್. ಎಸ್. ಹರಿಯಾಲ, ಸಬ್ಬಿರ ಜಹಗೀರದಾರ, ಅಪ್ಸರ ಜಹಗೀರದಾರ, ಶಬ್ಬಿರ ಪಟೇಲ, ನಿರ್ಮಲಾ ಹೊಸಮನಿ, ಅಶ್ರಫ್ ಇಂಡಿಕರ, ಮುರ್ತುಜಾ ಪಟೇಲ, ರಿಜವಾನ್ ಮುಲ್ಲಾ, ನಬೀ ಮುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.