ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂದಗಿ: ಸೋರುವ ತಾಲ್ಲೂಕು ಆಡಳಿತ ಸೌಧ

Published 27 ಜುಲೈ 2023, 14:28 IST
Last Updated 27 ಜುಲೈ 2023, 14:28 IST
ಅಕ್ಷರ ಗಾತ್ರ

ಸಿಂದಗಿ: ‘ಅವ್ಯವಸ್ಥೆಯ ಆಗರವಾಗಿರುವ ತಾಲ್ಲೂಕು ಆಡಳಿತ ಸೌಧ ಕಟ್ಟಡ ಜಿಟಿಜಿಟಿ ಮಳೆಗೆ ಸೋರುತ್ತಿದೆ. ಆದಾಗ್ಯೂ ತಾಲ್ಲೂಕು ಆಡಳಿತ ಈ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ’ ಎಂದು ನಗರ ಸುಧಾರಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ವೇದಿಕೆಯ ಪದಾಧಿಕಾರಿಗಳು ಆಡಳಿತ ಸೌಧ ಕಟ್ಟಡಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪೂರ, ‘ತಾಲ್ಲೂಕು ಆಡಳಿತ ಸೌಧ ಕಟ್ಟಡ ಒಂದು ರೀತಿಯಲ್ಲಿ ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡದ ಮೇಲೆ ರಾಶಿರಾಶಿ ಕಸ ಬಿದ್ದಿದೆ. ಗಿಡಗಳು ಬೆಳೆದಿವೆ’ ಎಂದರು.

‘ನೂತನ ತಾಲ್ಲೂಕು ಆಡಳಿತ ಸೌಧ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ವರ್ಷಗಳೇ ಬೇಕಾಗುತ್ತವೆ. ಅಲ್ಲಿಯ ವರೆಗೆ ಈ ಆಡಳಿತ ಸೌಧ ಕಟ್ಟಡದ ದುರಸ್ತಿ ಮಾಡಬೇಕಿದೆ’ ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಶ್ರೀಶೈಲ ಯಳಮೇಲಿ, ಎಂ.ಎ.ಖತೀಬ, ತಮ್ಮಣ್ಣ ಈಳಗೇರ, ಶಾಂತು ರಾಣಾಗೋಳ, ಶಿವಶರಣ ಹೆಳವರ, ಶಂಕರಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ ಗಬಸಾವಳಗಿ, ಅವಧೂತ ಜೋಶಿ ಇದ್ದರು.

ಸಿಂದಗಿ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಮೇಲಿನ ಅವ್ಯವಸ್ಥೆ
ಸಿಂದಗಿ ತಾಲ್ಲೂಕು ಆಡಳಿತ ಸೌಧ ಕಟ್ಟಡದ ಮೇಲಿನ ಅವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT