ಸುರಪುರ: ನಗರದ ಜನದಟ್ಟಣೆ ಪ್ರದೇಶವಾದ ಪೊಲೀಸ್ ಠಾಣೆ ಮುಖ್ಯ ರಸ್ತೆಯಲ್ಲಿ ಬೃಹತ್ ಬೋರ್ಡ್ ಭಾನುವಾರ ಸಂಜೆ ಬೀಸಿದ ಭಾರಿ ಗಾಳಿಗೆ ನೆಲಕ್ಕುರುಳಿ ಆತಂಕ ಸೃಷ್ಟಿಸಿತು.

ಹತ್ತು ವರ್ಷಗಳ ಹಿಂದೆ ಅಂದಾಜು 20/15 ಅಡಿಯ ಬೃಹತ್ ಲೋಹದ ಬೋರ್ಡ್‍ನ್ನು ಈ ಸ್ಥಳದಲ್ಲಿ ಅಳವಡಿಸಲಾಗಿತ್ತು. ಈ ಬೋರ್ಡ್‌ಗೆ ಸರ್ಕಾರದ ಯೋಜನೆಗಳ ಫ್ಲೆಕ್ಸ್‌ಗಳನ್ನು ಅಂಟಿಸಲಾಗುತ್ತಿತ್ತು. ಬೋರ್ಡ್‍ನ ಪಕ್ಕವೇ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ನೂರಾರು ಜನ ತಿರುಗಾಡುತ್ತಾರೆ. ಪಕ್ಕದಲ್ಲೇ ನೀರು ಶುದ್ಧೀಕರಣ ಘಟಕ, ಸಾರ್ವಜನಿಕ ಶೌಚಾಲಯವಿದೆ. ಶಾಲಾ ಮಕ್ಕಳು, ಶಾಲಾ ವಾಹನ ಸಂಚರಿಸುತ್ತವೆ.

ಭಾನುವಾರವಿದ್ದರಿಂದ ಜನದಟ್ಟಣೆ ಇರಲಿಲ್ಲ. ವಾಹನ ಸಂಚಾರವೂ ವಿರಳವಾಗಿತ್ತು. ಒಮ್ಮೆಂದೊಮ್ಮೆಲೇ ನೆಲಕ್ಕುರಿಳಿದ ಬೋರ್ಡ್‍ನಿಂದ ಭಾರಿ ಶಬ್ದವಾಯಿತು. ಆ ಸಮಯದಲ್ಲಿ ಅಲ್ಲಿ ಯಾರೂ ಇರದಿದ್ದರಿಂದ ಅನಾಹುತ ಸಂಭವಿಸಲಿಲ್ಲ. ಸರ್ಕಾರ ಇಂತಹ ಬೃಹತ್ ಗಾತ್ರದ ಬೋರ್ಡ್‍ಗಳನ್ನು ಅಳವಡಿಸುವಾಗ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆಗಾಗ ಬೋರ್ಡ್‍ನ ಕಂಬಗಳ ಸ್ಥಿತಿ ಪರಿಶೀಲಿಸಬೇಕು ಎಂಬುದು ನಾಗರಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.