ಗುರುಮಠಕಲ್: ‘ಶರಣೆ ಮಹಾದೇವಿ ಅಕ್ಕನವರು ಕನ್ನಡದ ಪ್ರಥಮ ಮಹಿಳಾ ಕವಯತ್ರಿ. ಅವರು ಈ ನೆಲದ ಪ್ರಥಮ ಬಂಡಾಯ ಕವಯತ್ರಿ. ಅವರ ದೃಢ ಸಂಕಲ್ಪ ಹಾಗೂ ಸಿದ್ಧಾಂತಗಳು ನಮಗೆ ಸದಾಕಾಲವೂ ನೆನಪಿರಬೇಕಾದ ಮೌಲ್ಯಗಳಾಗಿವೆ’ ಎಂದು ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ ಅಭಿಪ್ರಾಯಪಟ್ಟರು.

ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ನಡೆದ ಶರಣೆ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಅಕ್ಕನವರು ಶರಣ ಚಳವಳಿಯ ಪ್ರಮುಖರು. ಶೂನ್ಯ ಸಿಂಹಾಸನದ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭುಗಳ ತೀಕ್ಷ್ಣವಾದ ಪರೀಕ್ಷೆಯಲ್ಲಿ ತಮ್ಮನ್ನು ನಿರೂಪಿಸಿಕೊಂಡ ಸತ್ಯ-ಸಾತ್ವಿಕತೆಯ ಮೂರ್ತಿ. ಸ್ವಾಭಿಮಾನದ, ಸ್ತ್ರೀವಾದಿ ಚಳವಳಿಯ ಪ್ರತಿನಿಧಿ, ವಚನಕಾರ ಶರಣರುಗಳ ಅಕ್ಕರೆಯ ಅಕ್ಕನಾಗಿ ಕಲ್ಯಾಣ ಕ್ರಾಂತಿಯ ಪ್ರಮುಖ ಶಕ್ತಿಯಾಗಿದ್ದರು’ ಎಂದು ಅವರು ಹೇಳಿದರು.

ಸಾವು, ನೋವುಗಳಿಲ್ಲ ಸ್ವಯಂ ಪರಿಪೂರ್ಣನಾದ ಮಹಾಶಿವನೆ ನನ್ನ ಪತಿ ಎಂದ ಅವರು, ಲೌಕಿಕ ಜಗತ್ತನ್ನು ಧಿಕ್ಕರಿಸಿ ಕೇಶಾಂಬರೆಯಾಗಿ ವೈರಾಗ್ಯ ಮೂರ್ತಿಯಾದರು. ಅವರ ಭಕ್ತಿ, ನಿಷ್ಠೆ ಹಾಗೂ ವಚನಗಳಲ್ಲಿನ ತತ್ವಗಳು ನಮಗೆಲ್ಲ ಮಾದರಿಯಾಗಿವೆ. ಅವರ ವಚನಗಳಲ್ಲಿನ ಸಾತ್ವಿಕ ಮತ್ತು ಬಂಡಾಯದ ಸಿದ್ಧಾಂತಗಳು ಮತ್ತು ಮಾರ್ಗದರ್ಶನದ ಮಾತುಗಳು ನಮಗೆ ಅನುಕರಣೀಯ ಎಂದು ತಿಳಿಸಿದರು.

ಸದಸ್ಯರಾದ ಆಶನ್ನ ಬುದ್ದ, ಬಾಬು ತಲಾರಿ, ನವಾಜರೆಡ್ಡಿ ಗವಿನೋಳ, ಅನ್ವರ ಅಹ್ಮದ್, ಪ್ರಮುಖರಾದ ಚಂದುಲಾಲ್ ಚೌದ್ರಿ, ರಘುನಾಥರೆಡ್ಡಿ ಗವಿನೋಳ, ಶರಣಪ್ಪ ಲಿಕ್ಕಿ, ನರಸಪ್ಪ ಧನವಾಡ, ಚಾಂದಪಾಶ, ಫಯಾಜ್ ಅಹ್ಮದ್, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.