ಗುರುಮಠಕಲ್: ತಾಲ್ಲೂಕಿನ ಗುಂಜನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ (ಎಂಡಿಆರ್ ಎಸ್) ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಆರೋಪದಂತೆ ಇಬ್ಬರು ಶಿಕ್ಷಕರ ವಿರುದ್ಧ ಮಂಗಳವಾರ ಪೋಕ್ಸೊ ಪ್ರಕರಣ ದಾಖಲಾಗಿದೆ.

ಗುಂಜನೂರು ಎಂ.ಡಿ.ಆರ್.ಎಸ್. ಪ್ರಾಂಶುಪಾಲ ಅಕ್ಬರ್ ಅಲಿ ಅತ್ತಾರ್ ನೀಡಿದ ದೂರಿನಂತೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಶಾಂತಪ್ಪ ಮ್ಯಾಗೇರಿ ಮತ್ತು ಅತಿಥಿ ಶಿಕ್ಷಕ ಅಂಬರೀಶ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಜತೆಗೆ ಅಸಭ್ಯ ವರ್ತನೆ, ಭುಜದ ಮೇಲೆ ಕೈಹಾಕುವುದು, ಕೆಟ್ಟ ಶಬ್ದಗಳಿಂದ ಬಯ್ಯುವುದು ಮತ್ತು ದ್ವಂದ್ವಾರ್ಥದ ಶಬ್ದಗಳು ಮಾತನಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ನನಗೆ ಮೇಲ್ನೋಟಕ್ಕೆ ಸತ್ಯವೆಂದು ತಿಳಿದುಬಂದಿದೆ' ಎಂದು ಪ್ರಾಂಶುಪಾಲ ಅಕ್ಬರ್ ಅಲಿ ಅತ್ತಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿದೆ.

'ಸೋಮವಾರ ಶಾಲೆಯ ವಾರ್ಡನ್ ಮೀರನ್ ಅಲಿ ವಿರುದ್ಧವೂ ಆರೋಪ ಕೇಳಿಬಂದಿತ್ತು. ಆದರೆ, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಸರಿಯಾಗಿ ತನಿಖೆಯಾಗಬೇಕು. ವಾರ್ಡನ್ ವಿರುದ್ಧದ ಆರೋಪವನ್ನು ಒಂದೇ ದಿನದಲ್ಲಿ ಹೇಗೆ ಬದಲಿಸಿದ್ದಾರೆ? ಯಾವ ಮತ್ತು ಯಾರ ಪ್ರಭಾವ ಬಳಕೆಯಾಗಿದೆ ಎನ್ನುವ ಕುರಿತೂ ಪಾರದರ್ಶಕ ತನಿಖೆಯಾಗಲಿ' ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.