ನಾರಾಯಣಪುರ: ಅಪಘಾತದಲ್ಲಿ ಈಚೆಗೆ ನಿಧನರಾದ ಇಲ್ಲಿನ ಮಾರನಾಳ ಕ್ರಾಸ್ ನಿವಾಸಿ ಮಾನಪ್ಪ ಅವರ ಪತ್ನಿ ಶಿವಬಾಯಿ ಅವರಿಗೆ ಸ್ಥಳೀಯ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಅಶೋಕಕುಮಾರ ಅವರು ಶನಿವಾರ ಪಿಎಂಎಸ್‌ಬಿವೈ ವಿಮೆಯ ₹2 ಲಕ್ಷ ಮೊತ್ತದ ಚೆಕ್ ವಿತರಿಸಿದರು.

ಈ ವೇಳೆ ವ್ಯವಸ್ಥಾಪಕ ಅಶೋಕಕುಮಾರ ಮಾತನಾಡಿ, ಬ್ಯಾಂಕ್ ಗ್ರಾಹಕರು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿ ವಾರ್ಷಿಕ ₹ 436 ವಿಮೆ ಮೊತ್ತ ಪಾವತಿಸಿದರೆ, ಪಾವತಿಸಿದ ವರ್ಷದ ಅವಧಿಯೊಳಗೆ ಅಕಾಲಿಕ ನಿಧನರಾದರೆ ಮೃತರ ವಾರಸುದಾರರಿಗೆ ₹ 2 ಲಕ್ಷ ಮೊತ್ತದ ವಿಮಾ ಪರಿಹಾರ ದೊರೆಯಲಿದೆ. ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ವಾರ್ಷಿಕ ₹20 ಪಾವತಿಸಿ, ಗ್ರಾಹಕರಿಗೆ ₹ 2 ಲಕ್ಷ ಮೊತ್ತದ ಅಪಘಾತ ವಿಮೆ ದೊರೆಯಲಿದೆ. ಎರಡು ಮಹತ್ವದ ವಿಮಾ ಯೋಜನೆಗಳು ಕಡಿಮೆ ಪ್ರಿಮಿಯಮ್ ಮೊತ್ತದ್ದಾಗಿದ್ದು, ಗ್ರಾಹಕರು ಎರಡು ವಿಮಾ ಯೋಜನೆಗಳ ಬಗ್ಗೆ ಶಾಖೆಯ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ವಿಮೆ ಪಡೆಯಬಹುದಾಗಿದೆ ಎಂದು ಹೇಳಿದರು.

ಶಿವಕುಮಾರ ಎ.ಕೆ, ಸಿಎಸ್‌ಸಿ ಶಿವಾಜಿ ಮುತ್ತು, ರಮೇಶ ಕುಂಬಾರ, ರಾಮು ನಾಯಕ್, ನಾರಾಯಣ ನಾಯಕ, ಮೋತಿಲಾಲ್ ನಾಯಕ, ಶಿವು ಎ.ಕೆ.ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.