ಕಕ್ಕೇರಾ: ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು’ ಯುವ ಮುಖಂಡ ರಾಜಾ ವಿಜಯಕುಮಾರ ನಾಯಕ ಹೇಳಿದರು.

ಸಮೀಪದ ಬೂದಗುಂಪಿದೊಡ್ಡಿಯ ರೇವಣಸಿದ್ದೇಶ್ವರ ಮಹಾಸಂಸ್ಥಾನ ಮಠದ ವತಿಯಿಂದ ಈಚೆಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮನಿಮಿತ್ತ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಲಕ್ಷಾಂತರ ಜನರು ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಮುಖರು. ರಾಯಣ್ಣ ಸಿಂಹಸ್ವಪ್ನವಾಗಿ ಕಾಡುವ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಯುವಕರು ಸಂಗೊಳ್ಳಿರಾಯಣ್ಣನಂತಹ ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜೆಡಿಎಸ್ ಮುಖಂಡ ದೇವಿಂದ್ರಪ್ಪ ಬಳಿಚಕ್ರ ಮಾತನಾಡಿ, ಹಾಲುಮತ ಸಮಾಜದಲ್ಲಿ ಹುಟ್ಟಿದ ಸಂಗೊಳ್ಳಿ ರಾಯಣ್ಣ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಬ್ರಿಟಿಷರನ್ನು ಮಟ್ಟ ಹಾಕುವಲ್ಲಿ ಬಹುವಾಗಿ ಶ್ರಮಿಸಿದ ಕ್ರಾಂತಿ ಪುರುಷ ಎಂದರು.

ಕನಕಗುರು ಪೀಠದ ಸಿದ್ಧರಾಮಾನಂದ ಸ್ವಾಮೀಜಿ ಮಾತನಾಡಿ, ರೇವಣಸಿದ್ದೇಶ್ವರ ಮಠವು ಪ್ರತಿವರ್ಷ ಹಲವು ಕಾರ್ಯಕ್ರಮ ಏರ್ಪಡಿಸುವ ಮೂಲಕ ಈ ಭಾಗದಲ್ಲಿ ಮಾದರಿಯಾಗಿದೆ. ಯುವಕರು ಟಿವಿ, ಮೊಬೈಲ್, ಬೈಕ್‌ನಂತಹ ಮೋಜಿನ ಆಟಗಳನ್ನು ತ್ಯಜಿಸಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಗತೀರ್ಥದ ಶಾಂತಮಯ ಸ್ವಾಮೀಜಿ, ಶರಭಯ್ಯ ಸ್ವಾಮೀಜಿ, ನಂದಣ್ಣಪ್ಪ ಪೂಜಾರಿ, ಕೆಂಚರಾಯ ಪೂಜಾರಿ, ಮುಖಂಡರಾದ ಶಿವಣ್ಣ ಮಂಗಿಹಾಳ, ರಾಜಾ ಮುಕುಂದನಾಯಕ, ಮಲ್ಲಣ್ಣ ಐಕೂರ, ಪ್ರವೀಣಕುಮಾರ, ರಮೇಶ ತೆಗ್ಗಿನಮನಿ, ನಿಂಗಯ್ಯಗೌಡ ಬೂದಗುಂಪಿ, ಗುಂಡಪ್ಪ ಸೋಲಾಪೂರ, ಬಸಯ್ಯ.ಬಿ.ಸ್ವಾಮಿಕಾಳಪ್ಪ ಕವಾತಿ, ನಂದಣ್ಣ ಬಾಕ್ಲಿ, ರವಿಚಂದ್ರ ಸಾಹುಕಾರ್, ಪರಮಣ್ಣ ನಿಲೋಗಲ್, ರಾಧಿಕಾ ಬಿರಾದಾರ, ಬಸಯ್ಯಸ್ವಾಮಿ, ಕೆ.ಗವಿಸಿದ್ದೇಶ ಹೊಗರಿ, ಮಲ್ಲಣ್ಣ ಹುಲಿಕೇರಿ, ಬೀರಲಿಂಗ ಬಾದ್ಯಾಪೂರ, ಮಲ್ಲಿಕಾರ್ಜುನಗೌಡ ಬೂದಗುಂಪಿ, ಗ್ಯಾನಪ್ಪ ಮೇಟಿ, ನಂದಕುಮಾರ ಸಿದ್ದಾಪೂರ, ಆನಂದಸ್ವಾಮಿ, ಸೋಮು ಪೀರಗಾ ಹಾಜರಿದ್ದರು.

ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆಯಲ್ಲಿ 70 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಕಲಬುರಗಿಯ ವಿಶ್ವನಾಥ ಪ್ರಥಮ ಸ್ಥಾನಗಳಿಸಿ ನಗದು ₹ 20 ಸಾವಿರ ಗಳಿಸಿದರು. ಸುರಪುರದ ಮಂಜುನಾಥ ಬಾದ್ಯಾಪೂರ ದ್ವಿತೀಯ ಸ್ಥಾನ (₹15 ಸಾವಿರ) ಪಡೆದರು. ಧಾರವಾಡದ ಮಂಜುನಾಥ ಮೂರನೇ ಸ್ಥಾನ (₹ 10 ಸಾವಿರ) ಪಡೆದುಕೊಂಡರು.

ಸಿದ್ದು ಪೂಜಾರಿ ನಿರೂಪಣೆ ಮಾಡಿದರು. ಯಮನೂರಪ್ಪ ಚೌಡಾಪುರ ಸ್ವಾಗತಿಸಿದರು. ದೇವಣ್ಣ ಕುರಿ ಪರಿಚಯಿಸಿದರು. ಸಿದ್ದು ಕಾಳಗಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.