ಶಹಾಪುರ: ಮತದಾನ ಕರ್ತವ್ಯಕ್ಕೆ ಹಾಜರಾಗಲು ಸೋಮವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯಾ ಮತಗಟ್ಟೆ ಕೇಂದ್ರಗಳಿಗೆ ತೆರಳು ಸಿಬ್ಬಂದಿ ಆಗಮಿಸಿ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಂಡರು.

ಒಟ್ಟು 77 ರೂಟ್ ಇದ್ದು, 31 ಬಸ್, 56 ಕ್ರೂಸರ್ ಹಾಗೂ 1,258 ಸಿಬ್ಬಂದಿ ಸೇರಿ 265 ಮತಗಟ್ಟೆಯ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಲಕ್ಷ್ಮಣ ಶೃಂಗೇರಿ ಮಾಹಿತಿ ನೀಡಿದರು.

ಕ್ಷೇತ್ರದಲ್ಲಿ ಒಟ್ಟು 2,47,138 ಮತದಾರರು ಇದ್ದಾರೆ. ಅದರಲ್ಲಿ 1,23,339 ಪುರುಷ ಹಾಗೂ 1,23,784 ಮಹಿಳೆ ಹಾಗೂ 15 ತೃತೀಯ ಲಿಂಗಿಗಳು ಸೇರಿದ್ದಾರೆ.

ಬಿಗಿ ಬಂದೋಬಸ್ತ್: ಮತದಾನ ಸುವ್ಯವಸ್ಥಿತವಾಗಿ ನಡೆಸಲು ಒಬ್ಬರು ಡಿವೈಎಸ್ಪಿ, ಮೂವರು ಸಿಪಿಐ, 12 ಪಿಎಸ್ಐ, 13 ಎಎಸ್ಐ, 46 ಹೆಡ್ಕಾನ್ಸ್ಟೆಬಲ್, 257 ಕಾನ್ಸ್ಟೆಬಲ್ ಹಾಗೂ 40 ಮಹಿಳಾ ಕಾನ್ಸ್ಟೆಬಲ್, 1 ಡಿಆರ್, 1ಕೆಎಸ್ಆರ್ಪಿ ತುಕಡಿ ನಿಯೋಜಿಸಿದೆ. ಅಲ್ಲದೇ 40 ಸೂಕ್ಷ್ಮ ಮತಗಟ್ಟೆಗಳು ಹಾಗೂ 215 ಸಾಮಾನ್ಯ ಮತಗಟ್ಟೆಯಾಗಿವೆ. 20 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಮೇ 7ರಂದು ನಡೆಯಲಿರುವ ಮತದಾನ ದಿನದಂದು ಆಯಾ ಮತಗಟ್ಟೆಗೆ ಬರುವ ಮತದಾರರಿಗೆ ಕಡ್ಡಾಯವಾಗಿ ಮತಗಟ್ಟೆ ಒಳಗೆ ಮೊಬೈಲ್ ತರುವುದನ್ನು ನಿಷೇಧಿಸಿದ ನಾಮಫಲಕವನ್ನು ಹಾಕಲಾಗಿದೆ.

ಪ್ರಸಕ್ತ ಬಾರಿ ಮತದಾನದ ವೇಳೆ ಹಲವು ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ 194, 218, 86, 187, 186 ಅನ್ನು ಮಹಿಳಾ ಅಧಿಕಾರಿಗಳು ನಿರ್ವಹಣೆ ಮಾಡುವ ಪಿಂಕ್ ಬಣ್ಣದ ಮತಗಟ್ಟೆಗಳಾಗಿ ಮಾರ್ಪಾಡು ಮಾಡಲಾಗಿದೆ. ಮಾದರಿ ಮತಗಟ್ಟೆಯಾಗಿ ಗಂಗಾನಗರದ ಮತಗಟ್ಟೆ ಸಂಖ್ಯೆ 152 ಗುರುತಿಸಲಾಗಿದೆ. ಅಲ್ಲದೇ ಯುವ ಮತದಾರರ ಮತಗಟ್ಟೆಯನ್ನು ತಾಲ್ಲೂಕಿನ ದರ್ಶನಾಪುರ ಗ್ರಾಮದ ಮತಗಟ್ಟೆ ಸಂಖ್ಯೆ 79 ಅನ್ನು ಗುರುತಿಸಲಾಗಿದೆ. ಸಾಂಪ್ರದಾಯಕ ಮತಗಟ್ಟೆ ಸಂಖ್ಯೆ 172 ರಲ್ಲಿ (ದಿಗ್ಗಿ ಬೇಸ್ ಸಿ.ಬಿ.ಶಾಲೆ) ರಲ್ಲಿ ಶಹಾಪುರ ಕೋಟೆ, ಸಗರ ಚಕ್ರವರ್ತಿ ಆಳಿದ ಸಗರ ನಾಡಿನ ಕೇಂದ್ರ, ಸಗರಾದ್ರಿ ಬೆಟ್ಟ, ನೈಸರ್ಗಿಕವಾಗಿ ಬೆಟ್ಟದ ಸಾಲುಗಳ ಮೇಲೆ ಮಲಗಿದ ಬುದ್ದನ ದೃಶ್ಯವನ್ನು ಚಿತ್ರಿಸಿದೆ.

ನೆರಳಿನ ಆಸರೆ ಇಲ್ಲದೇ ವೈದ್ಯರು: ಪರದಾಟ

ಶಹಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮತದಾನ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಯ ಆರೋಗ್ಯದಲ್ಲಿ ತುಸು ಏರು ಪೇರಾದರೆ ಪ್ರಥಮ ಚಿಕಿತ್ಸೆ ನೀಡಲು ವೈದ್ಯರ ತಂಡವನ್ನು ನಿಯೋಜಿಸಲಾಗಿತ್ತು. ಆದರೆ ತಪಾಸಣೆ ಮಾಡುವ ವೈದ್ಯರ ತಂಡಕ್ಕೆ ನೆರಳಿನ ಆಸರೆ ಇಲ್ಲದ ಕಾರಣ ಬಿಸಿಲಿನಲ್ಲಿಯೇ ಕರ್ತವ್ಯ ನಿರ್ವಹಿಸಿದರು.

ಒಟ್ಟು ಆರು ಪಾಳೆಯ ಪೈಕಿ ಪ್ರತಿ ಪಾಳೆಯಲ್ಲಿ ಆರು ಸಿಬ್ಬಂದಿ ಸೇವೆ ಸಲ್ಲಿಸಲಿದ್ದಾರೆ. ಅಲ್ಲದೇ ಒಂದು ಆಂಬ್ಯುಲೆನ್ಸ್ ಸಹ ಸಿದ್ಧವಾಗಿರಿಸಲಾಗಿದೆ. ನೆರಳಿನ ವ್ಯವಸ್ಥೆ ಮಾಡಿ ಎಂದು ಮೇಲಧಿಕಾರಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ ಎಂದು ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.