ಸೈದಾಪುರ: ‘ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಮ್ಮ ಪೂರ್ವಜರ ಮತ್ತು ಕೋಟ್ಯಂತರ ಭಕ್ತರ ಶತಮಾನಗಳ ಕನಸು ನನಸಾಗಿದೆ’ ಎಂದು ಸಿದ್ಧಾರೂಢ ಸಿದ್ದಚೇತನಾಶ್ರಮದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ವಿಶ್ವನಾಥ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ನಡೆದ ಅಯೋಧ್ಯೆಯ ಅಕ್ಷತೆ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಗವಾನ್ ರಾಮನು ಮಾನವ ಜನ್ಮದಲ್ಲಿ ಅಯೋಧ್ಯೆಯ ರಾಜ ದಶರಥ ಮತ್ತು ಕೌಶಲ್ಯಯ ಮಗನಾಗಿ ಜನಿಸಿ, ಮಾನವರು ಹೇಗೆ ಜೀವನ ಸಾಗಿಸಬೇಕು ಎಂದು ತಿಳಿಸಿಕೊಟ್ಟ ಮಹಾನ್ ದೈವಿ ಪುರುಷ. ಪ್ರಭು ರಾಮನಲ್ಲಿರುವ ಅತ್ಯುತ್ತಮ ಗುಣಗಳಿಂದಾಗಿ ಆತನನ್ನು ಮರ್ಯಾದೆ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಆ ಗುಣಗಳನ್ನು ನಾವು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಅಯೋಧ್ಯೆಯ ಅಕ್ಷತೆ ವಿತರಣಾ ಅಭಿಯಾನದ ಜಿಲ್ಲಾ ಸಂಯೋಜಕ ಮಲ್ಲರೆಡ್ಡಿ ಪಾಟೀಲ ಮಾತನಾಡಿ,‘ಶ್ರೀರಾಮನ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಅದರ ಅಂಗವಾಗಿ ಜ.1ರಿಂದ 15ರ ತನಕ ದೇಶದಾದ್ಯಂತ ಮನೆ ಮನೆಗೆ ಮಂತ್ರಾಕ್ಷತೆ, ಕರಪತ್ರ ವಿತರಣೆ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಈ ವೇಳೆ ವಿಶ್ವ ಹಿಂದು ಪರಿಷದ್ ಜಿಲ್ಲಾ ಉಪಾಧ್ಯಕ್ಷ ಬನದೇಶ್ವರ ವಾರದ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಕಾರ್ಯವಾಹಕ ಸೂಗಪ್ಪ ಮಂದಲ್, ನೀತಿನ್ ತಿವಾರಿ, ಹೋಬಳಿ ಪ್ರಮುಖ ಚಂದ್ರಕಾಂತ ತೀಮ್ಮೋಜಿಕರ್, ಗುರುಮಠಕಲ್ ಭಾಜಪ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮಡಿವಾಳಕರ್, ಪ್ರೇಮನಾಥ ಕದಂಬ, ಕೆಬಿ ಗೋವರ್ಧನ, ಕೆಪಿ ವಸಂತಕುಮಾರ, ರಾಕೇಶ ಕೋರೆ, ಅಂಬರೀಶ ನಾಯಕ್, ರವಿ ಪಾಟೀಲ್, ಲಕ್ಷ್ಮಣ ನಾಯಕ್ ನೀಲಹಳ್ಳಿ, ಕಮಲಾ ಕುಲಕರ್ಣಿ, ಇಸ್ಕಾನ್ ಸದಸ್ಯೆ ಮಧುಶ್ರೀ ಸಿದ್ದಪ್ಪ, ಶ್ರೀದೇವಿ ಪಾಟೀಲ್ ಶೆಟ್ಟಿಹಳ್ಳಿ, ಮಹಾಲಕ್ಷ್ಮೀ ಪಾಟೀಲ್ ಸಂಗವಾರ, ಅಳ್ಳೆಪ್ಪ ಕಿಲ್ಲನಕೇರ, ಅವಿನಾಶ ಮನ್ನೆ, ರಣದೀರ್, ಸಂತೋಷ, ರಾಹುಲ್, ಹಣಮೇಶ ಸೇರಿದಂತೆ ಇತರರಿದ್ದರು.

ವಿಶೇಷ ಶೋಭಾಯಾತ್ರೆ:

ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯ ಅಕ್ಷತಾ ಗಂಟುಗಳಿಗೆ ಪಟ್ಟಣದ ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬಸವೇಶ್ವರ ಕನಕದಾಸ ಬಾಬು ಜಗಜೀವನ್ ರಾಂ ಹಾಗೂ ಅಂಬಿಗರ ಚೌಡಯ್ಯ ವೃತ್ತ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ಮೂಲಕ ವಿಶ್ವನಾಥ ಮಂದಿರದವರೆಗೆ ಶೋಭಾಯಾತ್ರೆ ನಡೆಸಲಾಯಿತು. ಇಸ್ಕಾನ್ ತಂಡದ ವಾದ್ಯ ಮತ್ತು ಹಾಡುಗಳು ಶೋಭಾಯಾತ್ರೆಗೆ ಮೆರುಗು ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.