ಗುರುಮಠಕಲ್: ಪಟ್ಟಣದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಏಕಾಏಕಿ ಬಿರುಗಾಳಿ ಸಮೇತ ಮೂರು ನಿಮಿಷ ಕಾಲ ಸುರಿದ ಆಲಿಕಲ್ಲು ಮಳೆಗೆ ಸಂಚಾರ ಅಸ್ತವ್ಯವಸ್ಥಗೊಂಡಿದ್ದು, ಭಾರಿ ಗಾಳಿ ಬೀಸಿದ್ದರಿಂದ ಅಲ್ಲಲ್ಲಿ ಮರಗಳು ಧರೆಗುರುಳಿದಿದ್ದು, ಟೀನ್ ಶೆಡ್, ಗೂಡಂಗಡಿ ರಸ್ತೆಗೆ ಬಿದ್ದಿವೆ.

ಪಟ್ಟಣದ ಬಸ್ ನಿಲ್ದಾಣದ ತರಕಾರಿ ಅಂಗಡಿಗಳ ಎದುರಿನ ಬೇವಿನ ಮರ ಮುರಿದು ರಸ್ತೆಗೆ ಬಿದ್ದರೆ, ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಗೂಡಂಗಡಿಗಳು ಗಾಳಿಗೆ ನೆಲದಲ್ಲಿ ಉರುಳಿದ್ದು, ಅಂಗಡಿಯ ಪತ್ರಾಸಗಳು ಹಾರಿವೆ. ಕಾಕಲವಾರ ಕ್ರಾಸ್ ರಸ್ತೆಯಲ್ಲಿನ ಅಂಗಡಿಗಳ ಮುಂಗಟ್ಟಿನ ಟೀನ್ ಶೆಡ್ (ಪತ್ರಾಸ್) ಗಾಳಿಯಲ್ಲಿ ಹಾರಿದ್ದು, ರಸ್ತೆಯಲ್ಲಿ ಬಿದ್ದಿದ್ದವು.

ಮಂಗಳವಾರ ಬೆಳಿಗ್ಗೆಯಿಂದ ಬಿಸಿಲು ಮತ್ತು ಧಗೆಯ ವಾತಾವರಣವಿತ್ತು. ಸಂಜೆ ವೇಳೆ ಧಗೆಯು ಕೊಂಚ ಹೆಚ್ಚಿತು. ರಾತ್ರಿ 8ಕ್ಕೆ ಭಾರಿ ಗಾಳಿ ಬೀಸಲು ಆರಂಭಗೊಂಡಿದ್ದು, ಗಾಳಿಯ ಹಿಂದೆಯೇ ಆಲಿಕಲ್ಲು ಮಳೆ ಸುರಿಯಲಾರಂಭಿಸಿತು. ಮೂರು ನಿಮಿಷ ಕಾಲ ಸುರಿದ ನಂತರ ಮಳೆ ನಿಂತಿತು. ಗುಡುಗು ಆರಂಭಗೊಂಡಿತು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುಡುಗು, ಗಾಳಿ ಸಮೇತ ಮಳೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.