ಯರಗೋಳ (ಯಾದಗಿರಿ ಜಿಲ್ಲೆ): ಸುತ್ತಲಿನ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಆಕಾಶದಲ್ಲಿ ಖಗೋಳ ವಿಸ್ಮಯ ಗೋಚರಿಸಿತು. ಸೂರ್ಯನ ಸುತ್ತಲು ಉಂಗುರದ ಆಕಾರ ಸುತ್ತವರೆದಿತ್ತು. ಸ್ಪಷ್ಟವಾಗಿ ಗೋಚರಿಸುತ್ತಿದ್ದ ಚಿತ್ರಣವನ್ನು ಯುವಕರು, ಯುವತಿಯರು, ಮಕ್ಕಳು ಮೊಬೈಲ್ಗಳಲ್ಲಿ ಚಿತ್ರಗಳನ್ನು ಸೆರೆಹಿಡಿದರು. ಹತ್ತಿಕುಣಿ, ಮಲಕಪ್ಪನಳ್ಳಿ, ಬಂದಳ್ಳಿ, ಯಡ್ಡಳ್ಳಿ, ಹೊನಗೇರಾ, ಮುದ್ನಾಳ, ವೆಂಕಟೇಶ್ ನಗರ, ಚಾಮನಾಳ, ವಡ್ನಳ್ಳಿ, ಬಸವಂತಪುರ, ಕ್ಯಾಸಪನಳ್ಳಿ, ಖಾನಳ್ಳಿ, ಅಬ್ಬೆತುಮಕೂರು ಗ್ರಾಮಗಳಲ್ಲಿ ಗೋಚರಿಸಿತು.

'ಸೂರ್ಯನ ಸುತ್ತ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಿಸುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಇರುವ ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ' ಎಂದು ಮುದ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕಿ ಗೌರಮ್ಮ ತಿಳಿಸಿದರು.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸೂರ್ಯನ ಸುತ್ತಲು ಕಾಮನಬಿಲ್ಲಿನಉಂಗುರದ ಆಕಾರ ಗೋಚರವಾಗಿತ್ತು. ಇದೀಗ ಯಾದಗಿರಿಯಲ್ಲಿಯೂ ಈ ಚಮತ್ಕಾರ ಗೋಚರಿಸಿದ್ದು, ಯುವಕ, ಯುವತಿಯರ ಮೊಬೈಲ್ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.