ಅಟಲ್ ಸುರಂಗ

ಹಿಮಾಚಲ ಪ್ರದೇಶ ರೋಹತಾಂಗ್ ಪಾಸ್‌ನ ತಳಭಾಗದಲ್ಲಿ ಈ ಸುರಂಗವನ್ನು ನಿರ್ಮಿಸಲಾಗಿದೆ. ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಾಖ್‌ನ ಲೇಹ್ ನಡುವಣ ಹೆದ್ದಾರಿಯಲ್ಲಿ ಇದು ಸಿಗುತ್ತದೆ. ಎರಡೂ ನಗರಗಳ ನಡುವಣ ಪ್ರಯಾಣದ ಅವಧಿಯಲ್ಲಿ 3-4 ತಾಸು ಮತ್ತು ಅಂತರದಲ್ಲಿ 45 ಕಿ.ಮೀ.ನಷ್ಟು ಕಡಿಮೆಯಾಗುತ್ತದೆ. ಎರಡೂ ನಗರಗಳ ನಡುವೆ ಸರ್ವಋತು ರಸ್ತೆ ಸಂಪರ್ಕವನ್ನು ಸಾಧಿಸಲು ನೆರವಾಗಿದೆ.

9.02 ಕಿ.ಮೀ. ಸುರಂಗದ ಉದ್ದ

ಇದನ್ನೂ ಓದಿ:ಒಳನೋಟ| ಸರಕು ಮಾರ್ಗಕ್ಕೆ ಸುರಂಗ

ಶ್ಯಾಮ ಪ್ರಸಾದ್ ಮುಖರ್ಜಿ ಸುರಂಗ

ಜಮ್ಮು ಮತ್ತು ಶ್ರೀನಗರದ ನಡುವಣ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಸುರಂಗ ಮಾರ್ಗವಿದೆ. ದೇಶದ ಅತ್ಯಂತ ಉದ್ದದ ಸುರಂಗ ಎನಿಸಿದೆ. ಎರಡೂ ನಗರಗಳ ನಡುವೆ 30 ಕಿ.ಮೀ.ನಷ್ಟು ಅಂತರವನ್ನು ಹಾಗೂ ಪ್ರಯಾಣದ ಸಮಯದಲ್ಲಿ 2 ತಾಸಿನಷ್ಟು ಇಳಿಕೆಯಾಗಲು ನೆರವಾಗಿದೆ.

9.28 ಕಿ.ಮೀ. ಸುರಂಗದ ಉದ್ದ

ಇದನ್ನೂ ಓದಿ:ಸುರಂಗ ಮಾರ್ಗ ಬದಲಿಗೆ ಇದ್ದ ರಸ್ತೆ ವಿಸ್ತರಿಸಿದ್ದರೆ ಸಾಕಿತ್ತು: ಪರಿಸರ ಪ್ರಿಯರು

ಜವಾಹರ್ ಸುರಂಗ

ಜಮ್ಮು-ಕಾಶ್ಮೀರದ ಬನಿಹಾಲ್ ಪಾಸ್‌ನ ಬಳಿ ಇದನ್ನು ನಿರ್ಮಿಸಲಾಗಿದೆ. 1956ರಿಂದ ಈ ಸುರಂಗ ಬಳಕೆಯಲ್ಲಿ ಇದೆ. ಶ್ರೀನಗರ ಮತ್ತು ಜಮ್ಮು ಮಧ್ಯೆ ಸರ್ವಋತು ಸಂಪರ್ಕವನ್ನು ಸಾಧಿಸಲು ನಿರ್ಮಿಸಲಾದ ಮೊದಲ ಸುರಂಗವಿದು.

2.85 ಕಿ.ಮೀ. ಸುರಂಗ ಉದ್ದ

ಛತ್ತರ್‌ಗಲಾ ಸುರಂಗ

ಈ ಸುರಂಗವು ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ದೋಡಾ ಮತ್ತು ಕಠುವಾ ಜಿಲ್ಲೆಗಳ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗದ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯು 4 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಛತ್ತರ್‌ಗಲಾವನ್ನು ಹಾದುಬರುವ ಹೆದ್ದಾರಿಯು ಪಂಜಾಬ್‌ನ ಲಖನ್‌ಪುರ ಜಿಲ್ಲೆಗೂ ಸಂಪರ್ಕ ಕಲ್ಪಿಸುತ್ತದೆ.

6.8 ಕಿ.ಮೀ. ಸುರಂಗದ ಉದ್ದ

ಝಮೋರ್ ಸುರಂಗ

ಕಾಶ್ಮೀರದ ಶ್ರೀನಗರ ಮತ್ತು ಲಡಾಖ್‌ನ ಕಾರ್ಗಿಲ್ ನಡುವಣ ಹೆದ್ದಾರಿಯಲ್ಲಿ ಈ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಶ್ರೀನಗರ ಮತ್ತು ಕಾರ್ಗಿಲ್ ಮಧ್ಯೆ ವರ್ಷಪೂರ್ತಿ ರಸ್ತೆ ಸಂಪರ್ಕವನ್ನು ಸಾಧಿಸಲು ಇದು ನೆರವಾಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಕಾಶ್ಮೀರದ ನಡುವಣ ಗಡಿ ನಿಯಂತ್ರಣಾ ರೇಖೆಗೆ (ಎಲ್‌ಒಸಿ) ಸೇನಾ ವಾಹನಗಳು ಓಡಾಟಕ್ಕೆ ಅನುಕೂಲವಾಗಲಿದೆ.

6.5 ಕಿ.ಮೀ. ಸುರಂಗದ ಉದ್ದ

ಜೊಜಿಲಾ ಪಾಸ್ ಸುರಂಗ

ಶ್ರೀನಗರ-ಕಾರ್ಗಿಲ್-ಲೇಹ್ ಮಾರ್ಗದಲ್ಲಿ ಬರುವ ಜೊಜಿಲಾ ಪಾಸ್‌ನ ಅಡಿಯಲ್ಲಿ ಈ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ವರ್ಷಪೂರ್ತಿ ರಸ್ತೆ ಸಂಪರ್ಕವನ್ನು ಸಾಧಿಸಲು ಇದು ನೆರವಾಗುತ್ತದೆ. ಲಡಾಖ್‌ನ ಪೂರ್ವ ಭಾಗಗಳಿಗೆ ಸೇನಾ ವಾಹನಗಳನ್ನು ತ್ವರಿತವಾಗಿ ಕಳುಹಿಸಲೂ ಈ ಸುರಂಗವು ನೆರವಾಗಲಿದೆ.

14.2 ಕಿ.ಮೀ. ಸುರಂಗದ ಉದ್ದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.