ನವದೆಹಲಿ: ಸೇನಾ ನಿವೃತ್ತರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಇಂಡಿಯನ್ ಕೋಸ್ಟ್ ಗಾರ್ಡ್ (ICG) ಜೊತೆಗೆ ಅಮೆಜಾನ್ ಇಂಡಿಯಾ ಒಡಂಬಡಿಕೆಗೆ ಸಹಿ ಹಾಕಿದೆ.

ಆಗಸ್ಟ್ 2019ರಲ್ಲಿ ಅಮೆಜಾನ್ ಇಂಡಿಯಾ ಮಿಲಿಟರಿ ವೆಟರನ್ಸ್ ಎಂಪ್ಲಾಯ್‌ಮೆಂಟ್ ಪ್ರೋಗ್ರಾಮ್ ಪ್ರಾರಂಭಿಸಿದ್ದು, ಸೇನಾ ನಿವೃತ್ತರಿಗೆ ಮತ್ತು ಅವರ ಸಂಗಾತಿಗಳಿಗೆ ದೇಶದಾದ್ಯಂತ ನೂರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಇದನ್ನು ಆರ್ಮಿ ವೆಲ್ಫೇರ್ ಪ್ಲೇಸ್‌ಮೆಂಟ್ ಆರ್ಗನೈಸೇಷನ್ (AWPO) ಸಹಯೋಗದಲ್ಲಿ ನಡೆಸಲಾಗುತ್ತಿದ್ದು, ಭಾರತದಾದ್ಯಂತ ಸೇನಾ ನಿವೃತ್ತರಿಗೆ ಮತ್ತು ಅವರ ಕುಟುಂಬಗಳಿಗೆ ಮುಂದುವರಿದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಭಾರತದಲ್ಲಿ ಡೈರೆಕ್ಟೊರೇಟ್ ಆಫ್ ಜನರಲ್ ಪ್ಲೇಸ್‌ಮೆಂಟ್ (DGR) ಜೊತೆಗೆ ಒಡಂಬಡಿಕೆ ನವೀಕರಿಸುವ ಮೂಲಕ, ಸೇನಾ ನಿವೃತ್ತರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಅಮೆಜಾನ್ ಇಂಡಿಯಾ ಮತ್ತಷ್ಟು ಸದೃಢಗೊಳಿಸಿದೆ. ಇದು ಸೇನಾ ಹಿನ್ನೆಲೆಯ ನಿವೃತ್ತ ಸೇನಾ ವೃತ್ತಿಪರರಿಗೆ ಅವರ ಕಾರ್ಪೊರೇಟ್ ವೃತ್ತಿಗಳನ್ನು ಅಮೆಜಾನ್ ಅಥವಾ ಇತರೆ ಕಾರ್ಪೊರೇಟ್ ಉದ್ಯೋಗಗಳನ್ನು ಪಡೆದುಕೊಳ್ಳಲು ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

“ಈ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಭಾರತೀಯ ಕರಾವಳಿ ಪಡೆಯೊಂದಿಗೆ ನಮ್ಮ ಸೇನಾ ನಿವೃತ್ತರು ಮತ್ತು ಅವರ ಕುಟುಂಬಗಳಿಗೆ ಅರ್ಥಪೂರ್ಣ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಸಾಮಾನ್ಯ ಗುರಿಯತ್ತ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ. ಸೇನಾ ನಿವೃತ್ತರ ಅಪಾರ ಅನುಭವವನ್ನು ಬಳಸಿಕೊಳ್ಳಲಾಗುತ್ತದೆ” ಎಂದು ಅಮೆಜಾನ್ ಇಂಡಿಯಾ, ಜಪಾನ್ ಅಂಡ್ ಎಮರ್ಜಿಂಗ್ ಮಾರ್ಕೆಟ್ಸ್‌ನ ವಿ.ಪಿ. ದೀಪ್ತಿ ವರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.