ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿಯ ಅಂಗನವಾಡಿಗಳಲ್ಲಿ 61 ಕಾರ್ಯಕರ್ತೆಯರು, 238 ಸಹಾಯಕಿಯರಿಗೆ ಅರ್ಜಿ

Published 10 ಜುಲೈ 2024, 6:12 IST
Last Updated 10 ಜುಲೈ 2024, 6:12 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಫಜಲಪೂರ ತಾಲೂಕಿನಲ್ಲಿ 17 ಅಂಗನವಾಡಿ ಕಾರ್ಯಕರ್ತೆಯರ ಮತ್ತು 25 ಸಹಾಯಕಿಯರ ಹುದ್ದೆಗಳು, ಆಳಂದ ತಾಲೂಕಿನಲ್ಲಿ 5 ಅಂಗನವಾಡಿ ಕಾರ್ಯಕರ್ತೆಯರ ಮತ್ತು 26 ಸಹಾಯಕಿಯರ ಹುದ್ದೆ, ಚಿಂಚೋಳಿ ತಾಲೂಕಿನಲ್ಲಿ 7 ಕಾರ್ಯಕರ್ತೆಯರ ಮತ್ತು 15 ಸಹಾಯಕಿಯರ ಹುದ್ದೆ, ಚಿತ್ತಾಪುರ ತಾಲೂಕಿನಲ್ಲಿ 10 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಕಲಬುರಗಿ (ಗ್ರಾಮೀಣ) ಯೋಜನೆ ವ್ಯಾಪ್ತಿಯಲ್ಲಿ 10 ಅಂಗನವಾಡಿ ಕಾರ್ಯಕರ್ತೆಯರ ಮತ್ತು 20 ಸಹಾಯಕಿಯರ ಹುದ್ದೆಗಳು, ಕಲಬುರಗಿ (ನಗರ) ಯೋಜನೆ ವ್ಯಾಪ್ತಿಯಲ್ಲಿ 92 ಸಹಾಯಕಿಯರ ಹುದ್ದೆಗಳು, ಜೇವರ್ಗಿ ತಾಲೂಕಿನಲ್ಲಿ 10 ಕಾರ್ಯಕರ್ತೆಯರ ಮತ್ತು 20 ಸಹಾಯಕಿಯರ ಹುದ್ದೆಗಳು, ಸೇಡಂ ತಾಲೂಕಿನಲ್ಲಿ 6 ಅಂಗನವಾಡಿ ಕಾರ್ಯಕರ್ತೆಯರ ಮತ್ತು 19 ಸಹಾಯಕಿಯರ ಹುದ್ದೆಗಳು ಹಾಗೂ ಶಹಾಬಾದ ತಾಲೂಕಿನಲ್ಲಿ 6 ಕಾರ್ಯಕರ್ತೆಯರ ಮತ್ತು 11 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಅರ್ಹ ಮಹಿಳೆಯರು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು https:/ karnemakaone. kar.nic.in/abcd ವೆಬ್‍ಸೈಟ್‍ನ್‌ಲ್ಲಿ ಅನ್‍ಲೈನ್ ಮೂಲಕ 2024ರ ಆಗಸ್ಟ್ 7ರ ಸಂಜೆ 5.30 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT