ಅರಣ್ಯ ರಕ್ಷಣೆ ಮಾಡುವ ಕನಸು ಹಾಗೂ ಈ ಸವಾಲಿನ ಕೆಲಸ ಮಾಡುವ ಇಚ್ಚೆ ಇದ್ದರೆ ನಿಮಗೆ ಹೊಸ ಅವಕಾಶ ಒದಗಿ ಬಂದಿದೆ.

ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ವೃತ್ತಗಳಲ್ಲಿ ಖಾಲಿರುವ 540 ‘ಗಸ್ತು ಅರಣ್ಯ ಪಾಲಕ’ ಅಥವಾ ‘ಅರಣ್ಯ ರಕ್ಷಕ’ (Forest Guard) ಹುದ್ದೆಗಳಿಗೆ ಅರ್ಹ ಪುರುಷ, ಮಹಿಳಾ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಇದೇ ಡಿಸೆಂಬರ್ 30 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನ.

ಈ 540 ಹುದ್ದೆಗಳಲ್ಲಿ 506 ಹುದ್ದೆಗಳು ಹೊಸದಾಗಿ ಸೃಜಿಸಲಾದ ಹುದ್ದೆಗಳು. 34 ಹುದ್ದೆಗಳು ಹಿಂಬಾಕಿ ಹುದ್ದೆಗಳಾಗಿವೆ. ಹಾಗಾದರೆ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ? ಎಂಬುದನ್ನು ಇಲ್ಲಿ ತಿಳಿಯೋಣ.

ಶೈಕ್ಷಣಿಕ ಅರ್ಹತೆ

ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಪಾಸಾಗಿರಬೇಕು ಅಥವಾ ತತ್ಸಮಾನ ಆಗಿದೆ. ಕೆಲ ಸಂದರ್ಭಗಳಲ್ಲಿ ಪಿಯುಸಿಗೆ ಸಮಾನ ಎಂದು ಪರಿಗಣಿಸಲಾದ ಮೂರು ವರ್ಷದ ಡಿಪ್ಲೋಮಾ ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ ಅಲ್ಲ.

ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷವಿದ್ದು, ಗರಿಷ್ಠ 27 ವರ್ಷವಿದೆ. ಪ್ರವರ್ಗಗಳಾದ 2ಎ, 2ಬಿ, 3ಎ, 3ಬಿಗಳಿಗೆ ಗರಿಷ್ಠ 30 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 32 ವಯೋಮಿತಿಯಲ್ಲಿ ಸಡಿಲಿಕೆ ಇದೆ. ಮಾಜಿ ಸೈನಿಕರಿಗೆ ಹಾಗೂ ಅರಣ್ಯ ಇಲಾಖೆಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಅರಣ್ಯ ಪ್ರೇಕ್ಷಕರಿಗೂ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಸಾಮಾನ್ಯ, ಪ್ರವರ್ಗಗಳಾದ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹ 200. ಇದರಲ್ಲಿನ ಮಹಿಳಾ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ ₹100, ಎಸ್ಸಿ, ಎಸ್ಟಿ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ₹100, ಇದರಲ್ಲಿನ ಮಹಿಳಾ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ ₹50.

ಎಲ್ಲರಿಗೂ ₹20 ಸೇವಾ ಶುಲ್ಕ ಇರುತ್ತದೆ. ಶುಲ್ಕ ಪಾವತಿಸಲು ಜನವರಿ 5 ಕಡೆಯ ದಿನ. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ.

ವೇತನ

₹47,650
.ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ: ಅವರ ಬಗ್ಗೆ ಮಾಹಿತಿ ಇಲ್ಲಿದೆ...
ಪರೀಕ್ಷೆ ಹೇಗಿರಲಿದೆ?

ಗಸ್ತು ಅರಣ್ಯ ಪಾಲಕ ಹುದ್ದೆಗಳಿಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ದೈಹಿಕ ಸಾಮರ್ಥ್ಯತೆ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಯಲಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾನದಂಡಗಳಿದ್ದು ಅವುಗಳಿಗಾಗಿ ಆಸಕ್ತರು ಅಧಿಸೂಚನೆ ನೋಡಿಕೊಳ್ಳಬೇಕು.

ದೈಹಿಕ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆ ವಸ್ತುನಿಷ್ಠ ಮಾದರಿಯಲ್ಲಿ ಇರುತ್ತದೆ. 2 ಗಂಟೆ ಅವಧಿಯ 100 ಅಂಕಗಳ ಒಂದೇ ಪತ್ರಿಕೆ ಇದಾಗಿರುತ್ತದೆ.

ಇದರಲ್ಲಿ ಎರಡು ಭಾಗ ಇದ್ದು 40 ಅಂಕಗಳಿಗೆ ಗಣಿತ ವಿಷಯ ಆಧರಿಸಿದ 40 ಆಪ್ಟಿಟ್ಯೂಡ್ ಪ್ರಶ್ನೆಗಳಿರುತ್ತವೆ. ಎರಡನೇ ಭಾಗದಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿಷಯಕ್ಕೆ ಸಂಬಂಧಿಸಿದಂತೆ 60 ಅಂಕಗಳಿಗೆ 60 ಪ್ರಶ್ನೆಗಳಿರುತ್ತವೆ.

ಪಿಯುಸಿವರೆಗಿನ ಪಠ್ಯಕ್ರಮವನ್ನು ಇದು ಹೊಂದಿದ್ದು, ತಲಾ 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಹಾಗೂ ಪಿಯುಸಿ/ತತ್ಸಮಾನದ ಮೆರಿಟ್ ಅನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಹುದ್ದೆಗಳ ವಿಭಾಗವಾರು ವರ್ಗೀಕರಣ, ಮೀಸಲು ರೋಸ್ಟರ್ಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ aranya.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು.

ಐದು ವರ್ಷ ಸೇವೆ ಕಡ್ಡಾಯ

ಅರಣ್ಯ ಪಾಲಕ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 9 ತಿಂಗಳು ಮೂಲ ತರಬೇತಿ ಇರುತ್ತದೆ. ತರಬೇತಿ ಅವಧಿಯೂ ಸೇರಿದಂತೆ 36 ತಿಂಗಳು ಪ್ರೊಬೇಷನರಿ ಅವಧಿ ಇರುತ್ತದೆ. ಅಲ್ಲದೇ ಆಯ್ಕೆಯಾಗುವ ಅಭ್ಯರ್ಥಿಗಳು ತಮ್ಮ ಹುದ್ದೆಗಳಲ್ಲಿ ಕನಿಷ್ಠ ಐದು ವರ್ಷ ಕೆಲಸ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.