ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ನಾಸಾದಲ್ಲಿ ಉದ್ಯೋಗ ಪಡೆಯುವುದು ಹೇಗೆ?

Published : 27 ಅಕ್ಟೋಬರ್ 2024, 23:10 IST
Last Updated : 27 ಅಕ್ಟೋಬರ್ 2024, 23:10 IST
ಫಾಲೋ ಮಾಡಿ
Comments
ಪ್ರ

ನಾನು ದ್ವಿತೀಯ ಪಿಯು  ಓದುತ್ತಿದ್ದು ಮುಂದಿನ ಶಿಕ್ಷಣವನ್ನು ಅಮೆರಿಕದಲ್ಲಿ ಕಲಿತು, ನಾಸಾ ಸಂಸ್ಥೆಯಲ್ಲಿ ಉದ್ಯೋಗವನ್ನು ಮಾಡುವ ಆಸೆಯಿದೆ.  ಮಾರ್ಗದರ್ಶನ ನೀಡಿ.

*ಹೆಸರು, ಊರು ತಿಳಿಸಿಲ್ಲ

ಪಿಯು ಓದುತ್ತಿರುವಾಗಲೇ ಮುಂದಿನ ಭವಿಷ್ಯದ ಬಗ್ಗೆ ಸ್ಪಷ್ಟವಾದ ಯೋಜನೆಯಿರುವುದು ಶ್ಲಾಘನೀಯ. ಪಿಯುಸಿ ನಂತರ, ಏರೋಸ್ಪೇಸ್/ಏರೋನಾಟಿಕಲ್ ಎಂಜಿನಿಯರಿಂಗ್ ಕೋರ್ಸ್‌ ಅನ್ನು ಇಲ್ಲಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಮಾಡಿ, ಸ್ನಾತಕೋತ್ತರ ಶಿಕ್ಷಣವನ್ನು ಅಮೆರಿಕದಲ್ಲಿ ಮಾಡಬಹುದು.
ವಿದೇಶಿ ಶಿಕ್ಷಣಕ್ಕೆ ಅನೇಕ ಪೂರ್ವಸಿದ್ಧತೆಗಳಿರುತ್ತವೆ. ಉದಾಹರಣೆಗೆ, ಗ್ರಾಜುಯೇಟ್ ರೆಕಾರ್ಡ್ ಎಕ್ಸಾಮ್ (ಜಿಆರ್‌ಇ), ಇಂಗ್ಲಿಷ್ ಭಾಷಾ ಪ್ರೌಢಿಮೆ ಪರೀಕ್ಷೆ, ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳು, ವೀಸಾ ಪ್ರಕ್ರಿಯೆ, ಸ್ಕಾಲರ್‌ಷಿಪ್, ಹಾಸ್ಟೆಲ್ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಸಿದ್ಧತೆಗಳನ್ನು ನೀವು ಎರಡನೇ ವರ್ಷದ ಎಂಜಿನಿಯರಿಂಗ್ ಮಾಡುವಾಗ ಪ್ರಾರಂಭಿಸಬಹುದು. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=AwlDno1YduQ

ADVERTISEMENT
ಪ್ರ

ನಾನು ಈ ವರ್ಷ ಎಂಟೆಕ್ ಮುಗಿಸಿದ್ದು, ಮುಂದೇನು ಎನ್ನುವ ವಿಚಾರದಲ್ಲಿ ಗೊಂದಲವಿದೆ. ಯಾವ ಆಯ್ಕೆ ಸೂಕ್ತವಾಗಬಹುದು?
*ಹೆಸರು, ಊರು ತಿಳಿಸಿಲ್ಲ.

ನೀವು ಬಿ.ಟೆಕ್ ಯಾವ ವಿಭಾಗದಲ್ಲಿ ಮಾಡಿದ್ದೀರಿ ಎಂದು ತಿಳಿಸಿಲ್ಲ. ಎಂಟೆಕ್ ನಂತರ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪ್ರಮುಖವಾಗಿ ಮೂರು ಆಯ್ಕೆಗಳಿವೆ. ಆದರೆ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಒಲವಿರುವ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸೂಕ್ತ.
 ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗವನ್ನು ಅರಸಬಹುದು.
 ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಿಮಗೆ ಒಲವಿರುವ ಸರ್ಕಾರಿ
ಕ್ಷೇತ್ರದಲ್ಲಿ ಉದ್ಯೋಗವನ್ನು ಅರಸಬಹುದು.
 ಸಂಶೋಧನೆ/ಅಧ್ಯಾಪಕ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಪಿಎಚ್‌ಡಿ
ಮಾಡಬಹುದು.
ಪಿಎಚ್‌ಡಿ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=Mb4PKUb35_Q

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT