ತರಗತಿ ಕಲಿಕೆಗಿಂತ ಚೂರು ಭಿನ್ನವಾಗಿರುವ ಪ್ರಾಜೆಕ್ಟ್ ಆಧಾರಿತ ಕಲಿಕೆಯು ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆ, ಯೋಜನಾ ನಿರ್ವಹಣೆ ಹಾಗೂ ಆತ್ಮವಿಶ್ವಾಸವನ್ನು ಹೊಂದುವಲ್ಲಿ ಸಹಾಯಕವಾಗಿದೆ.

*ಮಗನ ಜೊತೆ ಮಾತನಾಡಿ ಫೋನ್ ಬದಿಗಿಟ್ಟ ಸಹೋದ್ಯೋಗಿ ಸುಮ ಸಿಡಿಮಿಡಿ ಎನ್ನುತ್ತಿದ್ದರು. ನಾನು ಏನಾಯಿತೆಂದು ಕೇಳುವ ಮುನ್ನವೇ ‘ನೋಡಿ ಮೇಡಮ್, ಕಳೆದ ವಾರವಷ್ಟೆ ರವಿ ಎರಡು ಪ್ರಾಜೆಕ್ಟ್ ಮಾಡಿದ್ದ, ಈಗಾಗಲೆ ಮತ್ತೊಂದು ಪ್ರಾಜೆಕ್ಟ್ ಅಂತೆ, ಬರಿ ಇದನ್ನೆ ಮಾಡುತ್ತಾ ಕೂತರೆ ಅವನು ಓದುವುದು ಬರೆಯುವುದು ಯಾವಾಗ? ಪರೀಕ್ಷೆಯಲ್ಲಿ ಪ್ರಾಜೆಕ್ಟ್ ಏನಾದ್ರು ಕೊಡ್ತಾರಾ ಬರೆಯೋಕೆ?’ ಎಂದು ಒಂದೇ ಸಮನೆ ತನ್ನ ಅಸಮಾಧಾನವನ್ನೆಲ್ಲ ತೋಡಿಕೊಂಡರು. ಅದಕ್ಕೆ ನಾನು ‘ಶಾಲಾ ಪ್ರಾಜೆಕ್ಟ್ ಮಾಡುವುದರಿಂದ ಆಗುವ ತೊಂದರೆಯಾದರೂ ಏನು? ಅದರಿಂದ ಮಗನಿಗೆ ಅನುಕೂಲವೇ ಅಲ್ಲವೆ’ ಎಂದೆ. ‘ಓಹ್, ಸರಿಯಾಗಿ ಹೇಳಿದಿರಿ. ಬರಿ ಅದೇ ಕಥೆ ಆದರೆ ಓದುವುದು ಯಾವಾಗ, ನೋಟ್ಸ್ ಬರೆಯುವುದು ಯಾವಾಗ, ಟೆಸ್ಟ್‌ಗಳಿಗೆ ತಯಾರಿ ನಡೆಸುವುದು ಯಾವಾಗ? ಪ್ರಾಜೆಕ್ಟ್ ಹೆಸರೇಳಿ ಫ್ರೆಂಡ್ಸ್ ಜೊತೆ ಕಾಲ ಕಳೀತಾನೆ. ಮೇಲಿಂದ ಒಂದಿಷ್ಟು ದುಡ್ಡೂ ವೇಸ್ಟು. ನಾವೇನು ಹೀಗೆ ಕಲಿತಿದ್ದಾ? ನಿಮಗೆ ನನ್ನ ಕಳವಳ ಅರ್ಥವಾಗುವುದಿಲ್ಲ ಬಿಡಿ. ಎಷ್ಟಾದರೂ ನೀವೂ ಸ್ಕೂಲಲ್ಲಿ ಕೆಲಸ ಮಾಡಿದವರಲ್ಲವೇ’ ಎನ್ನುತ್ತ ವಿಷಯ ಬದಲಿಸಿದರು.

ಶಾಲೆ, ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳು ಮಾಡುವ ಪ್ರಾಯೋಗಿಕ ಕಾರ್ಯಗಳಿಂದ ಸಾಕಷ್ಟು ಅನುಕೂಲಗಳಿವೆ. ಇದೇ ವಿಚಾರವಾಗಿ ‘ದಿ ಆಟೋಡೆಸ್ಕ್ ಫೌಂಡೇಷನ್’ ಸತತ ಹತ್ತು ವರ್ಷಗಳ ಸಂಶೋಧನೆಯನ್ನು ನಡೆಸಿ ಪ್ರಾಜೆಕ್ಟ್ ಆಧಾರಿತ ಕಲಿಕೆಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಷ್ಟೇ ಅಲ್ಲ, ಪರೀಕ್ಷಾ ಅಂಕಗಳು, ಹಾಜರಾತಿ ಹಾಗೂ ತರಗತಿ ಚಟುವಟಿಕೆಯಲ್ಲಿನ ಪಾಲ್ಗೊಳ್ಳುವಿಕೆಯಲ್ಲಿ ಗಣನೀಯವಾದ ಸುಧಾರಣೆಯನ್ನೂ ಕಾಣಬಹುದು ಎಂದಿದೆ.

ಪ್ರಯೋಜನಗಳು

1 ಏಕಮುಖ ಸಂವಹನಕ್ಕಿಂತ ದ್ವಿಮುಖ ಸಂವಹನ ಅತ್ಯಂತ ಪರಿಣಾಮಕಾರಿ. ಹಾಗೆಯೇ ಪ್ರಾಜೆಕ್ಟ್ ಆಧಾರಿತ ಕಲಿಕೆಯಲ್ಲಿ ಶಿಕ್ಷಕರೊಟ್ಟಿಗೆ ವಿದ್ಯಾರ್ಥಿಗಳು ಧೃಢವಾದ ಸಂಬಂಧವನ್ನು ಏರ್ಪಡಿಸಲು ಅವಕಾಶ ನೀಡುತ್ತದೆ. ಶಿಕ್ಷಕರೊಟ್ಟಿಗೆ ಬೆರೆಯಲು ಹಿಂಜರಿಯುವ ಮಕ್ಕಳಿಗೆ ಇದೊಂದು ವರದಾನ. ಆತಂಕಗಳಿಂದ ಮುಕ್ತವಾಗಿರುವ ಪರಿಸರ ಕಲಿಕೆಗೆ ಉತ್ತಮವಾಗಿರುತ್ತದೆ.

2 ಸಾಮಾನ್ಯವಾಗಿ ಪ್ರಾಜೆಕ್ಟ್‌ಗಳಲ್ಲಿ ವಿದ್ಯಾರ್ಥಿಗಳು ಗುಂಪಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಸಹಪಾಠಿಗಳೊಟ್ಟಿಗೆ ಬೆರೆಯುವುದು, ವಿಭಿನ್ನ ಮನಸ್ಥಿತಿ ಹೊಂದಿರುವವರ ಜೊತೆ ವ್ಯವಹರಿಸುವ ಕಲೆ, ಅನಿಸಿಕೆ ವಿನಿಮಯ, ಅಭಿಪ್ರಾಯ ಸಂಗ್ರಹ, ಸಣ್ಣಪುಟ್ಟ ಜಗಳಗಳನ್ನು ಬಗೆಹರಿಸುವುದು... ಹೀಗೆ ಹತ್ತಾರು ವಿಷಯಗಳನ್ನು ಕಲಿಯುತ್ತಾರೆ. ಇದೆಲ್ಲವೂ ಮುಂದೆ ದೊಡ್ಡವರಾದಾಗ ಸಮುದಾಯದ ಇತರೆ ಸದಸ್ಯರೊಂದಿಗೆ ಒಳ್ಳೆಯ ಸಂಬಂಧ ರೂಪಿಸಲು ಅನುಕೂಲವಾಗುತ್ತದೆ.

3 ಒಂದೇ ಪ್ರಯತ್ನದಲ್ಲೇ ಪ್ರಾಜೆಕ್ಟ್‌ಗಳು ಸಂಪೂರ್ಣವಾಗುವುದು ಅಪರೂಪ. ಸಾಕಷ್ಟು ಎಡರು– ತೊಡರುಗಳು ಎದುರಾಗುತ್ತವೆ. ಮಾನವನ ಜೀರ್ಣಾಂಗ ವ್ಯವಸ್ಥೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ, ಒಮ್ಮೆ ಸಣ್ಣ ಕರುಳಿನ ಚಿತ್ರ ಸರಿಯಾಗಿ ಬಂದರೆ, ಮತ್ತೊಮ್ಮೆ ದೊಡ್ಡ ಕರುಳಿನ ಆಕಾರದಲ್ಲಿ ವ್ಯತ್ಯಾಸವಾಗಬಹುದು. ಕಾಲೇಜು ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳಾದರೆ ದಾರಿ ಇನ್ನೂ ಸುಗಮವಾಗಿರದು. ಈ ಸಮಸ್ಯೆಗಳೇ ಅವರಲ್ಲಿ ಸ್ವಂತವಾಗಿ ಬಗೆಹರಿಸುವ ಗುಣವನ್ನೂ ಕಲಿಸುತ್ತವೆ.

4 ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲತೆಯನ್ನು ಹೊರತರುವಲ್ಲಿ ಸಹಕಾರಿ ಈ ಪ್ರಾಜೆಕ್ಟ್ ವರ್ಕ್. ಹೊಸ ವಿಧಾನದಲ್ಲಿ, ಹೊಸ ಮಾದರಿಯಲ್ಲಿ ಹಾಗೂ ಇತರರಿಗಿಂತ ವಿಭಿನ್ನವಾಗಿ ಮಾಡುವ ಆಸೆಯೇ ಅವರನ್ನು ಯೋಚನೆಯಲ್ಲಿ ಮುಳುಗಿಸುತ್ತದೆ.

5 ಪ್ರತಿಯೊಂದು ವಿಷಯವನ್ನು ಕಂಠಪಾಠ ಮಾಡಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಕಲಿತರೂ ಅದರ ಆಯುಷ್ಯ ಅಲ್ಪಾವಧಿ. ಕಂಠಪಾಠಕ್ಕೆ ಅದರದೆ ಆದ ಮಿತಿಗಳಿವೆ. ನಾಲಗೆಯಲ್ಲಿ ನಲಿದಾಡುವ ಪದಗಳೆಲ್ಲವೂ ಮೆದುಳಿಗೆ ಮುಟ್ಟಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ವಿಷಯವನ್ನು ಆಳವಾಗಿ ತಿಳಿಯಲು ಅನುಕೂಲವಾಗುವುದೇ ಪ್ರಾಜೆಕ್ಟ್‌ಗಳು. ಅನ್ವಯಿಕ ವಿಷಯದ ಕಲಿಕೆಯನ್ನು ಇದು ಗಾಢವಾಗಿ ಬೇರೂರಿಸುತ್ತದೆ.

6 ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಕೆರಳಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಕಲಿಕೆಯಲ್ಲಿ ಹಿಂದುಳಿದವರಿಗೂ ಆತ್ಮವಿಶ್ವಾಸವನ್ನು ತುಂಬುತ್ತದೆ. ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟಪಡುವ ವಿದ್ಯಾರ್ಥಿಗಳು ತಾವು ಮಾಡಿದ ಪ್ರಾಜೆಕ್ಟ್ ಅನ್ನು ನಿರರ್ಗಳವಾಗಿ ವಿವರಿಸುತ್ತಾರೆ.

7 ಪ್ರಾಜೆಕ್ಟ್ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸುವುದು ಸಹಜ. ವಿಷಯದ ಆಳಕ್ಕೆ ಹೋಗುತ್ತಾ ಕಲಿಯುವ ಕುತೂಹಲವೂ ಹೆಚ್ಚಾಗುತ್ತದೆ. ಇದು ನೇರವಾಗಿ ಕಲಿಕೆಗೆ ಪೂರಕವಾಗುತ್ತದೆ.

8 ಪ್ರಾಜೆಕ್ಟ್ ಆಧಾರಿತ ಕಲಿಕೆಯು ಮಕ್ಕಳಲ್ಲಿ ಜವಾಬ್ದಾರಿ, ಒತ್ತಡದಲ್ಲಿ ಕೆಲಸ ಮಾಡುವುದನ್ನು ಮತ್ತು ಸಮಯದ ಮಹತ್ವವನ್ನು ಕಲಿಸಿಕೊಡುತ್ತದೆ. ಡೆಡ್‌ಲೈನ್‌ನ ಒಳಗೆ ಕೆಲಸವನ್ನು ಮುಗಿಸಬೇಕೆನ್ನುವ ವಿಚಾರ ಅರ್ಥವಾಗುವುದೇ ಆಗ. ಮುಗಿಸದಿದ್ದರೆ ಆಗುವ ಸಮಸ್ಯೆಗಳ ಅನುಭವವೂ ಅವರಿಗೆ ಆಗುತ್ತದೆ. ಇದು ಭವಿಷ್ಯದಲ್ಲಿ ಸಹಾಯಕ್ಕೆ ಬರುತ್ತದೆ.

9 ಕಾಲೇಜು ವಿದ್ಯಾರ್ಥಿಗಳಾದರೆ ಓದುವಾಗ ಮಾಡಿದ ಪ್ರಾಜೆಕ್ಟ್ ಅಥವಾ ಇಂಟರ್ನ್‌ಶಿಪ್ ಸಮಯದಲ್ಲಿ ಮಾಡಿದ ಪ್ರಾಜೆಕ್ಟ್‌ಗಳನ್ನು ಮುಂದೆ ಸಂದರ್ಶನಕ್ಕೆಂದು ತಯಾರಿಸಿದ ರೆಸ್ಯೂಮೆಗಳಲ್ಲಿ ಸೇರಿಸಿಕೊಳ್ಳಬಹುದು. ವಿಷಯದ ಬಗ್ಗೆ ನಿಮಗಿರುವ ಪ್ರಾಯೋಗಿಕ ಅನುಭವವನ್ನು ತಿಳಿಸುತ್ತದೆ.

ಕಾಲ ಬದಲಾದಂತೆ ಎಲ್ಲವೂ ಮಾರ್ಪಾಡಾಗಿವೆ. ಉರಿಸುವ ಒಲೆಯಿಂದ ಹಿಡಿದು ಬಳಸುವ ಮೊಬೈಲ್ ಫೋನ್‌ವರೆಗೆ ಎಲ್ಲವೂ ಅಪ್‌ಗ್ರೇಡ್ ಆಗಿವೆ. ಹಾಗೆಯೇ ವಿದ್ಯಾಭ್ಯಾಸ ಕೂಡ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಕಲಿಕಾ ವಿಧಾನದಲ್ಲೂ ಅಪ್‌ಗ್ರೇಡ್ ಆಗುವುದು ಅವಶ್ಯಕ. ಮಕ್ಕಳ ಪ್ರಾಜೆಕ್ಟ್‌ಗಳಿಗೆ ಸಹಕಾರ ಮತ್ತು ಸಹಾಯ ಇರಲಿ. ಪ್ರಾಜೆಕ್ಟ್ ಹೆಸರಲ್ಲಿ ಹಣದ ಅಪವ್ಯಯವಾಗದಂತೆ ಜಾಗರೂಕತೆ ವಹಿಸಿ. ಅದನ್ನು ಮಕ್ಕಳಿಗೂ ಕಲಿಸಿ. ಸಾಧ್ಯವಾದಷ್ಟು ರೆಡಿಮೇಡ್ ಸ್ಕೂಲ್ ಪ್ರಾಜೆಕ್ಟ್‌ಗಳನ್ನು ಕೊಂಡುಕೊಳ್ಳುವ ಬದಲು ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನೇ ಬಳಸಿ ಸ್ವತಃ ತಯಾರಿಸಲು ಪ್ರೇರೇಪಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.