ಸಿಬಂತಿ ಪದ್ಮನಾಭ ಕೆ. ವಿ.

ಯಾವುದೇ ಕಂಪನಿ ಅಥವಾ ಸಂಸ್ಥೆ ಅಭಿವೃದ್ಧಿಯಾಗಬೇಕಾದರೆ ಅವು ಆನ್‌ಲೈನ್‌ನಲ್ಲಿ ಲಭ್ಯವಿರುವುದು ಇಂದು ಅನಿವಾರ್ಯ. ಏಕೆಂದರೆ ಅಂತಹ ಸಂಸ್ಥೆ ಅಥವಾ ಕಂಪನಿಗಳ ಬಗ್ಗೆ ತಿಳಿದುಕೊಳ್ಳಲು ಜನರು ಮೊದಲು ಅನುಸರಿಸುವ ಮಾರ್ಗ ಇಂಟರ್ನೆಟ್‌ನಲ್ಲಿ ಹುಡುಕುವುದು. ಅವರು ಆ ಕಂಪನಿಗಳ ಗ್ರಾಹಕರಾಗಿ ಬದಲಾಗುವಲ್ಲಿ ಇದು ಮೊದಲನೆಯ ಹೆಜ್ಜೆ. ಒಂದು ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಗಾಗಿ ಜನರು ಆನ್‌ಲೈನ್ ಸರ್ಚ್ ಮಾಡುವಾಗ ಯಾವ ಕಂಪನಿ ಮೊದಲು ಕಾಣಿಸಿಕೊಳ್ಳುತ್ತದೋ ಆ ಕಂಪನಿಯತ್ತ ಅವರು ಆಕರ್ಷಿತರಾಗುವುದು ಸಹಜ. ಹೀಗಾಗಿ ಗ್ರಾಹಕರ ಆನ್‌ಲೈನ್ ಹುಡುಕಾಟದಲ್ಲಿ ತಮ್ಮ ಉತ್ಪನ್ನಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿ ಎಂದು ಕಂಪನಿಗಳು/ಸಂಸ್ಥೆಗಳು ಬಯಸುತ್ತಿರುತ್ತವೆ.

ಹಾಗೆಯೇ, ಕ್ಲಿಕ್ಸ್ ಮತ್ತು ವ್ಯೂಸ್ ಆಧಾರದಲ್ಲಿ ಆದಾಯಗಳಿಸುವ ಸಂಸ್ಥೆಗಳೂ ಇಂದು ಬೇಕಾದಷ್ಟಿವೆ. ಅವುಗಳೂ ಬಯಸುವುದು ತಮ್ಮ ಲಿಂಕ್‌ಗಳನ್ನು ಹೆಚ್ಚು ಮಂದಿ ಕ್ಲಿಕ್ ಮಾಡಲಿ ಎಂದೇ. ಇದಕ್ಕಾಗಿ ಇಂಟರ್ನೆಟ್ ಸರ್ಚ್‌ನಲ್ಲಿ ಅವು ಬೇಗನೆ ಕಾಣಿಸಿಕೊಳ್ಳುವುದು ಮುಖ್ಯ. ಹೀಗಾಗಿ ಇಂದು ‘ಸರ್ಚ್ ಎಂಜಿನ್ ಆಪ್ಟಿಮೈಸೇಶನ್’ (ಎಸ್‌ಇಒ) ಅಂತರ್ಜಾಲ ಮಾರುಕಟ್ಟೆಯ ಒಂದು ಪ್ರಮುಖ ಭಾಗವಾಗಿದೆ. ಇದರಿಂದಾಗಿ ಬಹುತೇಕ ಕಂಪನಿ/ಸಂಸ್ಥೆಗಳಲ್ಲಿ ಎಸ್‌ಇಒ ಎಕ್ಸಿಕ್ಯೂಟಿವ್ಸ್ ಎಂಬ ಹೊಸ ಹುದ್ದೆಗಳು ಹುಟ್ಟಿಕೊಂಡಿವೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ತಯಾರು ಮಾಡಲು ಸಾಕಷ್ಟು ಕೋರ್ಸುಗಳೂ ಲಭ್ಯವಿವೆ.

ಏನಿದು ಕೋರ್ಸ್?

ಸರ್ಚ್ ಎಂಜಿನ್ ಆಪ್ಟಿಮೈಸೇಶನ್‌ನ ತಂತ್ರಗಾರಿಕೆಗಳನ್ನು ಹೇಳಿಕೊಡುವುದೇ ಈ ಕೋರ್ಸ್‌ನ ಉದ್ದೇಶ. ಅಂದರೆ ನಿರ್ದಿಷ್ಟ ಕಂಪನಿಗಳ ವೆಬ್‌ಸೈಟ್‌ಗಳ ಕಡೆಗೆ ವೆಬ್ ಟ್ರಾಫಿಕ್ ಹೆಚ್ಚಾಗುವಂತೆ ಮಾಡಲು ಏನೇನೆಲ್ಲ ಮಾಡಬಹುದು ಎಂಬುದನ್ನು ಹೇಳಿಕೊಡಲಾಗುತ್ತದೆ. ಉದಾಹರಣೆಗೆ ‘ಕೀವರ್ಡ್’ಗಳ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು. ಅಂತರ್ಜಾಲ ಹುಡುಕಾಟದಲ್ಲಿ ಕೀವರ್ಡ್‌ಗಳ ಪಾತ್ರ ತುಂಬ ದೊಡ್ಡದು. ಯಾವುದೋ ಉತ್ಪನ್ನ, ಸೇವೆ ಅಥವಾ ವೆಬ್‌ಪುಟದ ಬಗ್ಗೆ ಒಂದು ಆನ್‌ಲೈನ್ ಲೇಖನ ಸಿದ್ಧಪಡಿಸುತ್ತೇವೆ ಎಂದರೆ ಅದರಲ್ಲಿ ನಿರ್ದಿಷ್ಟ ಕೀವರ್ಡ್‌ಗಳನ್ನು ಬಳಸಿದಷ್ಟು ಅದರ ‘ರೀಚ್’ ಹೆಚ್ಚಾಗುತ್ತದೆ.

ಕೀವರ್ಡ್‌ಗಳೆಂದರೆ ಜನರು ಹೆಚ್ಚಾಗಿ ಬಳಸುವ, ಹೆಚ್ಚಾಗಿ ಹುಡುಕುವ ಪದಗಳು. ಆನ್‌ಲೈನ್ ಬಳಕೆದಾರರು ಸಾಮಾನ್ಯವಾಗಿ ಏನನ್ನು ಹುಡುಕುತ್ತಿರುತ್ತಾರೆ, ಹಾಗೆ ಹುಡುಕುವಾಗ ಯಾವ ಪದಗಳನ್ನು ಸರ್ಚ್ ಮಾಡುತ್ತಾರೆ ಎಂಬುದನ್ನು ಎಸ್‌ಇಒ ಎಕ್ಸಿಕ್ಯೂಟಿವ್ಸ್ ಸದಾ ಗಮನಿಸುತ್ತಿರುತ್ತಾರೆ. ಗುಣಮಟ್ಟದ ಲೇಖನಗಳನ್ನು ಬರೆಯುವುದು ಮತ್ತು ಪ್ರಕಟಿಸುವುದು, ಹೆಚ್ಚು ರೀಚ್ ಇರುವ ಜಾಲತಾಣಗಳ ಕೊಂಡಿಗಳನ್ನು ಆ ಲೇಖನಗಳ ಮಧ್ಯೆ ಅಲ್ಲಲ್ಲಿ ಬಳಸುವುದು ಅವರ ಇನ್ನಿತರ ಕೆಲಸಗಳು. ಆನ್‌ಲೈನ್ ಸುದ್ದಿ ತಾಣಗಳೂ ತಮ್ಮೆಡೆಗೆ ಓದುಗರನ್ನು ಸೆಳೆಯಲು ಇಂತಹ ಎಸ್‌ಇಒ ತಂತ್ರಗಳನ್ನು ಅಳವಡಿಸಿಕೊಳ್ಳುತ್ತವೆ. ಎಸ್‌ಇಒ ಕೋರ್ಸ್‌ನಲ್ಲಿ ಈ ಕೌಶಲಗಳನ್ನು ಬೆಳೆಸಲು ಮಾರ್ಗದರ್ಶನ ಮಾಡಲಾಗುತ್ತದೆ.

ಯಾರು ಮಾಡಬಹುದು?

ಆನ್‌ಲೈನ್ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಯಾರು ಬೇಕಾದರೂ ಈ ಕೋರ್ಸ್ ಮಾಡಿಕೊಳ್ಳಬಹುದು. ನಿರ್ದಿಷ್ಟ ಔಪಚಾರಿಕ ವಿದ್ಯಾರ್ಹತೆ ಬೇಕಾಗಿಲ್ಲ. ಆದರೂ ಪಿಯುಸಿ, ಪದವಿ ಹಂತದಲ್ಲಿರುವವರು ಈ ಕೋರ್ಸ್ ಮಾಡಿಕೊಂಡರೆ ಹೆಚ್ಚು ಉಪಯುಕ್ತ.

ಕಂಪ್ಯೂಟರ್, ಇಂಟರ್ನೆಟ್ ಬಳಸುವ ಪ್ರಾಥಮಿಕ ತಿಳುವಳಿಕೆ, ಇಂಗ್ಲಿಷ್ ಓದುವ ಮತ್ತು ಬರೆಯುವ ಸಾಮಾನ್ಯ ಸಾಮರ್ಥ್ಯ ಇರುವವರಿಗೆ ಈ ಕೋರ್ಸ್‌ಗಳು ಹೆಚ್ಚು ಪ್ರಯೋಜನಕರ ಅನ್ನಿಸಬಹುದು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವವರಿಗೆ ಇದು ಸಲ್ಲದ ಕೋರ್ಸ್ ಏನಲ್ಲ. ಏಕೆಂದರೆ ಕನ್ನಡದಲ್ಲೂ ಸಾಕಷ್ಟು ಆನ್‌ಲೈನ್ ಕಂಟೆಂಟ್ ಅಭಿವೃದ್ಧಿಪಡಿಸುವುದು ಇಂದಿನ ಅವಶ್ಯಕತೆ. ಆದರೂ ಇಂಗ್ಲಿಷ್ ತಿಳಿವಳಿಕೆಯಿಂದ ಅವಕಾಶಗಳು ತಾವಾಗಿಯೇ ಹೆಚ್ಚಾಗುತ್ತವೆ. ಕೋರ್ಸ್‌ಗಳ ಪಠ್ಯ, ಉಪನ್ಯಾಸಗಳು ಸರಳ ಇಂಗ್ಲಿಷಿನಲ್ಲಿ ಇರುತ್ತವೆ.

(ಲೇಖಕರು: ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ
ತುಮಕೂರು ವಿಶ್ವವಿದ್ಯಾನಿಲಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.