ವಾಯುಮಂಡಲದ ನದಿಗಳು (Atmospheric rivers-ARs) ಎಂದರೆ, ವಾತಾವರಣದಲ್ಲಿ ವಿಶೇಷವಾಗಿ ಉಷ್ಣವಲಯದ ಭಾಗಗಳ ಎತ್ತರದ ಪ್ರದೇಶಗಳಲ್ಲಿ, ಭಾರೀ ಪ್ರಮಾಣದಲ್ಲಿ ಸಾಂದ್ರೀಕೃತಗೊಂಡ ತೇವಾಂಶಗಳನ್ನು ಹೊಂದಿರುವ (ನೀರನ್ನು ಕೊಂಡೊಯ್ಯುವ) ಉದ್ದವಾದ, ಆದರೆ ಬಹಳ ಅಗಲವಿಲ್ಲದ ನೀರಾವಿಯಿಂದ ತುಂಬಿದ ಪಟ್ಟಿಗಳು ಎನ್ನಬಹುದು.

ಜಾಗತಿಕ ಜಲ ಆವರ್ತನೆ (water cycle)ಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಇವು, ಹಾದು ಹೋಗುವ ಪ್ರದೇಶದಲ್ಲಿ ಹವಾಮಾನ, ಮಳೆ, ಹಿಮ ಸುರಿಯುವಿಕೆ, ತೇವಾಂಶ ಸೇರಿ ಇಡೀ ಜಲಮಂಡಲದ ಮೇಲೆ ಗಮನಾರ್ಹ ಪರಿಣಾಮ ಬೀರಬಲ್ಲವು.

ಗುಣಲಕ್ಷಣಗಳು: ವಾಯುಮಂಡಲದ ನದಿಗಳು ರಿಬ್ಬನ್ ಮಾದರಿಯ ಸಂರಚನೆಯಾಗಿವೆ. ಇವು ಸಾವಿರಾರು ಕಿ.ಮೀ. ಉದ್ದವಿದ್ದರೂ, ಅಗಲ ಮಾತ್ರ ಕೆಲವು ನೂರು ಕಿ.ಮೀ.ಗಳಿರುತ್ತವೆ. ಇವು ಭಾರೀ ಪ್ರಮಾಣದಲ್ಲಿ ನೀರಾವಿಯನ್ನು ಹೊಂದಿದ್ದು, ಅದರ ಉದ್ದಕ್ಕೂ ಬಲವಾದ ಗಾಳಿ ಬೀಸುತ್ತಿರುತ್ತದೆ.

ರೂಪುಗೊಳ್ಳುವಿಕೆ: ವಾಯುಮಂಡಲದ ನದಿಗಳು- ಉಷ್ಣವಲಯ ಅಥವಾ ಸಮಶೀತೋಷ್ಣ ವಲಯಗಳಲ್ಲಿ ಹುಟ್ಟಿಕೊಳ್ಳುತ್ತವೆ. ಬಿಸಿಯಾದ ಸಾಗರದ ನೀರು ಆವಿಯಾಗಿ ವಾತಾವರಣವು ದಟ್ಟವಾದ ತೇವಾಂಶದಿಂದ ತುಂಬಿಕೊಳ್ಳುತ್ತದೆ. ಈ ಸಾಂದ್ರವಾದ ಆವಿಯ ಪಟ್ಪಿಗಳು ಆಗ ಬೃಹತ್ ಪ್ರಮಾಣದ ವಾತಾವರಣ ವ್ಯವಸ್ಥೆಗಳಲ್ಲಿ ಉಂಟಾಗುವ ಮಾರುತಗಳ ಮೂಲಕ ಉತ್ತರ ಆಥವಾ ದಕ್ಷಿಣ ಧ್ರುವಗಳು ಅಥವಾ ನಡುಭಾಗದ ಅಕ್ಷಾಂಶಗಳಲ್ಲಿ ಇರುವ ತಂಪಾದ ಎತ್ತರ ಪ್ರದೇಶಗಳತ್ತ ಚಲಿಸುತ್ತವೆ.

ಪರಿಣಾಮ: ಈ ವಾಯುಮಂಡಲದ ನದಿಗಳು ನೀರಿನಿಂದ ಭಾರವಾಗಿ ನೆಲದ ಸಂಪರ್ಕಕ್ಕೆ ಬರುವಾಗ ಆ ಪ್ರದೇಶದ ಉಷ್ಣತೆಗೆ ಅನುಗುಣವಾಗಿ ಭಾರೀ ಪ್ರಮಾಣದಲ್ಲಿ ಮಳೆ ಅಥವಾ ಹಿಮ ಸುರಿಸುತ್ತವೆ. ಇದು ಪ್ರವಾಹ, ಹಿಮಪಾತ ಮತ್ತು ಭೂಕುಸಿತಗಳಂಥ ತೀವ್ರತರದ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗಬಹುದು.

ಋತುಮಾನ: ವಾಯುಮಂಡಲದ ನದಿಗಳು ಇಡೀ ವರ್ಷ ಉಂಟಾಗಬಹುದು. ಆದರೆ, ಬಿಸಿಯಾದ ಸಾಗರ ಮತ್ತು ತಂಪಾದ ಭೂಭಾಗಗಳ ನಡುವಿನ ಉಷ್ಣತೆಗಳ ವ್ಯತ್ಯಾಸವು ಅತ್ಯಂತ ಹೆಚ್ಚಿರುವ ಚಳಿಗಾಲದಲ್ಲಿ ಹೆಚ್ಚಾಗಿ ಉಂಟಾಗುತ್ತವೆ. ಈ ಋತುಮಾನವು- ಮುಖ್ಯವಾಗಿ ಶುದ್ಧ ನೀರಿಗಾಗಿ ಚಳಿಗಾಲದ ಮಂಜು ಮತ್ತು ಹಿಮವನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಜಲಸಂಪನ್ಮೂಲಗಳನ್ನು ಮರಳಿ ತುಂಬಿಸುವುದರಲ್ಲಿ (ಮರುಪೂರಣ) ಮಹತ್ವದ ಪಾತ್ರ ವಹಿಸುತ್ತವೆ.

ಏರಿಳಿತ: ಈ ನದಿಗಳ ತೀವ್ರತೆ ಒಂದೇ ರೀತಿಯಾಗಿ ಇರುವುದಿಲ್ಲ. ಸಾಗರದ ಮೇಲ್ಮೈಯ ಉಷ್ಣತೆ, ಭೂಮೇಲ್ಮೈಯ ಉಷ್ಣತೆ, ಮಳೆ ಸುರಿಸುವ ಭೌಗೋಳಿಕ ಅಡೆತಡೆಗಳು (ಪರ್ವತ, ದಟ್ಟಾರಣ್ಯಗಳು ಇತ್ಯಾದಿ).

ಮಹತ್ವ

ನೀರು ಪೂರೈಕೆ: ಹಲವಾರು ಪ್ರದೇಶಗಳಿಗೆ ವಾಯುಮಂಡಲದ ನದಿಗಳೇ ನೀರಿನ ಬಹುಮುಖ್ಯ ಮೂಲಗಳಾಗಿದ್ದು, ಬರ ನಿವಾರಣೆ ಮತ್ತು ಶುದ್ಧ ನೀರಿನ ಸಂಗ್ರಹ, ಮರುಪೂರಣ ಮತ್ತು ನಿರ್ವಹಣೆಗೆ ಸಹಕರಿಸುತ್ತವೆ. ಅವು ಸುರಿಸುವ ಮಳೆಯು ನದಿ, ಜಲಾಶಯಗಳನ್ನು ತುಂಬಿಸಿ ಅಂತರ್ಜಲವನ್ನು ಹೆಚ್ಚಿಸುವುದೇ ಅಲ್ಲದೇ ಪರ್ವತ ಶಿಖರಗಳಲ್ಲಿ ಹಿಮದ ಕವಚವನ್ನು ಎತ್ತರಿಸುತ್ತದೆ. ಬೇಸಿಗೆಯಲ್ಲಿ ಈ ಹಿಮವು ಕರಗಿ ಕೆಳಭಾಗದ ಜಲಮೂಲಗಳಿಗೆ ನೀರನ್ನು ಪೂರೈಸುತ್ತದೆ. ಇದು ಕುಡಿಯುವ ನೀರು ಪೂರೈಕೆ, ಕೃಷಿ, ಜಲವಿದ್ಯುತ್ ಉತ್ಪಾದನೆ ಮತ್ತು ಪ್ರಕೃತಿಯನ್ನು ಸುಸ್ಥಿತಿಯಲ್ಲಿ ಇಡುವುದಕ್ಕೆ ಬಹಳ ಅಗತ್ಯ.

ಹವಾಮಾನ ವೈಪರೀತ್ಯಗಳು: ನೀರಿನಮೂಲಗಳಾಗಿದ್ದರೂ ವಾಯುಮಂಡಲದ ನದಿಗಳು ಪ್ರವಾಹ, ಭೂಕುಸಿತ, ಹಿಮಪಾತ ಮತ್ತು ಬಿರುಗಾಳಿಯಂತಹ ತೀವ್ರ ಹವಾಮಾನ ವೈಪರೀತ್ಯಗಳನ್ನೂ ಉಂಟುಮಾಡಬಹುದು. ಇವು ಸಾರಿಗೆಗೆ ಅಡಚಣೆ, ಮೂಲಸೌಕರ್ಯಗಳಿಗೆ ಹಾನಿ, ಜೀವ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದರ ಮೂಲಕ ಸಾಮಾಜಿಕ-ಆರ್ಥಿಕ ದುಷ್ಪರಿಣಾಮಗಳನ್ನೂ ಬೀರಬಲ್ಲವು.

ಹವಾಮಾನ ಬದಲಾವಣೆ: ಬಿಸಿಯೇರುವ ಸಾಗರಗಳಿಂದಾಗಿ ವಾಯುಮಂಡಲದ ನದಿಗಳು ಇನ್ನಷ್ಟು ತೀವ್ರವಾಗಬಹುದು ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಅವುಗಳ ಹಂಚಿಕೆ ಮತ್ತು ಪುನರಾವರ್ತನೆಯಲ್ಲಿ ಏರುಪೇರುಗಳಾಗುವ ಸಾಧ್ಯತೆಯಿದ್ದು, ಪ್ರಾದೇಶಿಕ ಹವಾಮಾನಗಳಲ್ಲಿ ತೀವ್ರ , ಅತಿರೇಕದ ಬದಲಾವಣೆಗಳು (ಅಂದರೆ, ಉದಾಹರಣೆಗೆ ಅತಿಯಾದ ಮಳೆ ಅಥವಾ ಮಳೆಯೇ ಇಲ್ಲದಿರುವಿಕೆ) ಆಗ ಬಹುದು ಎಂದು ಇನ್ನು ಕೆಲವು ಅಧ್ಯಯನಗಳು ಹೇಳುತ್ತವೆ.

ಮುನ್ಸೂಚನೆ ಮತ್ತು ಸಿದ್ಧತೆ: ವಾಯುಮಂಡಲದ ನದಿಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಮತ್ತು ಪೂರ್ವಸೂಚನೆಗಳು ಮುನ್ನೆಚ್ಚರಿಕೆ ನೀಡುವುದಕ್ಕೆ ಮತ್ತು ದುರಂತ ನಿರ್ವಹಣೆಗೆ ಸಿದ್ಧವಾಗಿರುವುದಕ್ಕೆ ತುಂಬಾ ಅಗತ್ಯ.

ಅಂತರರಾಷ್ಟ್ರೀಯ ಸಹಯೋಗ: ವಾಯುಮಂಡಲದ ನದಿಗಳು ಎಲ್ಲಾ ರೀತಿಯ ಗಡಿಗಳನ್ನು ಮೀರಿರುವುದರಿಂದ ಮತ್ತು ಅವು ಹಲವಾರು ದೇಶಗಳಲ್ಲಿ ಏಕಕಾಲಕ್ಕೆ ಪರಿಣಾಮ ಬೀರಬಹುದಾದುದರಿಂದ ಅವುಗಳ ಮೇಲೆ ನಿಗಾ ಇಡುವುದಕ್ಕೆ, ಸಂಶೋಧನೆ ನಡೆಸುವುದಕ್ಕೆ ಮತ್ತು ದುರಂತ ನಿರ್ವಹಣೆಯ ಕಾರ್ಯತಂತ್ರಗಳನ್ನು ರೂಪಿಸುವುದಕ್ಕೆ ಅಂತರರಾಷ್ಟ್ರೀಯ ಸಹಕಾರ ಬಹುಮುಖ್ಯ. ವಿಶ್ವ ಹವಾಮಾನ ಸಂಸ್ಥೆ ಭಾರೀ ಪರಿಣಾಮದ ಹವಾಮಾನ (High Imapct Weather-HIW) ಯೋಜನೆಯು ವಾಯುಮಂಡಲದ ನದಿಗಳ ಕುರಿತು ಎಲ್ಲಾ ದೇಶಗಳ ನಡುವೆ ಸಹಯೋಗ ಮತ್ತು ಮಾಹಿತಿ ಹಂಚಿಕೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.