2070ರ ವೇಳೆಗೆ ಶೂನ್ಯ ಹೊರಸೂಸುವಿಕೆಯ ಗುರಿ ಸಾಧಿಸಲು ಪಳೆಯುಳಿಕೆಯೇತರ ಇಂಧನಗಳ ಬಳಕೆ ಅವಶ್ಯಕ. ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಮತ್ತಷ್ಟು ಗ್ರಾಹಕಸ್ನೇಹಿಯಾಗಿಸಲು ಕೇಂದ್ರ ಸರಕಾರವು ಬ್ಯಾಟರಿ ವಿನಿಮಯ ಹೊಸ ನೀತಿ ತಂದಿದೆ.

ಏನಿದು ಹೊಸ ನೀತಿ?

ಈ ಬ್ಯಾಟರಿ ವಿನಿಮಯ ನೀತಿಯ ಉಪಕ್ರಮವು ಫೆಬ್ರುವರಿ 2022ರಲ್ಲಿ ನೀತಿ (NITI) ಆಯೋಗದಲ್ಲಿ ನಡೆದ ಚರ್ಚೆಯ ಫಲಶ್ರುತಿಯಾಗಿದ್ದು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ವಿನಿಮಯ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇವಿ) ಕಡೆಗೆ ಜನರ ಒಲವು ಹೆಚ್ಚಿಸುವ ಗುರಿಯನ್ನು ಹೊಂದಿದೆ.

l ಬ್ಯಾಟರಿ ವಿನಿಮಯ ಅಥವಾ ಬ್ಯಾಟರಿ ಸ್ವಾಪಿಂಗ್ ಎಂದರೇನು? ಮತ್ತು ಅದು ಸಾಂಪ್ರದಾಯಿಕವಾದ ಇವಿ ಬ್ಯಾಟರಿ ಚಾರ್ಜ್ ಮಾಡುವುದಕ್ಕಿಂತ ಹೇಗೆ ಭಿನ್ನ?

ಬ್ಯಾಟರಿ ವಿನಿಮಯವು ಸಾಂಪ್ರದಾಯಿಕ ಇವಿ ಬ್ಯಾಟರಿ ಚಾರ್ಜ್ ಮಾಡುವ ಪದ್ಧತಿಗಿಂತ ಹೆಚ್ಚು ಅನುಕೂಲಕರವಾಗಿದ್ದು ಶಕ್ತಿ ಮುಗಿದಿರುವ ಅಂದರೆ, ಡಿಸ್ಚಾರ್ಜ್ ಆಗಿರುವ ಬ್ಯಾಟರಿಯನ್ನು ಕೊಟ್ಟು ಚಾರ್ಜ್ ಆಗಿರುವ ಬ್ಯಾಟರಿಯನ್ನು ಪಡೆದುಕೊಳ್ಳುವುದೇ ಈ ವ್ಯವಸ್ಥೆಯ ಪ್ರಧಾನಅಂಶ.

l ಈ ಹೊಸ ವ್ಯವಸ್ಥೆಯಿಂದ ಯಾವೆಲ್ಲಾ ವಾಹನಗಳು ಅನುಕೂಲ ಪಡೆಯಲಿವೆ?

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಂತಹ ಚಿಕ್ಕ ಬ್ಯಾಟರಿ ಹೊಂದಿರುವ ವಾಹನಗಳು ಈ ಪದ್ಧತಿಯಿಂದ ಲಾಭ ಪಡೆಯುವ ನಿರೀಕ್ಷೆಯಿದೆ. ಯಾಕೆಂದರೆ ಈ ಬ್ಯಾಟರಿಗಳು ಹೆಚ್ಚು ದಕ್ಷವಾಗಿದ್ದು, ಅನುಕೂಲಕರವಾಗಿದೆ.

l ಭಾರತದಲ್ಲಿ ಬ್ಯಾಟರಿ ವಿನಿಮಯ ಪದ್ಧತಿ ಮತ್ತು ವ್ಯವಸ್ಥೆಗೆ ಉತ್ತೇಜನ ನೀಡಲು ನೀತಿ ಆಯೋಗವು ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ?

ನೀತಿ ಆಯೋಗವು ಈಗಿರುವ ‘ಫೇಮ್’(FAME- Faster Adoption and Manufacturing of Hybrid and Electric Vehicles) ಅಂದರೆ, ಹೈಬ್ರಿಡ್ ಮತ್ತು ವಿದ್ಯುತ್ ಚಾಲಿತ ವಾಹನಗಳ ತ್ವರಿತ ಹೊಂದಾಣಿಕೆ ಮತ್ತು ಉತ್ಪಾದನೆಗೆ ಸಂಬಂಧಿಸಿದ ಉಪಕ್ರಮ ಹಾಗೂ ಪಿಎಲ್‌ಐ (Production-Linked Incentive) ಅಂದರೆ, ಉತ್ಪಾದನೆ ಆಧರಿತ ಉತ್ತೇಜಕದಂಥ ಉಪಕ್ರಮಗಳನ್ನು ಒಳಗೊಂಡಿರುವ ಹೊಸ ರೂಪುರೇಷೆಗಳ ಚೌಕಟ್ಟನ್ನು ರೂಪಿಸಿದೆ.

l→ಯಾವೆಲ್ಲಾ ಹೆಚ್ಚಿನ ಅನುಕೂಲತೆಗಳು ಇವೆ ?

ಭಾರತದಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳ (battery swapping stations) ವಿಸ್ತರಣೆಯಿಂದ ಸಾಂಪ್ರದಾಯಿಕ ಚಾರ್ಜಿಂಗ್ ಪದ್ಧತಿಗೆ ಹೋಲಿಸಿದಾಗ ಅನೇಕ ಲಾಭಗಳಿವೆ. ಇದು ಸಮಯದ ಉಳಿತಾಯ ಮತ್ತು ಸ್ಥಳಾವಕಾಶವನ್ನು ಕಡಿಮೆ ಮಾಡುತ್ತದೆ, ಅಗ್ಗವೂ ಆಗಿದೆ. ‘ಸೇವೆಯಾಗಿ ಬ್ಯಾಟರಿ’(Battery As a Service) ಮುಂತಾದ ಪರಿಕಲ್ಪನೆಯೊಂದಿಗೆ ವಿನೂತನ ಉದ್ಯೋಗಶೀಲತೆಗೂ ಇದು ಉತ್ತೇಜನ ನೀಡುತ್ತದೆ. ಹೆಚ್ಚುವರಿಯಾಗಿ ದೂರದ ಪ್ರಯಾಣದ ಸಂದರ್ಭದಲ್ಲಿ ದಾರಿಯ ಮಧ್ಯೆ ಬ್ಯಾಟರಿ ಮುಗಿಯುವ ಆತಂಕವನ್ನು ದೂರಮಾಡುತ್ತದೆ. ಮಾತ್ರವಲ್ಲ, ವಿದ್ಯುತ್ ಚಾಲಿತ ವಾಣಿಜ್ಯ ವ್ಯವಹಾರಗಳ ವಾಹನಗಳು ಮತ್ತು ಗುಂಪು ವಾಹನಗಳಿಗೆ (pool) ಹೆಚ್ಚು ಕಾರ್ಯಸಾಧುವಾದ ಮತ್ತು ವಾಸ್ತವಿಕವಾದ ಬದಲಿ ವ್ಯವಸ್ಥೆಯನ್ನು ಒದಗಿಸುತ್ತದೆ.

ಸರಳವಾಗಿಹೇಳಬೇಕೆಂದರೆ, ನೀವು ಬ್ಯಾಟರಿ ಚಾರ್ಜ್ ಮಾಡಲು ಕಾಯಬೇಕೆಂದಿಲ್ಲ ಮತ್ತು ಯಾವಾಗ ಚಾರ್ಜ್ ಮುಗಿಯುತ್ತದೆ ಎಂದು ಆತಂಕದಿಂದ ಪ್ರಯಾಣಿಸಬೇಕೆಂದಿಲ್ಲ. ಪೆಟ್ರೋಲ್ ಪಂಪಿಗೆ ಹೋಗುವಂತೆಯೇ ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ಹೋಗಿ ಚಾರ್ಜ್ ಮುಗಿದ ಬ್ಯಾಟರಿ ನೀಡಿ, ಚಾರ್ಜ್ ಆದ ಬ್ಯಾಟರಿ ಸಿಕ್ಕಿಸಿಕೊಂಡು ಬರಬಹುದು. ಇದಕ್ಕೆ ನಿಗದಿತ ಸೇವಾಶುಲ್ಕ ನೀಡಬೇಕು ಅಷ್ಟೇ.

l→ನೀತಿಯ ಮುಖ್ಯ ಗುರಿಗಳೇನು? ಅದು ವಿದ್ಯುತ್ ಚಾಲಿತ ವಾಹನಗಳ ಉದ್ಯಮ ಮತ್ತು ಬಳಕೆಯನ್ನು ಹೇಗೆ ಪ್ರೋತ್ಸಾಹಿಸುತ್ತದೆ?

ಭಾರತದಲ್ಲಿ ಬ್ಯಾಟರಿ ವಿನಿಮಯ ನೀತಿಯು ಬ್ಯಾಟರಿ ಚಾರ್ಜ್ ಮಾಡುವ ಹಳೆಯ ಪದ್ಧತಿಯಲ್ಲಿ ಇರುವ ಆರಂಭಿಕ ವೆಚ್ಚಗಳು, ತಗಲುವ ಸಮಯ, ಚಾರ್ಜ್ ಮಾಡಲು ಬೇಕಾದ ಜಾಗ, ಪ್ರಯಾಣದ ವೇಳೆಯ ಆತಂಕಗಳು ಇತ್ಯಾದಿ ಆತಂಕಗಳನ್ನು ಕಡಿಮೆ ಮಾಡಬಲ್ಲ ವಿವಿಧ ತಂತ್ರಜ್ಞಾನಗಳು ಮತ್ತು ಹೊಸ ವ್ಯವಹಾರದ ಮಾದರಿಗಳ ಆನ್ವೇಷಣೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬೆಳವಣಿಗೆಯಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ.

ಬ್ಯಾಟರಿ ವಿನಿಮಯ ನೀತಿ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳ ಬಗ್ಗೆ ಸರಕಾರದ ಧೋರಣೆಯು ಹೆಚ್ಚಿನ ಚರ್ಚೆಗಳಿಗೆ ಒಳಗಾಗುತ್ತಿದ್ದು, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ (ಬಿಐಎಸ್- BIS- ಇದು ಗುಣಮಟ್ಟಗಳ ISI ಮಾನದಂಡಕ್ಕೆ ಬದಲಿ) ಅಂದರೆ ಭಾರತೀಯ ಗುಣಮಟ್ಟಗಳ ನಿರ್ಧಾರಕ ಸಂಸ್ಥೆ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮತ್ತು ಉಳಿದ ಹಿತಾಸಕ್ತಿದಾರರರು ಈ ಬಗ್ಗೆ ಹೆಚ್ಚಿನ ಚರ್ಚೆಯನ್ನು ನಡೆಸುತ್ತಿದ್ದಾರೆ.
.277 ಗ್ರೂಪ್–ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ KPSC.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.