‘ನಾನು ವೈದ್ಯನಾಗಬೇಕು, ರೋಗಿಗಳ ಸೇವೆ ಮಾಡಬೇಕು’ – ಈ ಆಸೆ ಮತ್ತು ಕನಸು ಪ್ರೌಢಶಾಲಾ ಹಂತದಲ್ಲಿ ಮಕ್ಕಳಲ್ಲಿ ಮೂಡುವುದು ಸಹಜ. ಆದರೆ ಬಯಸಿದ ಎಲ್ಲರಿಗೂ ವೈದ್ಯರಾಗುವ ಆಸೆ ಈಡೇರಲಾರದು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ವೈದ್ಯರೇ ಆಗಬೇಕೆಂದಿಲ್ಲ. ಈ ಕ್ಷೇತ್ರದಲ್ಲೇ ಕೆಲಸ ಮಾಡಲು ಹಂಬಲಿಸುವವರಿಗೆ ಪರ್ಯಾಯವಾಗಿ ವಿಪುಲ ಅವಕಾಶಗಳ ಆಗರವೇ ಇದೆ. ಹತ್ತನೇ ತರಗತಿ ನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿಸಬಹುದಾದ ಮತ್ತು ಕನಿಷ್ಠ ಖರ್ಚಿನಲ್ಲಿ ತರಬೇತಿ ಪಡೆಯಬಹುದಾದ ಅತ್ಯುತ್ತಮ ಅವಕಾಶ ಎಂದರೆ ಪ್ಯಾರಾಮೆಡಿಕಲ್ ಬೋರ್ಡ್ ನಡೆಸುವ ಡಿಪ್ಲೊಮಾ ಕೊರ್ಸ್ಗಳು.

ಕರ್ನಾಟಕದಲ್ಲಿರುವ ಪ್ಯಾರಾಮೆಡಿಕಲ್ ಬೋರ್ಡ್ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಸಾವಿರಾರು ವಿದ್ಯಾರ್ಥಿಗಳ ಅಗತ್ಯಗಳನ್ನು ಪೂರೈಸಲು ಪ್ರಮುಖವಾಗಿ ಒಂಬತ್ತು ಡಿಪ್ಲೊಮಾ ಕೋರ್ಸ್ಗಳನ್ನು ನಡೆಸುತ್ತಿದೆ. ಈ ಬೋರ್ಡ್ನ ಅಧೀನದಲ್ಲಿ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಹತ್ತನೇ ತರಗತಿ ಪಾಸಾದವರು ಈ ಡಿಪ್ಲೊಮಾ ಕೋರ್ಸ್ ತಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಪ್ರತಿ ಕೋರ್ಸ್ನ ಅವಧಿ ಮೂರು ವರ್ಷಗಳು; ಥಿಯರಿ ಮತ್ತು ಪ್ರಾಕ್ಟಿಕಲ್ ಸ್ವರೂಪದಲ್ಲಿರುತ್ತವೆ. ಪ್ರತಿ ವರ್ಷ ಜೂನ್ ಅಥವಾ ಜುಲೈನಲ್ಲಿ ಈ ಕೋರ್ಸ್ಗಳಿಗೆ ಪ್ರವೇಶಾವಕಾಶ ಇರುತ್ತದೆ. ಡಿಪ್ಲೊಮಾ ಮುಗಿಸಿದ ಮೇಲೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬಿ.ಎಸ್ಸಿ. ಪದವಿಯ ಉನ್ನತ ಶಿಕ್ಷಣ ಪಡೆಯಲು ಅವಕಾಶವಿದೆ.

ಪ್ಯಾರಾಮೆಡಿಕಲ್ ಮುಗಿಸಿದವರಿಗೆ ಹೆಚ್ಚಿನ ಉದ್ಯೋಗವಕಾಶಗಳು ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ಲಭ್ಯ. ನರ್ಸಿಂಗ್ ಹೋಂಗಳು, ಖಾಸಗಿ ಕ್ಲಿನಿಕ್ಗಳು, ಪುನರ್ವಸತಿ ಕೇಂದ್ರಗಳು, ಡೈಯಗ್ನಾಸ್ಟಿಕ್ ಸೆಂಟರ್ಗಳು, ವಿಶೇಷ ಚಿಕಿತ್ಸಾಕೇಂದ್ರಗಳು – ಹೀಗೆ ವಿವಿಧೆಡೆ ಉದ್ಯೋಗದ ಅವಕಾಶಗಳು ಲಭ್ಯ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಎಲ್ಲ ರಾಜ್ಯಗಳಲ್ಲೂ ಉದ್ಯೋಗಕ್ಕೆ ಅವಕಾಶವಿದೆ. ರಾಜ್ಯದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿನ ಸೀಟುಗಳ ಹಂಚಿಕೆಯನ್ನು ಅಭ್ಯರ್ಥಿಯು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮತ್ತು ಪ್ರವರ್ಗಗಳ ಆಧಾರದ ಮೇರೆಗೆ ಸೆಂಟ್ರಲ್ ಕೌನ್ಸಿಲಿಂಗ್ (ಬೆಂಗಳೂರಿನಲ್ಲಿ) ಮೂಲಕ ಮಾಡಲಾಗುವುದು.

ಪ್ಯಾರಾಮೆಡಿಕಲ್ ಬೋರ್ಡ್ ನೀಡುತ್ತಿರುವ ಡಿಪ್ಲೊಮಾ ಕೋರ್ಸ್ಗಳಲ್ಲಿ ಪ್ರಮುಖವಾದಂಥವು:
1. ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ (DMLT)
2. ಡಿಪ್ಲೊಮಾ ಇನ್ ಮೆಡಿಕಲ್ ಎಕ್ಸ್-ರೇ ಟೆಕ್ನಾಲಜಿ ( DMXT)
3. ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ (DHI)
4. ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ (DMRT)
5. ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ (DOTT)
6. ಡಿಪ್ಲೊಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ (DDT)
7. ಡಿಪ್ಲೊಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ (DOT)
8. ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ (DDM)
9. ಡಿಪ್ಲೊಮಾ ಇನ್ ಡೆಂಟಲ್ ಹೈಜೀನ್ (DDH)
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: www.pmbkarnataka.org

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.