ಗೆಳತಿ ಚಿತ್ರಾಳಿಗೆ ಯಾಕೋ ತನ್ನ ಇಬ್ಬರು ಮಕ್ಕಳ ಬೆಳವಣಿಗೆಯ ಪರಿ ತುಸು ಬೇಸರ ತಂದಿತ್ತು. ಮಗ ರವಿ ಆಗಲೇ ಹೈಸ್ಕೂಲ್ ಮೆಟ್ಟಿಲು ಹತ್ತಿದ್ದ. ಮಗಳು ಜ್ಯೋತಿ ಅವನಿಗಿಂತ ಒಂದು ವರ್ಷವಷ್ಟೇ ಚಿಕ್ಕವಳು. ಇಬ್ಬರಿಗೂ ಆ ವಯಸ್ಸಿಗೆ ಬರಬೇಕಾಗಿದ್ದ ಜವಾಬ್ದಾರಿ ಇನ್ನೂ ಬಂದಿರಲಿಲ್ಲ. ಪ್ರತಿಯೊಂದಕ್ಕೂ ಅವರು ತನ್ನನ್ನೇ ಅವಲಂಬಿಸುತ್ತಿದ್ದುದು ಚಿತ್ರಾಳಿಗೆ ಇತ್ತೀಚಿಗೆ ಸರಿ ಕಾಣುತ್ತಿರಲಿಲ್ಲ. ಶಾಲೆಯಿಂದ ಬಂದವರೇ ಯೂನಿಫಾರಂ ಮತ್ತು ಶೂಗಳನ್ನು ಕಳಚಿ ಎಲ್ಲೆಂದರಲ್ಲಿ ಒಗೆಯುತ್ತಿದ್ದರು.

ಬೆಳಿಗ್ಗೆ ಶಾಲೆಗೆ ಹೊರಡುವಾಗ ನೀರಿನ ಬಾಟಲಿಗೆ ನೀರನ್ನೂ ತಾನೇ ತುಂಬಬೇಕಾಗಿತ್ತು. ತಮ್ಮ ಪುಸ್ತಕಗಳನ್ನಾಲೀ, ಶಾಲೆಗೆ ಕೊಂಡೊಯ್ಯಬೇಕಾದ ಇತರ ವಸ್ತುಗಳನ್ನಾಗಲೀ ಅಚ್ಚುಕಟ್ಟಾಗಿ ಇಡುತ್ತಿರಲಿಲ್ಲ. ಅಲ್ಲದೆ, ಮನೆಯಲ್ಲಿ ತನಗಾಗಲಿ, ಅವರ ತಂದೆಗಾಗಲಿ ಯಾವುದೇ ಕೆಲಸಗಳಿಗೂ ಸಹಕರಿಸುತ್ತಿರಲಿಲ್ಲ. ತಾನು ಮಕ್ಕಳನ್ನು ಮೊದಲಿನಿಂದಲೂ ಆ ನಿಟ್ಟಿನಲ್ಲಿ ತಿದ್ದಲಿಲ್ಲವೇನೊ ಎಂಬ ತಪ್ಪಿತಸ್ಥ ಭಾವನೆಯೂ ಚಿತ್ರಾಳಿಗೆ ಒಮ್ಮೊಮ್ಮೆ ಕಾಡುತ್ತಿತ್ತು.

ಇಷ್ಟು ದಿನವೇನೋ ಮಕ್ಕಳು ಇನ್ನೂ ಸಣ್ಣವರು ಎಂಬ ಕಾರಣವಿತ್ತು. ಆದರೆ, ಈಗ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ, ಹೀಗೇಯೇ ಮುಂದುವರೆದರೆ ’ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ’ ಎಂಬಂತೆ ಮುಂದೆ ಅವರನ್ನು ತಿದ್ದುವುದು ಇನ್ನೂ ಕಷ್ಟವಾಗಬಹುದು ಎಂಬ ಆತಂಕವೂ ಶುರುವಾಗಿತ್ತು ಚಿತ್ರಾಳಿಗೆ. ಆ ಸಂದರ್ಭದಲ್ಲಿಯೇ ಚಿತ್ರಾ ಕಂಡುಕೊಂಡಿದ್ದು ಈ ಅಂಕಗಳ ಹೊಸ ತಂತ್ರ!

ಅಂದು ಮಕ್ಕಳಿಬ್ಬರನ್ನೂ ಕರೆದು ತನ್ನ ಈ ಹೊಸ ಯೋಜನೆಯ ಬಗ್ಗೆ ತಿಳಿಸಿದಳು. ’ಇಂದಿನಿಂದ ನಿಮ್ಮಿಬ್ಬರಿಗೂ ಶಾಲೆಯಲ್ಲಿ ಕೊಡುವ ಅಂಕಪಟ್ಟಿಯಂತೆಯೇ ಮನೆಯಲ್ಲಿಯೂ ಒಂದು ಅಂಕಪಟ್ಟಿಯನ್ನು ಇಡುತ್ತೇನೆ. ಅದರಲ್ಲಿ ನಿಮ್ಮ ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಂಡಾಗ ಐದು ಅಂಕಗಳನ್ನೂ ಹಾಗೂ ನನಗಾಗಲಿ, ಅಪ್ಪನಿಗಾಗಲಿ, ಅಜ್ಜ- ಅಜ್ಜಿಗಾಗಲಿ ಕೆಲಸದಲ್ಲಿ ಸಣ್ಣ ಪುಟ್ಟ ಸಹಾಯ ಮಾಡಿದಾಗ ಒಂದೊಂದು ಅಂಕಗಳನ್ನು ಕೊಡುತ್ತಾ ಹೋಗುತ್ತೇನೆ. ಈ ರೀತಿಯಲ್ಲಿ ನೀವು ಪಡೆದ ಅಂಕಗಳು ಐದು ನೂರು ತಲುಪಿದಾಗ ನಿಮಗಿಷ್ಟವಾದ ಹಾಗೂ ನನ್ನ ಹಣದ ಮಿತಿಯೊಳಗೆ ಬರುವ ಉಡುಗೊರೆಯೊಂದನ್ನು ಕೊಡಿಸುತ್ತೇನೆ.’

ಅಮ್ಮನ ಈ ಮಾತು ಮಕ್ಕಳಿಬ್ಬರಿಗೂ ಒಂದು ಬಗೆಯ ಕುತೂಹಲ ಮೂಡಿಸಿದ್ದಂತೂ ನಿಜ. ಅಷ್ಟೇ ಅಲ್ಲ, ಅಮ್ಮನ ಅಂಕಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕೆಂಬ ಆಶಯವನ್ನೂ ಹುಟ್ಟಿಸಿತು. ಬಹಳ ಖುಷಿಯಿಂದಲೇ ಮಕ್ಕಳಿಬ್ಬರೂ ಅಮ್ಮನ ಈ ಹೊಸ ಯೋಜನೆಗೆ ಒಪ್ಪಿದರು.

ಮರುದಿನದಿಂದಲೇ ಶುರುವಾಯಿತು ಮಕ್ಕಳಿಬ್ಬರು ಪಡೆದ ಅಂಕಗಳನ್ನು ಒಂದು ಪುಸ್ತಕದಲ್ಲಿ ದಾಖಲಿಸುವ ಪ್ರಕ್ರಿಯೆ! ಆ ಪುಸ್ತಕವು ಚಿತ್ರಾಳ ಬಳಿಯೇ ಇರುತ್ತಿತ್ತು. ಇಬ್ಬರಿಗೂ ಹೆಚ್ಚು ಅಂಕಗಳನ್ನು ತೆಗೆದು ಅಮ್ಮನಿಂದ ಉಡುಗೊರೆಯನ್ನು ಪಡೆಯಬೇಕೆಂಬ ಆಸೆ ಪ್ರಬಲವಾಗಿತ್ತು. ಹಾಗಾಗಿಯೇ, ಅಂದಿನಿಂದ ಮಕ್ಕಳಿಬ್ಬರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ದಿನದಿಂದ ದಿನಕ್ಕೆ ಮಕ್ಕಳಿಬ್ಬರೂ ಅವರ ಅನೇಕ ಕೆಲಸಗಳನ್ನು ಅವರವರೇ ಮಾಡಿಕೊಳ್ಳಲು ಕಲಿಯತೊಡಗಿದ್ದರು. ಇದು ಚಿತ್ರಾಳಿಗೆ ನಿಜಕ್ಕೂ ನೆಮ್ಮದಿ ತಂದಿತ್ತು.

ಹೌದು, ಮಕ್ಕಳು ಚಿಕ್ಕವರು ಎಂದು ಮುದ್ದಿನಿಂದ ಸಾಕುತ್ತಿರುತ್ತೇವೆ. ಆದರೆ, ಬೆಳೆಯುತ್ತಾ ಅವರು ವಯಸ್ಸಿಗೆ ತಕ್ಕಂತೆ, ತಮ್ಮ ಸಹಜ ಕೆಲಸಗಳನ್ನು ಕಲಿಯುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸಲು ಕೆಲವೊಮ್ಮೆ ಮರೆತು ಬಿಡುತ್ತೇವೆ. ಯಾವುದೋ ಒಂದು ದಿನ ಮಕ್ಕಳು ನಾವು ಹೇಳಿದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ನಿರಾಕರಿಸುವುದನ್ನು ಗಮನಿಸಿದಾಗ ಅಥವಾ ಮಕ್ಕಳು ನಮ್ಮ ಮಾತುಗಳನ್ನು ಮೀರಿ ಓದುವ ಸಮಯದಲ್ಲಿ ಟೀವಿ ನೋಡುವುದು ಹಾಗೂ ಮೊಬೈಲ್ ಬಳಸುವುದನ್ನು ಮಾಡಿದಾಗ ನಾವು ಪೋಷಕರಾಗಿ ಎಲ್ಲಿ ತಪ್ಪಿದ್ದೇವೆ ಎಂದು ಮನದಲ್ಲಿಯೇ ಯೋಚಿಸುತ್ತೇವೆ.

ಮನೆಯಲ್ಲಿನ ಹಿರಿಯರು ಮಕ್ಕಳನ್ನು ಕರೆದು ದಿನಪತ್ರಿಕೆ, ತಮ್ಮ ಕನ್ನಡಕ, ನೀರು... ಇತ್ಯಾದಿಗಳನ್ನು ತಂದು ಕೊಡಲು ಹೇಳಿದಾಗ ಅವರು ಯಾವುದೋ ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಮನೆಯ ಹತ್ತಿರದ ಅಂಗಡಿಗಳಿಂದ ಸಣ್ಣ ಪುಟ್ಟ ವಸ್ತುಗಳಾದ ಹಾಲು, ಕೊತ್ತಂಬರಿ ಸೊಪ್ಪು, ಎಲೆ ಮುಂತಾದವುಗಳನ್ನು ತರಲು ಹೇಳಿದಾಗಲೂ ಅದು ತಮ್ಮಿಂದಾಗದು ಎಂದು ಹೇಳುತ್ತಾರೆ. ಮನೆಯ ಮುಂದಿನ ಹೋದೋಟದಲ್ಲಿನ ಗಿಡಗಳಿಗೆ ನೀರುಣಿಸಲು ಹೇಳಿದಾಗ ಅದಕ್ಕೂ ತಕರಾರು ಮಾಡುತ್ತಾರೆ. ಅಷ್ಟೇ ಅಲ್ಲ, ಊಟ ಮಾಡುವಾಗ ತಟ್ಟೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಆಹಾರವನ್ನು ಹಾಕಿಸಿಕೊಂಡು ತಿನ್ನದೆಯೇ ವ್ಯರ್ಥ ಮಾಡುತ್ತಾರೆ.

ಪೋಷಕಾಂಶಗಳಿರುವ ತರಕಾರಿ ಪಲ್ಯಗಳನ್ನು ತಿನ್ನದೇ ಬಿಸಾಡುತ್ತಾರೆ. ಪ್ರತಿಭೆಯಿದ್ದರೂ ಶಾಲೆಯಲ್ಲಿನ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ನಿರಾಕರಿಸುತ್ತಾರೆ. ಸಂಗೀತ, ನೃತ್ಯ, ಚಿತ್ರಕಲೆ, ಕರಾಟೆ, ಚದುರಂಗ ಅಥವಾ ಇನ್ನಿತರ ಹೊರಾಂಗಣ ಆಟಗಳ ತರಬೇತಿ ಪಡೆಯಲು ಉದಾಸೀನ ಮಾಡುತ್ತಾರೆ. ಅವುಗಳ ಪ್ರಾಮುಖ್ಯವು ಪೋಷಕರಾದ ನಮಗೆ ತಿಳಿದಿರುತ್ತದೆ. ಆದರೆ ಮಕ್ಕಳಿಗೆ ಆ ವಯಸ್ಸಿನಲ್ಲಿ ಅದರ ಬಗ್ಗೆ ಅರಿವಿರುವುದಿಲ್ಲ. ಇಂತಹ ಹತ್ತು ಹಲವು ಸಂದರ್ಭಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲು ಈ ಅಂಕಗಳ ರೂಪದ ಉತ್ತೇಜನ ಖಂಡಿತ ಕೆಲಸ ಮಾಡುತ್ತದೆ.

ಈಗಿನ ಮಕ್ಕಳನ್ನು ತಿದ್ದಿ ತೀಡುವುದು ಸುಲಭದ ಕೆಲಸವಲ್ಲ. ಅಂತೆಯೇ ಎಲ್ಲಾ ಮಕ್ಕಳೂ ಒಂದೇ ತೆರನಾಗಿರುವುದೂ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ತಂತ್ರವು ಕೆಲಸ ಮಾಡುತ್ತದೆ. ಆದರೆ, ಸಾಕಷ್ಟು ಮಕ್ಕಳಲ್ಲಿ ಈ ಅಂಕಗಳ ತಂತ್ರವು ಉಪಯೋಗವಾಗಬಹುದು. ಮಕ್ಕಳ ಒಳ್ಳೆಯ ಕೆಲಸಗಳನ್ನು ಗುರುತಿಸಿ, ಪುರಸ್ಕರಿಸಿದಾಗ ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ, ಇದನ್ನು ಅಳವಡಿಸಲು ಪೋಷಕರಾದ ನಮಗೆ ತುಸು ತಾಳ್ಮೆ ಅಗತ್ಯ. ಮನೆಯಲ್ಲಿ ಇಬ್ಬರು ಮಕ್ಕಳಿದ್ದಾಗ ಇಬ್ಬರ ನಡುವೆ ಒಂದು ಬಗೆಯ ಆರೋಗ್ಯಕರ ಸ್ಪರ್ಧೆ ಬೆಳೆದು ಇಬ್ಬರೂ ಸುಧಾರಿಸುತ್ತಾರೆ. ಒಂದೇ ಮಗುವಿದ್ದ ಮನೆಯಲ್ಲಿ ಅಕ್ಕ ತಂಗಿಯರ, ಅಣ್ಣ ತಮ್ಮಂದಿರ ಮಕ್ಕಳನ್ನೂ ಈ ಅಂಕಗಳ ಆಟದಲ್ಲಿ ತೊಡಗಿಸಿಕೊಂಡು ಉತ್ತಮ ಪರಿಣಾಮವನ್ನು ಪಡೆಯುವುದು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.