PUC Exams 2023 | ಪರೀಕ್ಷೆ ದಿಕ್ಸೂಚಿ: ವಿಜ್ಞಾನ ಮಾದರಿ ಪ್ರಶ್ನೋತ್ತರ

I) ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಅದರ ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ
1) ಫ್ಲೆಮಿಂಗ್ ನ ಬಲಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು……………….
ಎ) ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಬಿ) ಕಾಂತ ಕ್ಷೇತ್ರದ ದಿಕ್ಕು
ಸಿ) ವಾಹಕದ ಚಲನೆಯ ದಿಕ್ಕು ಡಿ) ಯಾಂತ್ರಿಕ ಬಲದ ದಿಕ್ಕು
ಉತ್ತರ:- (ಎ) ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು

2) ಜೀವಿಯೊಂದು ತನ್ನ ಜೀವಿತ ಕಾಲದ ಅನುಭವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದಿಲ್ಲ. ಏಕೆಂದರೆ ಅವು………………….
ಎ) ಆನುವಂಶೀಯ ಗುಣ ಬಿ) ಗಳಿಸಿದ ಗುಣ
ಸಿ) ಪ್ರಬಲ ಗುಣ ಡಿ) ದುರ್ಬಲ ಗುಣ
ಉತ್ತರ:- (ಬಿ) ಗಳಿಸಿದ ಗುಣ

3) ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಬಳಸುವ ಸಾಧನ ………..….
ಎ) ಗ್ಯಾಲ್ವನೋ ಮೀಟರ್ ಬಿ) ವಿದ್ಯುತ್ ಜನಕ
ಸಿ) ಆಮ್ಮೀಟರ್ ಡಿ) ವಿದ್ಯುತ್ ಮೋಟಾರ್
ಉತ್ತರ:- (ಬಿ)ವಿದ್ಯುತ್ ಜನಕ

4) ಭ್ರೂಣವು ತಾಯಿಯ ರಕ್ತದಿಂದ ಪೋಷಣೆಯನ್ನು ಈ ವಿಶೆಷ ಭಾಗದ ಸಹಾಯದಿಂದ ಪಡೆಯುತ್ತದೆ
ಎ) ಅಂಡನಾಳ ಬಿ) ಆಂಡಾಶಯ
ಸಿ) ಗರ್ಭಕೋಶ ಡಿ) ಜರಾಯುPlacenta

ಉತ್ತರ:- (ಡಿ) ಜರಾಯು

5) ಮಾನವನ ಗಂಡು ಸಂತಾನೋತ್ಪತ್ತಿ ವ್ಯೂಹದಲ್ಲಿ ವೀರ್ಯಾಣು ಮತ್ತು ಮೂತ್ರಗಳೆರಡಕ್ಕೂ…………………. ಸಾಮಾನ್ಯ ಮಾರ್ಗವಾಗಿದೆ.
ಎ) ಮೂತ್ರ ವಿಸರ್ಜನಾ ನಾಳ ಬಿ) ಜಠರ ನಾಳ
ಸಿ) ವೀರ್ಯನಾಳ ಡಿ) ಮೂತ್ರಕೋಶ
ಉತ್ತರ:- (ಎ) ಮೂತ್ರ ವಿಸರ್ಜನಾ ನಾಳ

6) ಟರ್ಬೈನ್ಗಳನ್ನು ತಿರುಗಿಸಲು ನೇರವಾಗಿ ನೈಸರ್ಗಿಕ ಶಕ್ತಿ ಮೂಲವನ್ನು ಉಪಯೋಗಿಸುವ ವಿದ್ಯುಗಾರ …………..
ಎ) ಉಷ್ಣ ವಿದ್ಯುತ್ ಸ್ಥಾವರ
ಬಿ) ಜಲ ವಿದ್ಯುತ್ ಸ್ಥಾವರ
ಸಿ) ಪರಮಾಣು ವಿದ್ಯುತ್ ಸ್ಥಾವರ
ಡಿ) ಸೌರ ವಿದ್ಯುತ್ ಸ್ಥಾವರ
ಉತ್ತರ:- (ಬಿ) ಜಲ ವಿದ್ಯುತ್ ಸ್ಥಾವರ

7) ಒಂದು ಬೆಂಜೀನ್ ಅಣುವಿನ ರಚನೆಯಲ್ಲಿರುವ ಏಕಬಂಧಗಳು ಮತ್ತು ದ್ವೀಬಂಧವನ್ನು ಕ್ರಮವಾಗಿ ಬರೆಯಿರಿ
ಎ) 3 ಮತ್ತು 9 ಬಿ) 9 ಮತ್ತು 3
ಸಿ) 6 ಮತ್ತು 6 ಡಿ) 7 ಮತ್ತು 5
ಉತ್ತರ:- (ಬಿ) 9 ಮತ್ತು 3

8) ಪ್ರೋಪೇನ್ಯಾಲ್ನ ಅಣು ಸೂತ್ರ……………

ಉತ್ತರ:- (ಸಿ)

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
9) ಬೆಳಕಿನ ವಕ್ರೀಭವನದ ನಿಯಮಗಳನ್ನು ಬರೆಯಿರಿ
ಉತ್ತರ:-ಬೆಳಕಿನ ವಕ್ರೀಭವನದ ನಿಯಮಗಳು ಈ ಕೆಳಗಿನಂತಿವೆ. (1) ಪತನ ಕಿರಣ, ವಕ್ರೀಭವನ ಕಿರಣ ಮತ್ತು ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪತನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಒಂದೇ ಸಮತಲದಲ್ಲಿರುತ್ತದೆ. (2) ಕೊಟ್ಟಿರುವ ಬೆಳಕಿನ ನಿರ್ದಿಷ್ಟ ಬಣ್ಣ ಮತ್ತು ನೀಡಿರುವ ಜೋಡಿ ಮಾಧ್ಯಮಗಳಿಗೆ ಪತನಕೋನದ ಸೈನು ಮತ್ತು ವಕ್ರಿಮ ಕೋನದ ಸೈನುಗಳ ಅನುಪಾತ ಸ್ಥಿರವಾಗಿರುತ್ತದೆ. ಇದನ್ನು ಸ್ನೆಲ್ನ ವಕ್ರೀಭವನದ ನಿಯಮ ಎನ್ನುವರು

10) ಓಮ್ನ ನಿಯಮವನ್ನು ಬರೆಯಿರಿ
ಉತ್ತರ:- ಸ್ಥಿರವಾದ ತಾಪಮಾನದಲ್ಲಿ ವಿದ್ಯುತ್ ಮಂಡಲದಲ್ಲಿನ ಲೋಹದ ತಂತಿಯ ನಡುವಿನ ವಿಭವಾಂತರ ಗಿಯು ಅದರ ಮೂಲಕ ಹರಿಯುವ ವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿರುತ್ತದೆ

11) ವಾಹಕದ ರೋಧವು ಯಾವ ಅಂಶಗಳ ಮೇಲೆ ಅವಲಂಬಿತವಾಗಿದೆ, ಎಂಬುದನ್ನು ವಿವರಿಸಿ
ಉತ್ತರ:- ವಾಹಕದ ರೋಧವು ಈ ಕೆಳಗಿನ ಅಂಶಗಳ ಮೇಲೆ ಅವಲಂಬಿತವಾಗಿವೆ 1) ವಾಹಕದ ಉದ್ದ
2) ವಾಹಕದ ಅಡ್ಡ ಕೊಯ್ತು
3) ವಸ್ತುವಿನ ಪಾಕೃತಿಕ ಗುಣ 4) ತಾಪ

12) ಕೊನೆಯ ಬೆಂಚಿನಲ್ಲಿ ಕುಳಿತ್ತಿರುವ ವಿದ್ಯಾರ್ಥಿಯೊಬ್ಬ ಕಪ್ಪು ಹಲಗೆಯ ಬರಹವನ್ನು ಓದಲು ಕಷ್ಟಪಡುತ್ತಾನೆ. ಹಾಗಾದರೆ ಅವನಲ್ಲಿ ಯಾವ ದೃಷ್ಟಿದೋಷವಿದೆ? ಅದನ್ನು ಹೇಗೆ ಸರಿಪಡಿಸಬಹುದು?
ಉತ್ತರ:- ಆ ವಿದ್ಯಾರ್ಥಿಗೆ ಸಮೀಪ ದೃಷ್ಟಿ(ಮಯೋಪಿಯಾ) ದೋಷವಿದೆ.
ಸೂಕ್ತ ಸಾಮರ್ಥ್ಯದ ನಿಮ್ನ ದರ್ಪಣವನ್ನು ಉಪಯೋಗಿಸಿ ಈ ದೃಷ್ಟಿ ದೋಷವನ್ನು ನಿವಾರಿಸಬಹುದು.
ಅಥವಾ
ದೂರದೃಷ್ಟಿ ದೋಷಕ್ಕೆ ಕಾರಣಗಳನ್ನು ತಿಳಿಸಿ. ಅದನ್ನು ಹೇಗೆ ಪರಿಹರಿಸಿಕೊಳ್ಳಬಹುದು?
ಉತ್ತರ:- ದೂರದೃಷ್ಟಿ ದೋಷವುಂಟಾಗಲು ಕಾರಣ (i) ಕಣ್ಣಿನ ಮಸೂರದ ಸಂಗಮದೂರವು ಉದ್ದವಾಗಿರುವುದು ಅಥವಾ (ii) ಕಣ್ಣುಗುಡ್ಡೆಯು ಅತಿಚಿಕ್ಕದಾಗಿರುವುದು. ಈ ದೋಷವನ್ನು ಸೂಕ್ತ ಸಾಮರ್ಥ್ಯವುಳ್ಳ ಪೀನ ಮಸೂರದ ಸಹಾಯದಿಂದ ಸರಿಪಡಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.