ಪಣಜಿ: ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮನೋಹರ್ ಪರ್‍ರೀಕರ್ ಅವರ ಪುತ್ರ ಉತ್ಪಲ್ ಪರ್‍ರೀಕರ್ ಅವರು ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಕ್ಷೇತ್ರಕ್ಕೆ ಬೇರೆ ಹೆಸರುಗಳೂ ಚಾಲ್ತಿಯಲ್ಲಿವೆ ಎಂದು ಬಿಜೆಪಿ ಗುರುವಾರ ಹೇಳಿದೆ.

ಮನೋಹರ್ ಪರ್‍ರೀಕರ್ ಅವರ ನಿಧನದ ಬಳಿಕ ಈ ಸ್ಥಾನ ತೆರವಾಗಿದ್ದು, ಮೇ 19ರಂದು ಚುನಾವಣೆ ನಿಗದಿಯಾಗಿದೆ.

ಉಪಚುನಾವಣೆಗೆ ಬಿಜೆಪಿ ಸಜ್ಜಾಗಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ಶುರುವಾಗಲಿದೆ ಎಂದು ಗೋವಾ ಬಿಜೆಪಿ ವಕ್ತಾರ ದಾಮೋದರ್ ನಾಯ್ಕ್ ತಿಳಿಸಿದ್ದಾರೆ.

ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಪಕ್ಷದ ಚುನಾವಣಾ ಸಮಿತಿ ಹಾಗೂ ಸಂಸದೀಯ ಸಮಿತಿಗಳು ಅಂತಿಮ ನಿರ್ಧಾರ ಪ್ರಕಟಿಸಲಿವೆ ಎಂದು ಅವರು ಹೇಳಿದ್ದಾರೆ.

‘ಉತ್ಪಲ್ ಸೇರಿದಂತೆ ಇತರರ ಹೆಸರುಗಳೂ ಚರ್ಚೆಯಲ್ಲಿದ್ದು, ಸದ್ಯದಲ್ಲೇ ಪ್ರಕಟಿಸಲಾಗುತ್ತದೆ’ ಎಂದಿದ್ದಾರೆ.

ಕ್ಷೇತ್ರದಲ್ಲಿ ಸಂಪೂರ್ಣ ಸಮೀಕ್ಷೆ ನಡೆಸಿದ ಬಳಿಕ ಅಭ್ಯರ್ಥಿಯ ಗೆಲುವಿನ ಸಾಧ್ಯತೆ ಹಾಗೂ ಪಕ್ಷದ ಬಗ್ಗೆ ಅವರ ಬದ್ಧತೆಯನ್ನು ಪರಿಗಣಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಾರ್ಚ್ 17ರಂದು ಪರ‍್ರೀಕರ್ ನಿಧನರಾಗಿದ್ದರು. 1994ರಲ್ಲಿ ಅವರು ಮೊದಲ ಬಾರಿಗೆ ಜಯ ಗಳಿಸಿದ ಬಳಿಕ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿತ್ತು. 2014ರಲ್ಲಿ ಕೇಂದ್ರ ಸಚಿವರಾಗಿ ನಿಯುಕ್ತರಾದಾಗ ಇಲ್ಲಿ ಉಪಚುನಾವಣೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.