ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದಿಂದ ಬಿಜೆಪಿಯು ಕಣಕ್ಕಿಳಿಸಿದ ಬಳಿಕ ಈ ಕ್ಷೇತ್ರವು ಹೆಚ್ಚು ಗಮನ ಸೆಳೆದಿದೆ.

ಆಡಳಿತಾರೂಢ ಡಿಎಂಕೆಯು, ಅಣ್ಣಾಮಲೈ ಎದುರಾಳಿಯಾಗಿ ಗಣಪತಿ ಪಿ. ರಾಜಕುಮಾರ್ ಅವರನ್ನು ಅಖಾಡಕ್ಕಿಳಿಸಿದೆ. ವಿರೋಧಪಕ್ಷ ಎಐಎಡಿಎಂಕೆ, ತನ್ನ ಐ.ಟಿ ವಿಭಾಗದ ಮುಖ್ಯಸ್ಥ ಸಿಂಗೈ ಜಿ. ರಾಮಚಂದ್ರನ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಈ ಬಾರಿಯ ಸ್ಪರ್ಧೆಯು ಅಣ್ಣಾಮಲೈ ಮತ್ತು ಗಣಪತಿ ನಡುವಣ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಅಣ್ಣಾಮಲೈ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ಮಾಡಿ ಸೋತಿದ್ದರು.

ಈ ಬಾರಿ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವು ಪಕ್ಷಕ್ಕಿದೆ. 2020ರಲ್ಲಿ ಎಐಎಡಿಎಂಕೆ ತೊರೆದು ಡಿಎಂಕೆಗೆ ಸೇರ್ಪಡೆಗೊಂಡಿದ್ದ ಗಣಪತಿ ಅವರು ಎಐಎಡಿಎಂಕೆಯಲ್ಲಿದ್ದಾಗ ಕೊಯಮತ್ತೂರಿನ ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಈ ಕಾರಣಕ್ಕೆ ಕಣವು ಇನ್ನಷ್ಟು ರಂಗೇರಿದೆ.

ಎಐಎಡಿಎಂಕೆ ಮಾಜಿ ಶಾಸಕ ಸಿಂಗೈ ಗೋವಿಂದರಸು ಅವರ ಮಗ ಸಿಂಗೈ ರಾಮಚಂದ್ರನ್ ಅವರೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿಪಿಎಂನ ಪಿ.ಆರ್. ನಟರಾಜನ್ ಅವರು ಗೆದ್ದಿರುವ ಈ ಕ್ಷೇತ್ರದಲ್ಲಿ, ಎಡರಂಗ ಪರ ಮತಗಳು ನಿರ್ಣಾಯಕವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.