ಮಹಾರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಕೊಲ್ಹಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರಿಕೆಯಾಗಿದ್ದು, ಘಟಾನುಘಟಿಗಳ ಹಣಾಹಣಿಗೆ ಕಣ ಸಜ್ಜಾಗಿದೆ. ‘ಮಹಾ ವಿಕಾಸ್ ಆಘಾಡಿ’ಯು ಛತ್ರಪತಿ ಶಿವಾಜಿ ಮಹಾರಾಜ್ ವಂಶಸ್ಥರಾದ, ಕಾಂಗ್ರೆಸ್ನ ಶಾಹು ಛತ್ರಪತಿ ಮಹಾರಾಜ್ ಅವರನ್ನು ಅಖಾಡಕ್ಕಿಳಿಸಿದೆ. ಇವರನ್ನು ಮಣಿಸಲು ‘ಮಹಾಯುತಿ’ ಒಕ್ಕೂಟವು ಶಿವಸೇನಾದ ಏಕನಾಥ ಶಿಂದೆ ಬಣದ ಸಂಜಯ್ ಮಾಂಡಲಿಕ್ ಅವರನ್ನು ಕಣಕ್ಕಿಳಿಸಿದೆ. ಎನ್ಸಿಪಿ ಶರದ್ ಪವಾರ್ ಬಣವು ‘ಮಹಾ ವಿಕಾಸ್ ಆಘಾಡಿ’ಯ ಜೊತೆಗಿರುವುದರಿಂದ ಆ ಪಕ್ಷದ ಮತಗಳು ಶಾಹು ಅವರಿಗೆ ಸಿಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ಮುಖಂಡರದ್ದಾಗಿದೆ. 2019ರಲ್ಲಿ ಶಿವಸೇನಾದಿಂದ ಸ್ಪರ್ಧಿಸಿದ್ದ ಸಂಜಯ್ ಅವರು 2,70,568 ಮತಗಳ ಅಂತರದಿಂದ ಎನ್ಸಿಪಿಯ ಧನಂಜಯ ಮಹಾದಿಕ್ ಅವರನ್ನು ಪರಾಭವಗೊಳಿಸಿದ್ದರು. ಶಾಹು ಅವರು ಸಮಾಜ ಸುಧಾರಕ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಪ್ತರಾಗಿದ್ದ ರಾಜರ್ಷಿ ಛತ್ರಪತಿ ಶಾಹು ಮಹಾರಾಜ್ ಅವರ ಮೊಮ್ಮಗನಾಗಿದ್ದಾರೆ. 2014ರಲ್ಲಿ ಈ ಕ್ಷೇತ್ರದಿಂದ ಎನ್ಸಿಪಿಯ ಧನಂಜಯ ಮಹಾದಿಕ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಶಿವಸೇನಾ ಇಬ್ಭಾಗವಾಗಿರುವುದರಿಂದ ಈ ಬಾರಿ ಜನರು ಯಾವ ಅಭ್ಯರ್ಥಿಯ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.