ಮುಂಬೈ: ‘ನಿರಂಕುಶವಾದವು ದೇಶಕ್ಕೆ ಹಾನಿಕಾರಕ. ಹೀಗಾಗಿ ಸಮ್ಮಿಶ್ರ ಸರ್ಕಾರ ದೇಶಕ್ಕೆ ಅಗತ್ಯ. ಈ ಹಿಂದೆ ಈ ಪ್ರಯೋಗ ಉತ್ತಮ ಫಲ ನೀಡಿದೆ’ ಎಂದು ಶಿವಸೇನಾ (ಯುಬಿಟಿ)ದ ಮುಖ್ಯಸ್ಥ ಉದ್ಧವ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿರುವ ತಮ್ಮ ನಿವಾಸ ಮಾತೋಶ್ರೀಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಭಾರತೀಯ ಜನತಾ ಪಾರ್ಟಿ (ಬಿಜೆಪಿ), ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹಾಗೂ ವಂಚಿತ್ ಬಹುಜನ ಅಘಾಡಿ (ವಿಬಿಎ) ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷ ಸೇರಿದ್ದಾರೆ. ಕಳೆದ 10 ವರ್ಷಗಳಲ್ಲೇ ಮೊದಲ ಬಾರಿ ಇಂಥ ಘಟನೆ ನಡೆದಿದೆ. ಇದು ದೇಶದಲ್ಲಿರುವ ಅಸಮಾಧಾನಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದಿದ್ದಾರೆ.

‘ನಿರಂಕುಶ ಪ್ರಭುತ್ವ ದೇಶಕ್ಕೆ ಮಾರಕ. ದೇಶದಲ್ಲಿ ಸಮ್ಮಿಶ್ರ ಸರ್ಕಾರ ಇರಲೇಬಾರದು ಎಂಬ ಕಲ್ಪನೆಯೊಂದು ಮೊದಲು ಇತ್ತು. ಆದರೆ ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ ಸಿಂಗ್ ಅವರು ಸಮ್ಮಿಶ್ರ ಸರ್ಕಾರವನ್ನು ಉತ್ತಮವಾಗಿ ನಡೆಸಿದ್ದಾರೆ’ ಎಂದು ಹೇಳಿದ್ದಾರೆ.

‘ಕೆಲವೊಂದು ವಿಫಲ ಯತ್ನ ಹೊರತುಪಡಿಸಿದರೆ, ಸಮ್ಮಿಶ್ರ ಸರ್ಕಾರಗಳು ದೇಶದಲ್ಲಿ ಉತ್ತಮವಾಗಿ ಕೆಲಸ ಮಾಡಿವೆ. ಹೀಗಾಗಿ ಸದೃಢ ಸಮ್ಮಿಶ್ರ ಸರ್ಕಾರ ಮತ್ತು ದೇಶದ ಅಗತ್ಯವಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಒಬ್ಬ ಬಲಿಷ್ಠ ನಾಯಕ ಬೇಕಾಗಿದ್ದಾರೆ. ಇಂಡಿಯಾ ಒಕ್ಕೂಟವು ಸ್ಥಿರ ಸಮ್ಮಿಶ್ರ ಸರ್ಕಾರವನ್ನು ನೀಡಬಲ್ಲದು’ ಎಂದು ಉದ್ಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.