ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election 2024 | 6ನೇ ಹಂತ ಮುಕ್ತಾಯ: ಶೇ 58.82 ರಷ್ಟು ಮತದಾನ

Published 25 ಮೇ 2024, 1:41 IST
Last Updated 30 ಮೇ 2024, 13:16 IST
ಅಕ್ಷರ ಗಾತ್ರ
01:4125 May 2024
01:4125 May 2024

6ನೇ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ

ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನವು ಇಂದು ನಡೆಯುತ್ತಿದೆ. ಈ ಹಂತದಲ್ಲಿ ಒಟ್ಟು 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

01:4525 May 2024

ಕಳೆದ ಬಾರಿ ಕಾಂಗ್ರೆಸ್‌ ಒಂದೂ ಸ್ಥಾನ ಗೆದ್ದಿರಲಿಲ್ಲ

2019ರ ಲೋಕಸಭಾ ಚುನಾವಣೆಯಲ್ಲಿ ಈ 58 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಒಂದೂ ಸ್ಥಾನ ಗೆದ್ದಿರಲಿಲ್ಲ. ಆದರೆ ಈ ಬಾರಿ ದೆಹಲಿ, ಹರಿಯಾಣ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಬಿಜೆಪಿಯು ಕಳೆದ ಬಾರಿ 40 ಸ್ಥಾನಗಳನ್ನು ಜಯಿಸಿತ್ತು. ಎಸ್‌ಪಿ ಒಂದು ಸ್ಥಾನವನ್ನು ಗೆದ್ದಿತ್ತಾದರೂ, ಉಪ ಚುನಾವಣೆಯಲ್ಲಿ ಅದನ್ನು ಕಳೆದುಕೊಂಡಿತ್ತು.

01:4625 May 2024

ಕಣದಲ್ಲಿರುವ ಪ್ರಮುಖರು

ಮನೋಹರಲಾಲ್‌ ಖಟ್ಟರ್ (ಕರ್ನಾಲ್), ದೀಪೇಂದರ್‌ ಹೂಡಾ (ರೋಹ್ಟಕ್), ಮೇನಕಾ ಗಾಂಧಿ (ಸುಲ್ತಾನ್‌ಪುರ) ಮತ್ತು ಮೆಹಬೂಬಾ ಮುಫ್ತಿ (ಅನಂತನಾಗ್‌–ರಜೌರಿ) ಅವರು ಆರನೇ ಹಂತದಲ್ಲಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ.

01:4625 May 2024

ದೆಹಲಿಯ ಎಲ್ಲ ಏಳೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿಯು ಏಳೂ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಏಳನೇ ಹಾಗೂ ಕೊನೆಯ ಹಂತದ ಮತದಾನ ಜೂನ್‌ 1ರಂದು ನಡೆಯಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. 

01:5025 May 2024

ಮತ ಚಲಾಯಿಸಿದ ಮನೋಹರಲಾಲ್‌ ಖಟ್ಟರ್

01:5325 May 2024

ಮತದಾನ ಮಾಡಲು ಪ್ರಧಾನಿ ನರೇಂದ್ರ ಮೋದಿ ಮನವಿ

02:2425 May 2024

ಮತ ಚಲಾಯಿಸಿದ ಗೌತಮ್ ಗಂಭೀರ್

02:3825 May 2024

ಏಕತೆಗಾಗಿ ಮತ ಚಲಾಯಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ

02:4125 May 2024

ಎಸ್. ಜೈಶಂಕರ್ ಮತದಾನ