ಭಗವಾನ್ ಹನುಮಾನ್‌ಗೆ ಧನ್ಯವಾದ. ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕಿದೆ. ಈ ಹೋರಾಟದಲ್ಲಿ ಜನರು ಸಹಕಾರ ನೀಡಬೇಕು
-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ (ಜೈಲಿನಿಂದ ಹೊರಬಂದ ಬಳಿಕ)
ಅರವಿಂದ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಲಭಿಸಿರುವುದು ಖುಷಿ ತಂದಿದೆ. ಪ್ರಸಕ್ತ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬೆಳವಣಿಗೆ ಬಹಳ ಸಹಕಾರಿಯಾಗಲಿದೆ
–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿರುವುದನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದ ನಿಲುವು ದೃಢವಾಗಿರಲಿದೆ
–ಶರದ್ ಪವಾರ್, ಎನ್‌ಸಿಸಪಿ (ಶರದ್‌ಚಂದ್ರ ಪವಾರ್ ಬಣ)
ಪ್ರಜಾಪ್ರಭುತ್ವ ಉಳಿವಿಗಾಗಿ ನಡೆಸುತ್ತಿರುವ ಹೋರಾಟವನ್ನು ಈಗ ಮತ್ತಷ್ಟು ತೀವ್ರಗೊಳಿಸಲಾಗುವುದು. ಅರವಿಂದ ಕೇಜ್ರಿವಾಲ್ ಒಬ್ಬ ವ್ಯಕ್ತಿಯಲ್ಲ, ಅವರು ವಿಚಾರಧಾರೆ ಇದ್ದಂತೆ. ಇಂತಹ ವಿಚಾರಧಾರೆಯನ್ನು ದೊಡ್ಡ ಮಟ್ಟದಲ್ಲಿ ಜನರ ಬಳಿ ಒಯ್ಯುತ್ತೇವೆ